ಶ್ರೀಕಾಂತ ಎನಗಿಷ್ಟು ದಯಮಾಡೊ ತಂದೆ
ಏಕಾಂತದಲಿ ನಿನ್ನ ಭಜಿಸುವ ಸೌಭಾಗ್ಯ ||ಪ||
ಧನದಾಸೆಗಾಗಿ ನಾ ಧನಿಕರ ಮನೆಗಳ
ಕೊನೆ ಬಾಗಿಲಲಿ ನಿಂದು ತೊಳಲಿ ಬಳಲಿದೆನೊ ||
ದೇಹಾಭಿಮಾನದಿಂದ ವಿಹಿತ ಧರ್ಮವ ತೊರೆದು
ಸ್ನೇಹಾನುಬದ್ಧನಾಗಿ ಸತಿ ಸುತರ ಪೊರೆದೆನೊ ||
ಏನಾದರೇನೆನ್ನ ಹೀನಗುಣಗಳನೆಲ್ಲ
ಮನ್ನಿಸಿ ಸಲಹೋ ಶ್ರೀಪುರಂದರವಿಠಲ ||
***
ರಾಗ ಕಾನಡಾ ಅಟತಾಳ (raga tala may differ in audio)
pallavi
shrIkAnta enagiSTu dayamADo tande EkAntadali ninna bhajisuva saubhAgya
caraNam 1
dhanadAsegAginA dhanikara manegaLa kone bAgilali nindu toLali baLalideno
caraNam 2
dEhAbhimAnadinda vihita dharmava toredu snEhAnubaddhanAgi sati sutara poredeLo
caraNam 3
EnAdarEnenna hIna guNagaLanella manisi salahO shrI purandara viTTala
***
No comments:
Post a Comment