ರಾಗ ಬೇಹಾಗ್ ಆದಿತಾಳ
ಆರೇನು ಮಾಡುವರು ತಾ ಪಾಪಿಯಾದರೆ ||ಪ||
ಊರೆಲ್ಲ ನೆಂಟರು ಉಣಬಡಿಸುವರ ಕಾಣೆ ||ಅ.ಪ||
ಬಾಯಾರಿ ಹೋದರೆ ಬಾವಿಯ ಜಲಬತ್ತಿತು
ತಾಯಿ ಸೋದರರೆಂದು ಹಾರೈಸಿ ಹೋದರೆ
ಆಯಾಸದಿಂದಲಿ ಕಣ್ಣಿಗೆ ತೋರದೆ
ಮಾಯದಿಂದಲಿ ದೂರ ನಡೆಯುವರು ಜಗದಿ ||
ಹಸಿದು ನೆಂಟರ ಮನೆಗೆ ಉಣಲಿಕ್ಕೆ ಪೋದರೆ
ಹಸಿವರಿತು ಬಡಿಸುವರ ಕಾಣೆ
ರಸದಾಳಿ ಕಬ್ಬು ಮೆಲಲೆಂದು ಪೋದರೆ
ವಿಷವಾಗಿ ತೋರುತಿದೆ ಪ್ರಾರಬ್ಧ ಬಲದಿಂದ ||
ಗಿಡದ ನೆರಳು ಎಂದು ಅಡಿಗೆ ಹೋದರೆ ಮರವು
ಫಡಫಡನೆ ಉರುಳಿ ಕೆಂಡಗಳುಗುಳ್ವುದು
ಮಡದಿ ಮಕ್ಕಳು ಎನ್ನ ರಕ್ಷಿಪರು ಎಂದರೆ
ಹಿಡಿದು ಬಂಧಿಪರು ತಮ್ಮೊಡಲ ಗತಿಯೇನೆಂದು ||
ಕಷ್ಟಪಡಲಾರೆ ಕಾನನದೊಳಿರಲಾರೆ
ನಿಷ್ಠುರವು ಬಂದ ಕಡೆ ನಿಲಲಾರೆನೊ
ಕಷ್ಟಪಡು ಮಗನೆಂದು ಎನ್ನ ಜನನಿಯು ಹೆತ್ತು
ನಿಷ್ಠುರದಿಂದಲಿ ಎರೆದಳೋ ಏನೋ ||
ಮನಕೆ ಬಾರದ ಹೆಣ್ಣು ಮನೆಗೆ ಹಬ್ಬಿದ ಬಳ್ಳಿ
ಗುಣವಿಲ್ಲದ ಮನುಜನ ಸಂಗ ಸಮವೋ
ಹಣೆಯ ಬರಹದ ವಶದಿ ದಣಿಯುತ್ತಿದ್ದರು ಮುಂದೆ
ಬಿನುಗು ಭವ ಬಿಡಿಸೆ ಪುರಂದರವಿಠಲನೆನ್ನಿರೋ ||
***
ಆರೇನು ಮಾಡುವರು ತಾ ಪಾಪಿಯಾದರೆ ||ಪ||
ಊರೆಲ್ಲ ನೆಂಟರು ಉಣಬಡಿಸುವರ ಕಾಣೆ ||ಅ.ಪ||
ಬಾಯಾರಿ ಹೋದರೆ ಬಾವಿಯ ಜಲಬತ್ತಿತು
ತಾಯಿ ಸೋದರರೆಂದು ಹಾರೈಸಿ ಹೋದರೆ
ಆಯಾಸದಿಂದಲಿ ಕಣ್ಣಿಗೆ ತೋರದೆ
ಮಾಯದಿಂದಲಿ ದೂರ ನಡೆಯುವರು ಜಗದಿ ||
ಹಸಿದು ನೆಂಟರ ಮನೆಗೆ ಉಣಲಿಕ್ಕೆ ಪೋದರೆ
ಹಸಿವರಿತು ಬಡಿಸುವರ ಕಾಣೆ
ರಸದಾಳಿ ಕಬ್ಬು ಮೆಲಲೆಂದು ಪೋದರೆ
ವಿಷವಾಗಿ ತೋರುತಿದೆ ಪ್ರಾರಬ್ಧ ಬಲದಿಂದ ||
ಗಿಡದ ನೆರಳು ಎಂದು ಅಡಿಗೆ ಹೋದರೆ ಮರವು
ಫಡಫಡನೆ ಉರುಳಿ ಕೆಂಡಗಳುಗುಳ್ವುದು
ಮಡದಿ ಮಕ್ಕಳು ಎನ್ನ ರಕ್ಷಿಪರು ಎಂದರೆ
ಹಿಡಿದು ಬಂಧಿಪರು ತಮ್ಮೊಡಲ ಗತಿಯೇನೆಂದು ||
ಕಷ್ಟಪಡಲಾರೆ ಕಾನನದೊಳಿರಲಾರೆ
ನಿಷ್ಠುರವು ಬಂದ ಕಡೆ ನಿಲಲಾರೆನೊ
ಕಷ್ಟಪಡು ಮಗನೆಂದು ಎನ್ನ ಜನನಿಯು ಹೆತ್ತು
ನಿಷ್ಠುರದಿಂದಲಿ ಎರೆದಳೋ ಏನೋ ||
ಮನಕೆ ಬಾರದ ಹೆಣ್ಣು ಮನೆಗೆ ಹಬ್ಬಿದ ಬಳ್ಳಿ
ಗುಣವಿಲ್ಲದ ಮನುಜನ ಸಂಗ ಸಮವೋ
ಹಣೆಯ ಬರಹದ ವಶದಿ ದಣಿಯುತ್ತಿದ್ದರು ಮುಂದೆ
ಬಿನುಗು ಭವ ಬಿಡಿಸೆ ಪುರಂದರವಿಠಲನೆನ್ನಿರೋ ||
***
pallavi
ArEnu mADuvaru tA pApiyAdhare Urella neNTaru uNa baDisuvara kANe
caraNam 1
bAyAri hOdhare bAvi jala battitu tAyi sOdararendu hAraisire
AyAsadindali kaNNIge tOrade mAyAdindali dUra naDeyuvaru jagadi
caraNam 2
hasidu neNtara manage uNalikke pOdhare hasivaridu baDisuvara kANe
rasadALi kabbu melalendu hOdare viSavAgi tOrutide prArabdha baladinda
caraNam 3
giDada neraLu endu adige hOdare maravu ghaDaghaDane uruLi keNDagaLuguLvudu
maDadi makkaLu enna rakSiparu endare hiDidu bandhiparu tammoDala gatiyEnendu
caraNam 4
kaSTa paDalAre nA kAnanadoLiralAre niSTUravu banda kaDe nillArenO
kaSTa paDu maganendu enna jananiyu hettu niSTUradindali eredaLo EnO
caraNam 5
manake bArada heNNu manege habbida baLLi guNavillada manuja sanga samavO
haNeya barahada vashadi daNiyutiddaru munde binugu bhava biDise purandara viTTalananennirO
***
No comments:
Post a Comment