Saturday, 7 December 2019

ಹೆಂಡಿರನಾಳುವಳೀ ಕನ್ನಿಕೆ ಗಂಡನಿಲ್ಲದ ಹೆಂಗಸೀ purandara vittala HENDIRANAANUVALI KNNIKE GANDANILLADA HENGASI



ರಾಗ ಶಂಕರಾಭರಣ. ಅಟ ತಾಳ

ಹೆಂಡಿರನಾಳುವಳೀ ಕನ್ನಿಕೆ
ಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ||

ಮೇರು ಮಂದರವ ಕಡೆಗೋಲನೆ ಮಾಡಿ
ಉರಗ ವಾಸುಕಿ ನೇಣಮಾಡಿ
ಕ್ಷೀರಾಂಬುಧಿ ಸುರರಸುರರು ಮಥಿಸಲು
ಕೂರುಮ ರೂಪವ ಧರಿಸಿದ ಕನ್ನಿಕೆ ||

ಶಿಶುರೂಪ ತಾಳಿ ಆಲದೆಲೆಯ ಮೇಲೆ
ಆ ಸಮಯ ಜಲದೊಳು ಮಲಗಿಕೊಂಡು
ವಶವಾಗದ ಮುನ್ನ ಹೂವಿನ್ಹೊಕ್ಕಳಲ್ಲಿ
ಬಸಿರಿಂದ ಬೊಮ್ಮನ ಪಡೆದಾ ಕನ್ನಿಕೆ ||

ಪಟ್ಟಾವಳಿಯನುಟ್ಟು ಬೊಟ್ಟಾ ಕುಪ್ಪಸ ತೊಟ್ಟು
ಬೊಟ್ಟ ಗಿಂಡಿಯ ಕೈಲಿ ಪಿಡಿದುಕೊಂಡು
ದಿಟ್ಟ ಸ್ತ್ರೀ ರೂಪವ ತಾಳಿ ದೈತ್ಯರನೆಲ್ಲ
ಅಟ್ಟಹಾಸದಿ ಮೋಹಿಸಿದ ಕನ್ನಿಕೆ ||

ಅಂಥ ಇಂಥವನೆಂದು ಕೇಳುತ್ತ ಇರಲಾಗಿ
ಸಂತತ ಸುರರಿಗೆ ಅಮೃತವನು
ಪಂಕ್ತಿಯೊಳಗೆ ಅಳವಡಿಸದೆ ಬಡಿಸಿದ
ಎಂಥಾ ಸೊಬಗಿನ ಮೋಹದ ಕನ್ನಿಕೆ ||

ಬೇಗೆಗಣ್ಣನಿಗೆ ಬಿಸಿ ಕೈಯನಿಡಲು ಬರೆ
ಭೋಗದಾಸೆಯ ತೋರಿ ಬೂದಿ ಮಾಡ್ದ
ಭಾಗೀರತಿಯ ಪಿತ ಪುರಂದರವಿಠಲ
ಭೋಗಿ ಬೇಲೂರ ಚೆನ್ನಿಗ ಕನ್ನಿಕೆ ||
***


pallavi

heNDiranALuvaLi kannike gaNDanillada hengasI kannike

caraNam 1

mEru mantdarava kaDegOlana mADi uraga vASuki nENa mADi
kSIrAmbudhi surarasuraru mathisalu kUruma rUpava dharisida kannke

caraNam 2

shishu rUpa tALi Aladeleya mEle A samaya jaladoLu malagikoNDu
vashavAgada munna huvinhokkaLalli basirinda bommana paDedA kannike

caraNam 3

paTTAvaLiyanuTTu boTTA kuppasa toTTu boTTa giNDiya kaili piDidukoNDu
diTTa strI rUpava tALi daitayaranella aTTahAsadi mOhisida kannike

caraNam 4

antha inthavanendu kELutta iralAgi santata surarige amrtavanu
panktiyoLage aLavaDisade baDisida enthA sobagina mOhada kannike
bEga gaNNanige bisi kaiyaniDalu bare bhOgadAseya tOri bUdi mAade
bhAgIratiya pita purandara viTTala bhOgi bElura cenniga kannike
***

ಹೆಂಡಿರನಾಳುವಳೀ ಕನ್ನಿಕೆ |
ಗಂಡನಿಲ್ಲದ ಹೆಂಗುಸೀ ಕನ್ನಿಕೆ ಪ

ಅಂಥಿಂಥಿವಳೆಂದು ಅಳವಡಿಸಲು ಬೇಡ |ಇಂಥ ಸೊಬಗನಂತ ಏನೆಂಬೆನೊ ||ಸಂತತಸುರ - ದನುಜರಿಗೆ ಪ್ರಪಂಚದಿ |ಪಂಕ್ತಿಯೊಳಮೃತವ ಬಡಿಸಿದಳು 1

ಶಿಶುವು ಬೊಂಬೆಯ ತೋರ ಆಲದೆಲೆಯ ಮೇಲೆ |ಅಸುಮಯಜಲದಲಿ ಮಲಗಿ ಮೈಮರೆದಳು ||ಒಸಗೆಯಾಗದ ಮುನ್ನ ಹೊಕ್ಕುಳ ಹೂವಿನಲಿ |ಬಸುರಲಿ ಬೊಮ್ಮನ ಪಡೆದಳೀ ಕನ್ನಿಕೆ 2

ಬೇಗೆಗಣ್ಣವನಿಗೆ ಬಿಸಿಗೈ ತಾಗುವಾಗ |ಭೋಗದ ಸೊಗತೋರಿ ಬೂದಿಯ ಮಾಡಿ ||ಭಾಗೀರಥಿಯ ಪಿತ ಬೇಲೂರ ಚೆನ್ನಿಗ |ಯೋಗಿ ಪುರಂದರವಿಠಲನೆಂಬ3
******

No comments:

Post a Comment