Thursday, 2 December 2021

ಮಂಗಳಂ ಜಯ ಮಂಗಳಂ ಮಂಗಳವು ಮಧು purandara vittala MANGALAM JAYA MANGALAM MANGALAVU MADHU



ಶ್ರೀಪುರಂದರದಾಸಾರ್ಯ ವಿರಚಿತ ಮಂಗಳಾಚರಣೆಯ ಪದ್ಯಗಳು - ೧

 ರಾಗ : ಮುಖಾರಿ       ತಿಶ್ರನಡೆ

ಮಂಗಳಂ ಜಯ ಮಂಗಳಂ ॥ಪ॥

ಮಂಗಳವು ಮಧುಕೈಟಭಾಸುರಮರ್ದನನಿಗೆ
ಮಂಗಳವು ಮದನಕೋಟಿಕಾಂತಗೆ
ಮಂಗಳವು ಕರುಣಾಂತರಂಗ ಶ್ರೀರಂಗಗೆ
ಮಂಗಳವು ಸಿಂಹಾದ್ರಿ ನರಸಿಂಹಗೆ ॥೧॥

ಶ್ರೀವತ್ಸಲಾಂಛನಗೆ ಸಿರಿದೇವಿಯರಸನಿಗೆ 
ಗೋವರ್ಧನೋದ್ಧಾರ ಗೋವಿಂದಗೆ
ಮಾವ ಕಂಸನ ಕೊಂದ ಮಕರಕುಂಡಲಧರಗೆ
ಭಾವಜನಯ್ಯ ಚಿನ್ಮಯಮೂರ್ತಿಗೆ ॥೨॥

ಅಂಬುಜನಾಭನಿಗೆ ಅಖಿಲ ದೇವೇಶಗೆ
ಶಂಬರಾರಿಯಜಾಮಿಳವಂದ್ಯನಿಗೆ
ಎಂಭತ್ತುನಾಲ್ಕು ಲಕ್ಷದ ಜೀವರಾಶಿಗಳ
ಬೊಂಬೆಗಳ ಮಾಡಿ ಕುಣಿಸುವ ದೇವಗೆ ॥೩॥

ಸಕಲ ಗುಣಪೂರ್ಣಗೆ ಸರ್ವಸ್ವತಂತ್ರಗೆ 
ಅಕಳಂಕ ಆದಿನಿರ್ದೋಷ ಹರಿಗೆ 
ಭಕುತವತ್ಸಲನಿಗೆ ಭವರೋಗ ಹಾರಿಗೆ 
ಸಕಲಜೀವದಯಾಪರಮೂರ್ತಿಗೆ ॥೪॥

ಪನ್ನಗಶಯನನಿಗೆ ಪಾವನ್ನಚರಿತಗೆ
ಸನ್ನುತಾನಂತ ಸದ್ಗುಣಪೂರ್ಣಗೆ 
ಎನ್ನೊಡೆಯ ಪುರಂದರವಿಠಲರಾಯನಿಗೆ
ತನ್ನ ನಂಬಿದವರ ಸಲಹುವವಗೆ ॥೫॥

ಜಯ ಮಂಗಳಂ ಶುಭ ಮಂಗಳಂ॥
***

pallavi

jaya mangaLa nitya shubha mangaLa

caraNam 1

mangaLavu madukaita bhASura mardananige mangaLavu madanakOTi vilAsage
mangaLavu karuNAntaranga shrIrangage mangaLavu shrIhAtri narasingage

caraNam 2

shrIvatsalAmshake shrIdEviyarasage gOvardhanOddAra gOvindage
mAva kamsana konda makara kuNDalinige jIvAtmanAda cinmaya rUpake

caraNam 3

sakala guNa paripUrNanige sarva svantranige akaLanka rUpanige anankavittake
bhaktavatsalanige bhavarOga vaidyanige sakala jIva dayApara mUrtige

caraNam 4

pannaga shayananige pAvana critranige sannutAnanda sajjanapAlake
ennudaiya purandara viTTala rAyanige tanna nambidavara salahuvanige
***

ಜಯ ಮಂಗಳಂ ನಿತ್ಯ ಶುಭಮಂಗಳಂ ಪ.

ಮಂಗಳ ಮಧು ಕೈಟಭಾಸುರ ಮರ್ದನಗೆಮಂಗಳಮದನ ಕೋಟಿ ಲಾವಣ್ಯಗೆ ||ಮಂಗಳ ಜಗದಂತರಂಗ ಕೃಪಾಂಗಗೆಮಂಗಳ ಯದುಕುಲೋತ್ತಮ ಸಾರ್ವಭೌಮಗೆ 1

ಶ್ರೀವತ್ಸಲಾಂಛನಗೆ ಸಿರಿದೇವಿಯರಸಗೆಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದಮಕರ ಕುಂಡಲಧರಭಾವಜನಯ್ಯ ಚಿನ್ಮಯ ಮೂರ್ತಿಗೆ 2

ಅಂಬುಜನಾಭಗೆ ಅಖಿಳಲೋಕೇಶಗೆಶಂಭು -ಅಜ - ಸುರ - ಮುನಿವಂದ್ಯ ಹರಿಗೆ ||ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಬೊಂಬೆಯ ಮಾಡಿ ಕುಣಿಸುವ ದೇವಗೆ 3

ಸಕಲಗುಣ ಪೂರ್ಣಗೆ ಸರ್ವಸ್ವಾತಂತ್ರ್ಯಗೆಅಕಳಂಕ ಆದಿನಿರ್ದೋಷ ಹರಿಗೆ ||ಭಕುತ ವತ್ಸಲನಿಗೆ ಭವರೋಗ ವೈದ್ಯಗೆನಿಖಿಳಜೀವದಯಾಪರಿಪೂರ್ಣಗೆ4

ಪನ್ನಗಶಯನಗೆ ಪಾವನ ಮೂರ್ತಿಗೆಸನ್ನುತಾನಂತ ಸದ್ಗುಣ ಭರಿತಗೆ ||ಎನ್ನೊಡೆಯ ಪುರಂದರವಿಠಲ ರಾಯಗೆತನ್ನ ನಂಬಿದವರ ಸಲಹುವ ಮೂರ್ತಿಗೆ 5
***


No comments:

Post a Comment