Tuesday 21 December 2021

ಮಹದಾದಿ ದೇವ ನಮೋ ಮಹದಾದಿ ದೇವ purandara vittala MAHADAADI DEVA NAMO MAHADAADI DEVA




   




ಮಹದಾದಿ ದೇವ ನಮೋ ||ಪ||

ಮಹದಾದಿ ದೇವ ನಮೋ
ಮಹಾ ಮಹನೀಯ ನಮೋ
ಪ್ರಹ್ಲಾದ ವರದ ಅಹೋಬಲ ನಾರಸಿಂಹ ||ಅ.ಪ||

ಧರಣಿಗುಬ್ಬಸವಾಗೆ ತಾರಾಪಥವು ನಡುಗೆ

ಸುರರು ಕಂಗೆಟ್ಟೊಡೆ ನಭವ ಬಿಟ್ಟು
ತುರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆ ನಾರಸಿಂಹ ||

ಸಿಡಿಲಂತೆ ಗರ್ಜಿಸುತ ಕುಡಿಯ ನಾಲಿಗೆ ಚಾಚಿ

ಅಡಿಗಡಿಗೆ ಲಂಘಿಸುತ ಕಡು ಕೋಪದಿಂದ
ಮುಡಿವಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ
ಕಡು ಉದರ ಬಗಿದೆ ನಾರಸಿಂಹ ||

ಸರಸಿಜೋದ್ಭವ ಪುರಂದರಾದಿ ಸಮಸ್ತ

ಸುರರು ಅಂಬರದಿ ಪೂಮಳೆಗರೆಯೆ
ಸಿರಿ ಸಹಿತ ಗರುಡಾದ್ರಿಯಲಿ ನಿಂತು
ಭಕುತರನು ಕರುಣಿಸಿದೆ ಪುರಂದರಾವಿಠಲ ನಾರಸಿಂಹ ||
*******

ರಾಗ ನಾಟ. ತ್ರಿಪುಟ ತಾಳ (raga, taala may differ in audio)

Mahadadi deva namo || mahadadi deva namo || pa ||

Mahamahimane namo |prahladavarada ahobala narasimha||a||

Dharanigubbasavage tarapathavu naduge |
Suraru kangettode nabava bittu |
Tarugirigalallade saradhigalu kudidukke |
Uriyanuguluta udbaviside narasimha | 1 |

Sidilante garjisuta kudiyanalage caci |
Adigadige lamgisuta kadukopadinda |
Mudipididu rakkasana kedahi nakadindotti |
Kadu udara bagede kadugali narasimha || 2 ||

Sarasijodbava hara purandaradi samasta |
Suraru ambaradi humaleya kareye |
Sirisahita garudadriyali nintu Bajakara |
Karuniside purandaravithala narasimha || 3 ||
***

pallavi

mahadAdi dEva namO

anupallavi

mahadAdi dEva namO mahA mahanIya namO prahlAda varada ahObala nArasimha

caraNam 1

dharaNi gubbasavAge tArApadavu naDuge suraru gangeTTODe nabhava biTTU
turugirigaLallADe sharadhigaLu kudidukke uriyanuguLuta udbhaviside nArasimha

caraNam 2

siDilande garjisuta kuDiya nAlige cAci aDigaDige lankhisuta kaDu kOpadinda
muDiviDidu rakkasana keDahi nakhadindotti kaDu udara bagide nArasimha

caraNam 3

sarasijOdbhava purandarAdi samasta suraru ambaradi pUmaLeya kareya
siri sahita garuDAdriyali nintu bhakudaranu karuNiside purandara viTTala narasima
***

ಮಹಾದಾದಿದೇವ ನಮೋ
ಮಹಾಮಹಿಮನೆ ನಮೋಪ್ರಹಲ್ಲಾದವರದ 
ಅಹೋಬಲ ನರಸಿಂಹ ||

.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು 
ಕಂಗೆಟ್ಟೋಡೆ ನಭವ ಬಿಟ್ಟು ||
ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ ||

ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ 
ಹುಂಕರಿಸಿ ಕಡುಕೋಪದಿಂದ ||
ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ 
ಬಗೆದ ಕಡುಗಲಿ ನಾರಸಿಂಹ||

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು 
ಅಂಬರದಿ ಪೂಮಳೆಗರೆಯಲು
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನು
ಕರುಣಿಸುವ ಪುರಂದರವಿಠಲ ನಾರಸಿಂಹ ||

*******

No comments:

Post a Comment