ರಾಗ ಆನಂದಭೈರವಿ ಆದಿ ತಾಳ
ಮೊಸರ ಸುರಿದು ಓಡುವ, ಈ ಮಾಯದ
ಶಿಶುವ ತೋರಿಸು ಎನಗೆ
ಹುಸಿಯನಾಡುವುದೇಕೆ ರಂಗಗೆ
ಮೊಸರೆಂಬ ಪೆಸರು ಪೇಳಿದರಾಗದು, ಅಮ್ಮಯ್ಯ || ಪ||
ಮಂದಿರವನ್ನು ದಾಟಿ ನಮ್ಮ ರಂಗ
ಬಂದುದುಂಟೇನೆ ಎಂದು
ಹಿಂದುಮುಂದರಿಯದೆ ದೂರಬಾರದು ನಮ್ಮ
ಕಂದ ಗೋವಳರಾಯನ ||
ಬೆಣ್ಣೆಯನಿಕ್ಕಿದರೆ ನಮ್ಮ ರಂಗ
ಉಣಲೊಲ್ಲನಾ ದಿನಕೆ
ಸಣ್ಣವನೆಂದು ಸಟೆಯ ಪೇಳಿದರೆ
ಪುಣ್ಯಪಾಪಗಳಿಲ್ಲವೆ ||
ಕೆನೆಹಾಲು ಕೊಳ್ಳೆಂದರೆ ನಮ್ಮ ರಂಗ
ಮುನಿದು ಹಾರುವನು ಕಾಣೆ
ಮನೆ ಮನೆಗಳ ಪೊಕ್ಕು ಕದ್ದನೆಂದರೆ ನಮ್ಮ
ಮನಕೆ ಸೋಜಿಗವಲ್ಲವೆ ||
ಆರಿಗೂ ಮಕ್ಕಳಲ್ಲೆ ನಮ್ಮ ರಂಗ
ಓರ್ವನೆ ಸರಿಯೆಂದರೆ
ಆರ ಮಕ್ಕಳು ಹೋದರನ್ಯಾಯದಲಿ
ದೂರಬಾರದು ಬಲ್ಲಿರೆ ||
ಅತ್ತಿತ್ತ ಹೋಗಲಿಲ್ಲ, ರಂಗಯ್ಯಗೆ
ಅಪವಾದ ಬಂದಿತಲ್ಲ
ನಿತ್ಯದಿ ಮಧುಸೂದನನ ಕಂಡರೆಲ್ಲ
ಸತ್ಯದಿ ಹೇಳೆನಗೆ ||
ಕಂತುಪಿತನ ನಾಮವ ಕೇಳೆಲೆ ಗೋಪಿ
ಅಂತರಂಗದಿ ನೆನೆದು
ಎಂಥವನಾದರು ದೇವ ಕುಲೋತ್ತಮ
ಅಂಥವನಲ್ಲ ಕಾಣೆ ||
ಹೊತ್ತು ಕಳೆಯುವುದೇಕೆ, ನಿಮಗೆಲ್ಲ
ಅತ್ತೆ ಮಾವಂದಿರಿಲ್ಲೆ
ಪಥ್ಯವಾಗಿದೆ ನಿಮ್ಮ ಮನಸಿಗೆ, ಬಲರಾಮ-
ಕೃಷ್ಣರ ನೋಡುವೋದು ||
ಕಾಣದೆ ಇರಲಾರಿರೆ ನಮ್ಮ ಮುಖ್ಯ-
ಪ್ರಾಣವಲ್ಲಭ ರಂಗನ
ಜಾಣತನವ ಬಿಟ್ಟು ಕಾಣಿಸು ಬೇಗದಿ
ಪ್ರಾಣ ಗೋವಳರಾಯನ ||
ಚಂದವಾಯಿತು ಗೋಪ್ಯಮ್ಮ, ನೀನೊಬ್ಬಳೆ
ಕಂದನ ಪಡೆದೆಯಮ್ಮ
ಮಂದಿರದಲ್ಲಿದ್ದ ಪುರಂದರವಿಠಲನ್ನ
ತಂದೊಮ್ಮೆ ತೋರೆಮಗೆ ಗೋಪ್ಯಮ್ಮ ||
***
ಮೊಸರ ಸುರಿದು ಓಡುವ, ಈ ಮಾಯದ
ಶಿಶುವ ತೋರಿಸು ಎನಗೆ
ಹುಸಿಯನಾಡುವುದೇಕೆ ರಂಗಗೆ
ಮೊಸರೆಂಬ ಪೆಸರು ಪೇಳಿದರಾಗದು, ಅಮ್ಮಯ್ಯ || ಪ||
ಮಂದಿರವನ್ನು ದಾಟಿ ನಮ್ಮ ರಂಗ
ಬಂದುದುಂಟೇನೆ ಎಂದು
ಹಿಂದುಮುಂದರಿಯದೆ ದೂರಬಾರದು ನಮ್ಮ
ಕಂದ ಗೋವಳರಾಯನ ||
ಬೆಣ್ಣೆಯನಿಕ್ಕಿದರೆ ನಮ್ಮ ರಂಗ
ಉಣಲೊಲ್ಲನಾ ದಿನಕೆ
ಸಣ್ಣವನೆಂದು ಸಟೆಯ ಪೇಳಿದರೆ
ಪುಣ್ಯಪಾಪಗಳಿಲ್ಲವೆ ||
ಕೆನೆಹಾಲು ಕೊಳ್ಳೆಂದರೆ ನಮ್ಮ ರಂಗ
ಮುನಿದು ಹಾರುವನು ಕಾಣೆ
ಮನೆ ಮನೆಗಳ ಪೊಕ್ಕು ಕದ್ದನೆಂದರೆ ನಮ್ಮ
ಮನಕೆ ಸೋಜಿಗವಲ್ಲವೆ ||
ಆರಿಗೂ ಮಕ್ಕಳಲ್ಲೆ ನಮ್ಮ ರಂಗ
ಓರ್ವನೆ ಸರಿಯೆಂದರೆ
ಆರ ಮಕ್ಕಳು ಹೋದರನ್ಯಾಯದಲಿ
ದೂರಬಾರದು ಬಲ್ಲಿರೆ ||
ಅತ್ತಿತ್ತ ಹೋಗಲಿಲ್ಲ, ರಂಗಯ್ಯಗೆ
ಅಪವಾದ ಬಂದಿತಲ್ಲ
ನಿತ್ಯದಿ ಮಧುಸೂದನನ ಕಂಡರೆಲ್ಲ
ಸತ್ಯದಿ ಹೇಳೆನಗೆ ||
ಕಂತುಪಿತನ ನಾಮವ ಕೇಳೆಲೆ ಗೋಪಿ
ಅಂತರಂಗದಿ ನೆನೆದು
ಎಂಥವನಾದರು ದೇವ ಕುಲೋತ್ತಮ
ಅಂಥವನಲ್ಲ ಕಾಣೆ ||
ಹೊತ್ತು ಕಳೆಯುವುದೇಕೆ, ನಿಮಗೆಲ್ಲ
ಅತ್ತೆ ಮಾವಂದಿರಿಲ್ಲೆ
ಪಥ್ಯವಾಗಿದೆ ನಿಮ್ಮ ಮನಸಿಗೆ, ಬಲರಾಮ-
ಕೃಷ್ಣರ ನೋಡುವೋದು ||
ಕಾಣದೆ ಇರಲಾರಿರೆ ನಮ್ಮ ಮುಖ್ಯ-
ಪ್ರಾಣವಲ್ಲಭ ರಂಗನ
ಜಾಣತನವ ಬಿಟ್ಟು ಕಾಣಿಸು ಬೇಗದಿ
ಪ್ರಾಣ ಗೋವಳರಾಯನ ||
ಚಂದವಾಯಿತು ಗೋಪ್ಯಮ್ಮ, ನೀನೊಬ್ಬಳೆ
ಕಂದನ ಪಡೆದೆಯಮ್ಮ
ಮಂದಿರದಲ್ಲಿದ್ದ ಪುರಂದರವಿಠಲನ್ನ
ತಂದೊಮ್ಮೆ ತೋರೆಮಗೆ ಗೋಪ್ಯಮ್ಮ ||
***
pallavi
mosara suridu Oduva I mAyada shishuva tOrisa enage husiyanADuvudEke rangage mosaremba pesaru pELidarAgadu ammayya
caraNam 1
mandiravannu dATi namma ranga banduduNTEne endu
hindu mundariyade dUra bAradu namma gOvaLa rAyana
caraNam 2
beNNeyanikkidare namma ranga uNalollanAdinake
saNNavanendu saDeya pELidare puNya pApagaLillave
caraNam 3
kenehAlu koLLendare namma ranga munidu hAruvanu kANe
mane manegaLa pokku kaddanendare namma manege sOjigavallave
caraNam 4
ArigU makkaLalle namma ranga Orvane sariyendare
Ara makkaLu hOdaranyAyadali dUra bhAradu ballire
caraNam 5
attitta hOgalilla rangayyage apavAda bandilla
nityadi madhusUdanana kaNDarella satyadi hELenage
caraNam 6
kantupitana nAmava kELele gOpi antarangadi nenedu
endavanAdaru dEva kulOttama andavanalla kANe
caraNam 7
hottu kaLeyuvudEke nimagella atte mAvandirille
padhyavAgide namma manasige balarAma krSNara nODuvOdu
caraNam 8
kANade iralArire namma mukhya prANa vallabha rangana
jANatanava biTTU kANisu bEgadi prANa gOvaLa rAyana
caraNam 9
candavAyidu gOpyamma nInobbaLe kandana paDedeyamma
mandiradallidda purandara viTTalanna tandomme tOremage gOpyamma
***
No comments:
Post a Comment