Tuesday, 21 December 2021

ನಿನ್ನ ಒಲುಮೆಗೆ ನಾನು ಈಡೇನೊ ರಂಗ ಸಣ್ಣವನು purandara vittala NINNA OLUMEGE NAANU EEDENO RANGA SANNAVANU



ನಿನ್ನ ಒಲುಮೆಗೆ ನಾನು ಈಡೇನೊ ರಂಗ ||ಪ||
ಸಣ್ಣವನು ನಾನಯ್ಯ ಪನ್ನಗಾಚಲವಾಸ ||ಅ||

ಅಜಿತ ನಾಮಕ ನೀನು, ಅಲ್ಪ ಶಕ್ತನು ನಾನು
ಕುಜನ ದೂಷಕ ನೀನು, ಅವರ ಮಿತ್ರನು ನಾನು
ವ್ರಜದ ಸ್ತ್ರೀಯರ ಮನವ ಸೂರೆಗೊಂಡ ಸ್ವಾಮಿ
ಅಜನ ಪೆತ್ತ ನಿನಗೆ ಸರಿಯಾರು ಪೇಳಯ್ಯ ||

ಅನೇಕ ಅದ್ಭುತಚರಿತ್ರ, ಪಿಡಿದೆ ಹೇಸಿಕೆ ಮಾರ್ಗ
ಅನೇಕ ಭಕ್ತರ ಪೋಷ, ನಾನವರ ದೂಷಕ
ಅನೇಕ ಬಾಹುಗಳು ಮತ್ತನೇಕ ಪಾದಗಳಯ್ಯ
ಅನೇಕ ದಿವ್ಯಾಭರಣ ವಿಶ್ವರೂಪ ನಿನಗೆ

ಪರಮಪಾವನ ನೀನು, ದುಷ್ಟತರಳನು ನಾನು
ಕರುಣಾಬ್ಧಿಯು ನೀನು, ಕಾಠಿನ್ಯಚಿತ್ತ ನಾನು
ಶರಣೆಂಬೆ ಗಿರಿರಾಯ ನಿನ್ನ ಪೋಲುವರುಂಟೆ
ಮರಳಿ ಪುಟ್ಟದೆ ಮಾಡು ತಂದೆ ಪುರಂದರ ವಿಠಲ ||
****

ರಾಗ ಕಾಂಭೋಜ ಝಂಪೆತಾಳ (raga, taala may differ in audio)

pallavi

ninna olumege nAnu IDEno ranga

anupallavi

saNNavanu nAnayya pannagAcalavAsa

caraNam 1

ajita nAmaka nInu alpa shaktanu nAnu kujana dUSaka nInu avara mitranu nAnu
vrajata strIyara manava sure goNDa svAmi ajana petta ninage sariyAru pELayya

caraNam 2

anEka adbhUta caritra piDide hEsike mArga anEka bhaktara pOSa nAnavara dUSaka
anEka bAhugaLu mattanEka pAdagaLayya anEka divyAbharaNa vishvarUpa ninage

caraNam 3

parama pAvana nInu duSTa taraLanu nAnu karuNAbdhiyu nInu kaThina citta nAnu
sharaNambe girirAya ninna pOluvaruNDTe maraLi puTTade mADu tande purandara viTTala
***


No comments:

Post a Comment