Thursday, 16 December 2021

ಏಕೆ ದಯ ಬಾರದೋ ಲೋಕನಾಯಕ ನಿನಗೇಕೆ purandara vittala EKE DAYA BAARADO LOKA NAAYAKA NINAGEKE



ಏಕೆ ದಯ ಬಾರದೋ
ಲೋಕನಾಯಕ ನಿನಗೇಕೆ ||ಪ||

ಇಂದಿರೇಶ ನಿಮ್ಮ ಪಾದ-
ದ್ವಂದ್ವವ ನಂಬಿದೆನಯ್ಯ
ಬಂದು ಸಲಹೊ ಬೇಗದಿಂದ
ನಂದಗೋಪನ ಕಂದ ನಿನಗೆ ||

ಸೃಷ್ಟಿಯೊಳಗೆ ನಿನಗೆ ಎ-
ಳ್ಳಷ್ಟು ಕರುಣ ಬಾರದೇಕೊ
ಸಿಟ್ಟೇಕೊ ಎನ್ನ ಮೇಲೆ
ಮುಷ್ಟಿಮರ್ದನ ಕೃಷ್ಣ ನಿನಗೆ ||

ಅಷ್ಟಮ ಸ್ತ್ರೀಯರ ಪತಿಯೆ ಎನ್ನ
ಕಷ್ಟವ ಪರಿಹರಿಸೊ ಮುನ್ನ
ಬೆಟ್ಟಲಿ ಬೆಟ್ಟವನೆತ್ತಿದ
ದಿಟ್ಟ ಶ್ರೀ ಗೋಪಾಲ ನಿನಗೆ ||

ವಾಸುಕಿಶಯನ ಎನ್ನ
ದೋಷವ ಪರಿಹರಿಸೊ ಇನ್ನು
ದಾಸ್ಯವಿತ್ತು ನೋಡೊ ಅಂಜನಾ-
ದ್ರೀಶ ಶ್ರೀನಿವಾಸ ನಿನಗೆ ||

ಅರವಿಂದಾಕ್ಷ ನೀನೆ ಎನಗೆ
ಸರುವ ಬಳಗ ಬಂಧು ಭಾಗ್ಯ
ಅರಿಯ ಪರಾಕ್ರಮವ ಬೇಗೆ
ಪುರಂದರವಿಠಲ ನಿನಗೆ||
****

ರಾಗ ಭೈರವಿ ಆದಿ ತಾಳ (raga, taala may differ in audio)

pallavi

Eke daya bAradO lOkanAyaka ninagEke

caraNam 1

indirEsha nimma pAda dvandvava nambidenayya bandu salaho bEgadinda nandagOpana kanda ninage

caraNam 2

shrSTiyoLage ninage eLLaSTu karuNa bAradEko siTTEko enna mEle muSTika mardana krSNa ninage

caraNam 3

aStama strIyara patiye enna kaSTava parihariso munna bennasi beTTavanentida diTTa shRi gOpAla ninage

caraNam 4

vAsuki shayana enna dOSava parihariso innu dAsyavittu nODo anjanAdrIsha shrInivAsa ninage

caraNam 5

aravaindAkSa nIne enage saruva baLaga bandhu bhAgya ariya parAkramava bEge purandara viTTala ninage
***

No comments:

Post a Comment