Friday, 6 December 2019

ಸಂಜ್ಞೆಯಿಂದಾಳಬೇಕಣ್ಣ ಗಂಡನಾಜ್ಞೆಯ ಮೀರಿ purandara vittala

ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ

ಸಂಜ್ಞೆಯಿಂದಾಳಬೇಕಣ್ಣ , ಗಂಡ-
ನಾಜ್ಞೆಯ ಮೀರಿ ನಡೆವ ಲಂಡ ಹೆಣ್ಣ ||ಪ||

ಅತ್ತೆ ಮಾವಗೆ ಅಂಜದವಳ, ತನ್ನ
ಉತ್ತಮಪುರುಷನ ಜರೆದು ನುಡಿವಳ
ಭಕ್ತರ ಕಂಡು ಬಂಧಿಪಳ, ನಡು-
ನೆತ್ತಿಯ ಚರ್ಮವ ಕೆತ್ತಬೇಕವಳ ||

ಕೂಳು ಕೊಬ್ಬಿಲಿ ಉರಿವವಳ, ಗಂಡ
ಹೇಳಿದ ಮಾತ ಕೇಳದೆ ಮೀರುವವಳ
ಸೂಳೆಯಂದದಿ ನಡೆವವಳ, ತಲೆ
ಬೋಳಿಸಿ ಕಸಹೆಡಿಗೆ ಹೊರಿಸಬೇಕವಳ ||

ಹಟ್ಟಿ ಹಟ್ಟಿ ತಿರುಗುವವಳ, ತನ್ನ
ಗಟ್ಟಿತನದಲಿ ಮಾರುಮಲೆತವಳ
ಬಟ್ಟ ಕುಚವ ತೋರಿಸುವಳ, ಹುಟ್ಟು
ಹುಟ್ಟಿಲಿ ಬಾಯೊಳು ಹೆಟ್ಟಬೇಕವಳ ||

ನಲ್ಲರ ಕಂಡು ನಗುವಳ, ತನ್ನ
ಬಲ್ಲಿದ ಗಂಡನ ಬೈದು ಕರೆವಳ
ಮಲ್ಲರಂದದಿ ಹೋರುವವಳ, ಅವಳ
ಹಲ್ಲು ಮುರಿದು ಜಿಹ್ವೆ ಸೀಳಬೇಕವಳ ||

ಎಂದೂ ಈ ಪರಿಯಲ್ಲಿರುವಳ, ಅವಳ
ಅಂದಮಾಡುವುದೇಕೆ ಬಿಡಬೇಕಿನ್ನವಳ
ಒಂದಿಷ್ಟು ಗುಣವಿಲ್ಲದವಳ, ಶ್ರೀಪು-
ರಂದರವಿಠಲರಾಯಗಲ್ಲದವಳ ||
***

pallavi

sujnyeindALa bEkaNNa

anupallavi

gaNDanAjneya mIri naDeva laNDa heNNa

caraNam 1

atte mAvage ajnAnavaLa tanna uttama puruSana jaredu nuDivaLa
bhaktara kaNDu bandhipaLa naTU nettiya carmava ketta bEkavaLa

caraNam 2

kULu kobbili uruvavaLa gaNDa hELida mAta kELade mIruvavaLa
sULeyandadi naDEvavaLa tale bOLisi kasaheDige horisa bEkavaLa

caraNam 3

haTTI haTTi tiruguvavaLa tanna gaTTi tanadali mArumaletavaLa
baTTa kucava tOrisuvaLa huTTu huTTili bAyoLu heTTabEkavaLa

caraNam 4

nallara kaNDu naguvaLa tanna ballida gaNDana baidu karevaLa
mallarandadi hOruvavaLa avaLa hallu muridu jihve sILa bEkavaLa

caraNam 5

endU I pariyalliruvaLa avaLa andamADuvudEke biDa bEkinnavaLa
ondiSTu guNavilladavaLa shrI purandara viTTala rAyagalladavaLa
***

No comments:

Post a Comment