Thursday, 5 December 2019

ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ purandara vittala

ರಾಗ ಕೇದಾರಗೌಳ ಅಟ ತಾಳ 

ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ ||ಪ||
ನಾಯಿ ಅಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ||ಅ ||

ಕೊಟ್ಟ ಸಾಲವ ಕೊಡದ ನಾಯಿ, ಇಟ್ಟ ಭಾಷೆಯ ತಪ್ಪುವ ನಾಯಿ
ಕಟ್ಟೆ ಮೇಲೆ ಕುಳಿತುಕೊಂಡು ಅಟ್ಟಹಾಸದಿ ಬಗುಳುವ ನಾಯಿ ||

ಕೊಟ್ಟು ಕುದಿಯುವೋ ಕೆಟ್ಟ ನಾಯಿ, ಇಟ್ಟ ಅನ್ನವ ಹಂಗಿಪ ನಾಯಿ
ಪುಟ್ಟಿ ಮಾತೆ ಗರ್ಭದಲ್ಲಿ ಕೆಟ್ಟ ಕೃತ್ಯವ ಮಾಡುವ ನಾಯಿ ||

ಪಟ್ಟ ಸ್ತ್ರೀಯಳ ಬಿಟ್ಟಿಹ ನಾಯಿ, ಬಿಟ್ಟ ಸ್ತ್ರೀಯಳ ಆಳ್ವ ನಾಯಿ
ದಿಟ್ಟ ಶ್ರೀ ಪುರಂದರ ವಿಠಲರಾಯನ ಮನ ಮುಟ್ಟಿ ಭಜಿಸದೆ ಹೋದ ನಾಯಿ ||
***

pallavi

nAyi bandadappa aNNa attalAgiri

anupallavi

nAyi andare nAyiyalla mAnava janmada hIna nAyi

caraNam 1

koTTa sAlava koDada nAyi iTTa bhASeya tappuva nAyi
kaTTe mEle kuLitukoNDu aTTahAsadi baguLuva nAyi

caraNam 2

koTTu kudiyuvO keTTa nAyi iTTa annava hangipa nAyi
puTTi mAte garbhadalli keTTa krtyava mADuva nAyi

caraNam 3

paTTa strIyaLa biTTiha nAyi biTTa strIyaLa Alva nAyi
diTTa shrI purandara viTTalarAyana mana muTTi bhajisade hOda nAyi
***

No comments:

Post a Comment