Friday, 3 December 2021

ಇಷ್ಟು ಪಾಪವನು ಮಾಡಿದುದೆ ಸಾಕೊ purandara vittala ISHTU PAAPAVANU MAADIDUDE SAKO



ಇಷ್ಟು ಪಾಪವ ಮಾಡಿದ್ದೆ ಸಾಕು ||ಪ|| (ಇಷ್ಟು ಪಾಪಗಳ ಮಾಡಿದ್ದೆ ಸಾಕು)

ಸೃಷ್ಟೀಶನೆ ಎನ್ನ ಉದ್ಧರಿಸಬೇಕು ||ಅ||

ಒಡಲ ಕಿಚ್ಚಿಗೆ ಪರರ ಕಡುನೋಯಿಸಿದೆ
ಕೊಡದೆ ಅನ್ಯರ ಋಣವನಪಹರಿಸಿದೆ
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ
ಹಡೆದ ತಾಯಿಯ ಕೂಡೆ ಹಗೆ ಮಾಡಿದೆ ||

ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ
ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ
ಏನ ಹೇಳಲಿ ಪರರ ನಾರಿಗೆ ಮನಸಿಟ್ಟೆ
ಶ್ವಾನಸೂಕರನಂತೆ ಹೊರೆದೆ ಹೊಟ್ಟೆ ||

ವ್ರತನೇಮ ಉಪವಾಸ ಒಂದು ದಿನ ಮಾಡಲಿಲ್ಲ
ಅತಿಥಿಗಳಿಗನ್ನವನು ನೀಡಲಿಲ್ಲ
ಶ್ರುತಿಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ
ವೃಥವಾಗಿ ಬಹುಕಾಲ ಗತವಾಯಿತಲ್ಲ ||

ಶುದ್ಧವೈಷ್ಣವಕುಲದಲುದ್ಭವಿಸಿದೆ ನಾನು
ಮಧ್ವಮತಸಿದ್ಧಾಂತಪದ್ಧತಿಗಳ
ಬುದ್ಧಿಪೂರ್ವಕ ತಿಳಿದು ಕದ್ದುಂಡು ಕಾಯವನು
ವೃದ್ಧಿಮಾಡಿದೆನಯ್ಯ ಉದ್ಧರಿಸು ಹರಿಯೆ ||

ತಂದೆತಾಯಿಯ ಸೇವೆಯೊಂದು ದಿನ ಮಾಡಲಿಲ್ಲ
ಮಂದಭಾಗ್ಯಗೆ ಬವಣೆ ತಪ್ಪಲಿಲ್ಲ
ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ
ತಂದೆ ಪುರಂದರವಿಠಲ ಬಂದೆನ್ನ ಸಲಹೊ ||
***

ರಾಗ ಕಾಂಭೋಜ ಝಂಪೆ ತಾಳ (raga tala may differ in audio)

pallavi

isTu pApava mADidde sAku

anupallavi

shrsTIshane ennanuddharisa bEku

caraNam 1

oDale kiccige parara kaDu nOyisida krSNa koDade anyara ruNavanapahariside
maDadiya nuDi kELi oDahuTTIdavaroDane haDede tAyiya kUDe hage mADide

caraNam 2

snAna sandhyAdigaLa mADadale mai geTTe jnAna mArgavanandu modale biTTe Ena
pErali parara mAninige manasiTTe svAna sukaranante horede hoTTe

caraNam 3

vrata nEma upavAsavondu dina mADilla atithigaLigannavanu nIDalilla
shruti sAstra paurALa kathegaLanu kELilla vrtavAgi bahu kAla gatavAyitalla

caraNam 4

shuddha vaiSNava kuladludbhavaside nAnu madhva mata siddhAnta paddhatigaLa
buddhi pUrvaka tiLidu kadduNDu kAyuvenu vrtti mADidenayya uddharisu hariye

caraNam 5

tande tAyiya sEveyondu dina mADilla manda bhAgyage bhavaNe tapphalilla
hinde mADida dOSa onduLiya daruhideno tande purandara viTTala bandenna salaho
***


ಪುರಂದರದಾಸರು
ರಾಗ ಕಾಂಭೋಜ ಝಂಪೆ ತಾಳ 

ಇಷ್ಟು ಪಾಪವ ಮಾಡಿದ್ದೆ ಸಾಕು ||ಪ||

ಸೃಷ್ಟೀಶನೆ ಎನ್ನ ಉದ್ಧರಿಸಬೇಕು ||ಅ||

ಒಡಲ ಕಿಚ್ಚಿಗೆ ಪರರ ಕಡುನೋಯಿಸಿದೆ
ಕೊಡದೆ ಅನ್ಯರ ಋಣವನಪಹರಿಸಿದೆ
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ
ಹಡೆದ ತಾಯಿಯ ಕೂಡೆ ಹಗೆ ಮಾಡಿದೆ ||

ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ
ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ
ಏನ ಹೇಳಲಿ ಪರರ ನಾರಿಗೆ ಮನಸಿಟ್ಟೆ
ಶ್ವಾನಸೂಕರನಂತೆ ಹೊರೆದೆ ಹೊಟ್ಟೆ ||

ವ್ರತನೇಮ ಉಪವಾಸ ಒಂದು ದಿನ ಮಾಡಲಿಲ್ಲ
ಅತಿಥಿಗಳಿಗನ್ನವನು ನೀಡಲಿಲ್ಲ
ಶ್ರುತಿಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ
ವೃಥವಾಗಿ ಬಹುಕಾಲ ಗತವಾಯಿತಲ್ಲ ||

ಶುದ್ಧವೈಷ್ಣವಕುಲದಲುದ್ಭವಿಸಿದೆ ನಾನು
ಮಧ್ವಮತಸಿದ್ಧಾಂತಪದ್ಧತಿಗಳ
ಬುದ್ಧಿಪೂರ್ವಕ ತಿಳಿದು ಕದ್ದುಂಡು ಕಾಯವನು
ವೃದ್ಧಿಮಾಡಿದೆನಯ್ಯ ಉದ್ಧರಿಸು ಹರಿಯೆ ||

ತಂದೆತಾಯಿಯ ಸೇವೆಯೊಂದು ದಿನ ಮಾಡಲಿಲ್ಲ
ಮಂದಭಾಗ್ಯಗೆ ಬವಣೆ ತಪ್ಪಲಿಲ್ಲ
ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ
ತಂದೆ ಪುರಂದರವಿಠಲ ಬಂದೆನ್ನ ಸಲಹೊ ||
*********


ಇಷ್ಟು ಪಾಪವನು ಮಾಡಿದುದೆ ಸಾಕೊ |
ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪ

ಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |ಕೊಡದೆ ಅನ್ಯರ ಋಣವನಪಹರಿಸಿದೆ |ಮಡದಿಯ ನುಡಿಕೇಳಿಒಡಹುಟ್ಟಿದವರೊಡನೆ |ಹಡೆದ ತಾಯಿಯ ಕೂಡಹಗೆಮಾಡಿದೆ1

ಸ್ನಾನಸಂಧ್ಯಾನಜಪ ಮಾಡದಲೆ ಮೈಗೆಟ್ಟೆ |ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |ಶ್ವಾನ- ಸೂಕರನಂತೆ ಹೊರೆದೆ ಹೊಟ್ಟೆ2

ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |ಅತಿಥಿಗಳಿಗನ್ನವನು ನೀಡಲಿಲ್ಲ |ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |ವೃಥವಾಗಿ ಬಹುಕಾಲ ಕಳೆದನಲ್ಲ 3

ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |ಮಧ್ವ ಮತಸಿದ್ದಾಂತ ಪದ್ಧತಿಗಳ ||ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4

ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |ಮಂದಭಾಗ್ಯದಬವಣೆತಪ್ಪಲಿಲ್ಲ ||ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5
*******

No comments:

Post a Comment