Saturday, 4 December 2021

ಏನು ಮರುಳಾದ್ಯಮ್ಮ ಎಲೆ ಭಾರತಿ ವಾನರ purandara vittala ENU MARULAADYAMMA ELE BHARATI VAANARA



ಏನು ಮರುಳಾದ್ಯಮ್ಮ ಎಲೆ ಭಾರತಿ
ವಾನರನಿಕರದೊಳು ಶ್ರೇಷ್ಠನಾದವಗೆ ||ಪ||

ಕಣ್ಣಿಲ್ಲದವಳ ಗರ್ಭದಲಿ ಜನಿಸಿಬಂದು
ನಿನ್ನ ತೊರೆದು ಬ್ರಹ್ಮಚಾರಿಯಾಗಿ
ಹಣ್ಣಿಗಾಗಿ ಹೋಗಿ ವನವ ಕಿತ್ತೀಡಾಡಿ
ಉಣ್ಣ ಭರದಲಿ ಎಂಜಲೆಲೆಯನೊಯ್ದವಗೆ ||

ಹುಟ್ಟಿದನು ಗುರುತಲ್ಪಗಮನಕುಲದಲ್ಲಿ ತಾ
ನಟ್ಟಿರುಳೊಳೊಬ್ಬ ಅಸುರೆಯ ಕೂಡಿದ
ಹೊಟ್ಟೆಗಿಲ್ಲದೆ ಹೋಗಿ ಭಿಕ್ಷದನ್ನವನುಂಡು
ಅಟ್ಟು ಹಾಕುವನಾಗಿ ಸ್ವಕುಲ ಅಂತಕಗೆ ||

ಮಂಡೆ ಬೋಳಾಗಿ ಭೂಮಂಡಲವ ತಿರುಗಿದನು
ಕಂಡವರು ಯಾರೆ ಈತನ ಗುಣಗಳ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ
ಕೊಂಡಾಡುತಲೆ ಬೋರೆಮರದ ಕೆಳಗಿದ್ದವಗೆ ||
***

ರಾಗ ಕಾಂಭೋಜ. ಝಂಪೆ ತಾಳ

pallavi

Enu maruLadyamma ele bhArati vAnara nikaradoLu shrESTa nAdavage

caraNam 1

kaNNIdalavaLa garbhadali janisi bandu ninna toredu brahmacAriyAgi
haNNIgAgi hOgi vanava kittIDADi uNNa karedare vanjaleDeyanoidavage

caraNam 2

huTTidanu gurutalpakAmiyA vamshadalli naTTiruLoLobba asuriya kUDida
hoTTegentale hOgi bhikSadannavanuNDu aTTU hAkuvanAgi dinava kaLedavage

caraNam 3

maNDe bOLAgi bhU maNDalava tirugidanu kaNdavaru yAre Itana guNagaLa
puNDarIkAkSa shrI purandara viTTalana koNDADudale bOre marada kaugiddavage
***


No comments:

Post a Comment