ಪುರಂದರದಾಸರು
ಮೂಢ ಬಲ್ಲನೆ ಜ್ಞಾನದೃಢಭಕ್ತಿಯ
ಕಾಡಕಪಿ ಬಲ್ಲುದೆ ಮಾಣಿಕದ ಬೆಲೆಯ ||ಪ||
ಕೋಣ ಬಲ್ಲುದೆ ವೀಣೆ ನುಡಿಯುವ ಸುನಾದವನು
ಗೋಣಿ ಬಲ್ಲುದೆ ಎತ್ತಿನ ದುಃಖವ
ಪ್ರಾಣ ತೊಲಗಿದ ದೇಹ ಕಿಚ್ಚೇನು ಬಲ್ಲುದೆ
ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ ||
ಬಧಿರ ಬಲ್ಲನೆ ಸುಸಂಗೀತ ಸ್ವಾರಸ್ಯವನು
ಚದುರ ನುಡಿಯಾಡಬಲ್ಲನೆ ಮೂಕನು
ಕ್ಷುಧೆ ಇಲ್ಲದಾ ಮನುಜ ಅಮೃತಾನ್ನ ಸವಿದಪನೆ
ಮಧುರ ವಚನವ ಬಲ್ಲನೆ ದುಷ್ಟ ಮನುಜ ||
ಅಜ ಬರೆದ ಬರೆಹವನು ತೊಳೆಯಬಲ್ಲನೆ ಜಾಣ
ನಿಜಭಕ್ತಿ ಮುಕ್ತಿ ಸುಖವನ್ನು ಕೊಡುವಾ
ಭುಜಗೇಂದ್ರ ಶಯನ ಸಿರಿ ಪುರಂದರ ವಿಠಲನ
ಭಜಿಸಲರಿಯದವ ಬಲ್ಲನೆ ಮುಕ್ತಿ ಸುಖವ ||
****
ಮೂಢ ಬಲ್ಲನೆ ಜ್ಞಾನದೃಢಭಕ್ತಿಯ
ಕಾಡಕಪಿ ಬಲ್ಲುದೆ ಮಾಣಿಕದ ಬೆಲೆಯ ||ಪ||
ಕೋಣ ಬಲ್ಲುದೆ ವೀಣೆ ನುಡಿಯುವ ಸುನಾದವನು
ಗೋಣಿ ಬಲ್ಲುದೆ ಎತ್ತಿನ ದುಃಖವ
ಪ್ರಾಣ ತೊಲಗಿದ ದೇಹ ಕಿಚ್ಚೇನು ಬಲ್ಲುದೆ
ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ ||
ಬಧಿರ ಬಲ್ಲನೆ ಸುಸಂಗೀತ ಸ್ವಾರಸ್ಯವನು
ಚದುರ ನುಡಿಯಾಡಬಲ್ಲನೆ ಮೂಕನು
ಕ್ಷುಧೆ ಇಲ್ಲದಾ ಮನುಜ ಅಮೃತಾನ್ನ ಸವಿದಪನೆ
ಮಧುರ ವಚನವ ಬಲ್ಲನೆ ದುಷ್ಟ ಮನುಜ ||
ಅಜ ಬರೆದ ಬರೆಹವನು ತೊಳೆಯಬಲ್ಲನೆ ಜಾಣ
ನಿಜಭಕ್ತಿ ಮುಕ್ತಿ ಸುಖವನ್ನು ಕೊಡುವಾ
ಭುಜಗೇಂದ್ರ ಶಯನ ಸಿರಿ ಪುರಂದರ ವಿಠಲನ
ಭಜಿಸಲರಿಯದವ ಬಲ್ಲನೆ ಮುಕ್ತಿ ಸುಖವ ||
****
ರಾಗ ಮುಖಾರಿ. ಝಂಪೆ ತಾಳ (raga tala may differ in audio)
pallavi
mUDha ballane jnAna drDha bhaktiya kADakapi ballude mANikada beleya
caraNam 1
kONa ballude vINe nuDiyuva su-nAdavanu gONi ballude ettina dukkhava
prANa tolagida dEha kiccendu ballude kSONiyoLu kuruDa ballane hagalu iruLa
caraNam 2
badhira ballane su-sangIta svarasyavanu cadura nuDiyADa ballane mUkanu
kSudhe illadA manuja amrtAnna savidapane madhura vacanava ballaneduSTa manuja
caraNam 3
aja bareda barehavanutoLeya ballane jANa nijabhakti mukti sukhavannu koDuvA
bhujagEndra shayana siri purandara viTTalana bhajisalariyadava ballane mukti sukhava
***
ಮೂಢ ಬಲ್ಲನೆ ಜ್ಞಾನ ದೃಢ ಭಕುತಿಯ ?ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಪ.
ಕೋಣ ಬಲ್ಲುದೆ ವೇದಗಳನೋದಿ ಪಠಿಸಲೇಕೆಗೋಣಿ ಬಲ್ಲುದೆ ಎತ್ತಿನಾ ದುಃಖವಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆಕ್ಷೋಣಿಯೊಳು ಕುರುಡ ಬಲ್ಲನೆ ಹಗಲು - ಇರಳ ? 1
ಬಧಿರ ಕೇಳುವನೆ ಸಂಗೀತವನು ಪಾಡಿದರೆ ?ಚದುರ ಮಾತುಗಳಾಡುವನೆ ಮೂಕನು ?ಕ್ಷುದೆಯಿಲ್ಲದವನು ಅಮೃತಾನ್ನವನು ಸವಿಯುವನೆ ?ಮಧುರ ವಚನವ ನುಡಿವನೇ ದುಷ್ಟ ಮನುಜ 2
ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ?ನಿಜಭಕುತಿ ಮುಕುತಿ ಸುಖವನ್ನು ಕೊಡುವಭುಜಗೇಂದ್ರಶಯನ ಶ್ರೀ ಪುರಂದರವಿಠಲನಭಜಿಸಲಕ್ಕರಿಯದವ ಕಡು ಪಾಪಿ ಮನುಜ 3
*******
No comments:
Post a Comment