Friday 3 December 2021

ಎರಡೂ ಒಂದಾಗದು ರಂಗ ಎರಡು ಒಂದಾಗದು purandara vittala ERADU ONDAAGADU RANGA ERADU ONDAAGADU



ಎರಡು ಒಂದಾಗದು ರಂಗ ||ಪ||

ಎರಡು ಒಂದಾಗದು ಎಂದೆಂದಿಗೂ ರಂಗ || ಅ.ಪ ||

ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು | ಒಂದೇ ಗೂಡಿನಲ್ಲಿ ಇರುತಿಹವು ||
ಒಂದು ಪಕ್ಷಿ ಫಲಂಗಳನುಂಬುದು | ಮತ್ತೊಂದು ಫಲಂಗಳ ಉಣ್ಣದು ರಂಗ ||೧||

ಹಲವು ಕೊಂಬೆಗೆ ಒಂದು ಹಾರಿತು | ಒಂದು ಹಲವು ಕೊಂಬೆಗೆ ಹಾರಲರಿಯದು ||
ಹಲವನ್ನೆಲ್ಲ ಒಂದು ಬಲ್ಲುದು | ಒಂದು ಹಲವನ್ನೆಲ್ಲವ ಅರಿಯದು ರಂಗ ||೨||

ನೂರೆಂಟು ಕೊಂಬೆಗೆ ಹಾರಿತು | ಅದು ಹಾರಿ ಮೇಲಕ್ಕೇರಿ ಮೀರಿತು ||
ಮೀರಿ ಪುರಂದರ ವಿಠಲ | ನಿಮ್ಮನು ಸೇರಿ ಸುಖಿಯಾಗಿ ನಿಂತಿತು ರಂಗ ||೩||
***

eraDu oMdaagadu raMga ||pa||
eraDu oMdaagadu eMdeMdigU raMga ||a.pa||

oMdu vRukShadalli eraDu pakShigaLu | oMdE gUDinalli irutihavu ||
oMdu pakShi PalaMgaLanuMbudu | mattoMdu PalaMgaLa uNNadu raMga ||1||

halavu koMbegE oMdu haaritu | oMdu halavu koMbege haaralariyadu ||
Halavannella oMdu balludu | oMdu halavannellava ariyadu raMga ||2||

nUreMTu koMbege haaritu | adu haari mElakkEri mIritu ||
mIri puraMdara viThala | nimmanu sEri suKiyaagi niMtitu raMga ||3||
***

pallavi

eraDu ondAgadu ranga

anupallavi

eraDu ondAgadu endendigu ranga

caraNam 1

ondu vrSadalli eraDu pakSigaLu onde gUDinalli irutihavu
ondu pakSi palagaLanumbudu mattondu balangaLanuNNadu ranga

caraNam 2

halavu kombege ondu hAritu ondu halavu kombege hAralaiyadu
halavanella ondu balludu ondu halavanella ariyadu ranga

caraNam 3

nooreNDu kombege hAritu adu hAri mElakkEri mIritu
mIri purandara viTTala nimmanu sEri sukhiyAgi nintidu ranga
***


ರಾಗ ಶ್ರೀ. ಅಟ ತಾಳ (raga tala may differ in audio)

ಎರಡೂ ಒಂದಾಗದು ರಂಗ ||ಪ||

ಎರಡೂ ಒಂದಾಗದು ಎಂದೆಂದಿಗು ರಂಗ ||ಅ||

ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು
ಒಂದೆ ಗೂಡಿನಲ್ಲಿ ಇರುತಿಹವು
ಒಂದು ಪಕ್ಷಿ ಫಲಗಳನುಂಬುದು ಮ-
ತ್ತೊಂದು ಫಲಂಗಳನುಣ್ಣದು ರಂಗ ||

ಹಲವು ಕೊಂಬೆಗೆ ಒಂದು ಹಾರಿತು , ಒಂದು
ಹಲವು ಕೊಂಬೆಗೆ ಹಾರಲರಿಯದು
ಹಲವನೆಲ್ಲ ಒಂದು ಬಲ್ಲುದು, ಒಂದು
ಹಲವನೆಲ್ಲ ಅರಿಯದು ರಂಗ ||

ನೂರೆಂಟು ಕೊಂಬೆಗೆ ಹಾರಿತು ಅದು
ಹಾರಿ ಮೇಲಕ್ಕೇರಿ ಮೀರಿತು
ಮೀರಿ ಪುರಂದರವಿಟ್ಠಲ ನಿಮ್ಮನು
ಸೇರಿ ಸುಖಿಯಾಗಿ ನಿಂತಿದು ರಂಗ ||
*******

No comments:

Post a Comment