ನಾಚಿಕೆ ಪಡಬೇಡ ಮನದೊಳು ಯೋಚಿಸಿ ಕೆಡಬೇಡ ಪ.
ನಿಚ್ಚ ನೆನೆಯೊ ನಮ್ಮಚ್ಯುತನಾಮವ |
ನಿಚ್ಚ ನೆನೆಯೊ ನಮ್ಮಚ್ಯುತನಾಮವ |
ಮೆಚ್ಚಿ ಕೊಟ್ಟರೆ -ಅಚ್ಯುತಪದವೀವ ಅಪ
ಹರಿಹರಿಯೆಂದೊದರೋ - ಹತ್ತಿದ - |
ಹರಿಹರಿಯೆಂದೊದರೋ - ಹತ್ತಿದ - |
ದುರಿತಗಳಿಗೆ ಬೆದರೋ ||
ವಾರಿಜಾಕ್ಷನ - ವೈಕುಂಠಪುರವ |
ಸೇರಿಸೇರಿ ನೀ ಕುಣಿಕುಣಿದಾಡೊ 1
ಆರಗೊಡವೆ ಏನೋ - ನರಕದ |
ಆರಗೊಡವೆ ಏನೋ - ನರಕದ |
ದಾರಿ ತಪ್ಪಿಸುವರೆ ||
ನೀರಜಾಕ್ಷ ನಮ್ಮನಿರ್ಜರ ಪತಿಯಲಿ |
ಸೇರಿ - ಸೇರಿಸಿ ಮನ ನಲಿನಲಿದಾಡೊ 2
ಭಕ್ತಜನರ ಕೂಡೊ - ಭವಭಯ |
ಭಕ್ತಜನರ ಕೂಡೊ - ಭವಭಯ |
ಬತ್ತಿಪೋಪುದು ನೋಡೊ ||
ಮುಕ್ತಿದಾಯಕ ಶ್ರೀ ಪುರಂದರವಿಠಲನ |
ಭಕ್ತಿಯಿಂದ ನೀ ಹಾಡಿ ಕೊಂಡಾಡೊ 3
***
***
ರಾಗ ಸುರುಟಿ ಆದಿತಾಳ
pallavi
nAcike goL bEDa manadali yOcisi keDa bEDa
anupallavi
nIcavEno nammacyutanOlaga mecci koTTide ninagheccina padaviyu
caraNam 1
hari hari endodharo hattida pApagaLige bedharo
nIrajAkSa nirjarapati hariyendu sIri hAri bhOriDutali kuNiyo
caraNam 2
yAra kOdaveyeno narakada dhAri tappiparEno
sAri sArige sarvEshana nAmava bIri bIri kai mugidu koNDADO
caraNam 3
bhakta janara kUDo bhavabhaya batti pOpudu nODo
mukti dAyaka shrI purandara viTTalana bhaktiyinda nI pADuta kuNiyo
***
ನಾಚಿಕೆಗೊಳಬೇಡ ಮನದಲಿ , ಯೋಚಿಸಿ ಕೆಡಬೇಡ ||ಪ||
ನೀಚವೇನೊ ನಮ್ಮಚ್ಯುತನೋಲಗ , ಮೆಚ್ಚಿ ಕೊಟ್ಟಿದೆ ನಿನಗ್ಹೆಚ್ಚಿನ ಪದವಿಯು ||ಅ||
ಹರಿ ಹರಿ ಎಂದೊದರೊಹತ್ತಿದ, ದುರಿತಗಳಿಗೆ ಬೆದರೊ
ನೀರಜಾಕ್ಷ ನಿರ್ಜರಪತಿ ಹರಿಯೆಂದು, ಚೀರಿ ಹಾರಿ ಭೋರಿಡುತಲಿ ಕುಣಿಯೊ ||
ಯಾರ ಗೋಡವೆಯೆನೊ ನರಕದ, ಧಾರಿ ತಪ್ಪಿಪರೇನೊ
ಸಾರಿಸಾರಿಗೆ ಸರ್ವೇಶನ ನಾಮವ, ಬೀರಿ ಬೀರಿ ಕೈ ಮುಗಿದು ಕೊಂಡಾಡೋ ||
ಭಕ್ತಜನರ ಕೂಡೊ ಭವಭಯ , ಬತ್ತಿಪೋಪುದು ನೋಡೊ
ಮುಕ್ತಿದಾಯಕ ಶ್ರೀ ಪುರಂದರವಿಠಲನ, ಭಕ್ತಿಯಿಂದ ನೀ ಪಾಡುತ ಕುಣಿಯೊ ||
****
ನಾಚಿಕೆಗೊಳಬೇಡ ಮನದಲಿ , ಯೋಚಿಸಿ ಕೆಡಬೇಡ ||ಪ||
ನೀಚವೇನೊ ನಮ್ಮಚ್ಯುತನೋಲಗ , ಮೆಚ್ಚಿ ಕೊಟ್ಟಿದೆ ನಿನಗ್ಹೆಚ್ಚಿನ ಪದವಿಯು ||ಅ||
ಹರಿ ಹರಿ ಎಂದೊದರೊಹತ್ತಿದ, ದುರಿತಗಳಿಗೆ ಬೆದರೊ
ನೀರಜಾಕ್ಷ ನಿರ್ಜರಪತಿ ಹರಿಯೆಂದು, ಚೀರಿ ಹಾರಿ ಭೋರಿಡುತಲಿ ಕುಣಿಯೊ ||
ಯಾರ ಗೋಡವೆಯೆನೊ ನರಕದ, ಧಾರಿ ತಪ್ಪಿಪರೇನೊ
ಸಾರಿಸಾರಿಗೆ ಸರ್ವೇಶನ ನಾಮವ, ಬೀರಿ ಬೀರಿ ಕೈ ಮುಗಿದು ಕೊಂಡಾಡೋ ||
ಭಕ್ತಜನರ ಕೂಡೊ ಭವಭಯ , ಬತ್ತಿಪೋಪುದು ನೋಡೊ
ಮುಕ್ತಿದಾಯಕ ಶ್ರೀ ಪುರಂದರವಿಠಲನ, ಭಕ್ತಿಯಿಂದ ನೀ ಪಾಡುತ ಕುಣಿಯೊ ||
****
ನಾಚಿಕೆಗೊಳಬೇಡ ಮನದಲಿ ಯೋಚಿಸಿ ಕೆಡಬೇಡ - ಶ್ರೀ ಪುರಂದರ ದಾಸರು🙏
What's the scope of this song?
೧. ತನ್ನ ಕುಲಧರ್ಮ ಮಾಡುವಲ್ಲಿ ನಾಚಿಕೆಗೊಳಬೇಡ
೨. ತನ್ನ ಕರ್ತವ್ಯಗಳನ್ನು ಸರಿಯಾಗಿ ತಿಳಿಯುವಲ್ಲಿ ನಾಚಿಕೆಗೊಳಬೇಡ
೩. ತಪ್ಪು ಹೇಳುವವರು ನೂರು ಜನರಿರಲಿ, ಸರಿಯಾದ್ದನ್ನು ಹೇಳುವುದರಲ್ಲಿ ನಾಚಿಕೆಗೊಳಬೇಡ
೪. ಹತ್ತು ಜನರಿದ್ಹಂಗೆ ತಾನೂ ಇರಬೇಕು ಅನ್ನೋದು ತಪ್ಪು. ಸರಿಯಾದ್ದನ್ನು ಮಾಡುವಲ್ಲಿ ತಾನು minority ಪಕ್ಷದವನಾದರೂ ನಾಚಿಕೆಗೊಳಬೇಡ
೫. ಬ್ರಾಹ್ಮಣನಾಗಿದ್ದರೆ ಬ್ರಾಹ್ಮಣನಾಗಿ ಕಾಣುವಲ್ಲಿ ನಾಚಿಕೆಗೊಳಬೇಡ
೬. ತಾನು ತಿಳಿದದ್ದನ್ನು ತಮ್ಮವರಿಗೆ ಹೇಳುವಲ್ಲಿ ನಾಚಿಕೆಗೊಳಬೇಡ
೭. ತಮ್ಮ ಮಕ್ಕಳನ್ನು ಸ್ಕೂಲ್ ಬಿಡಿಸಿ ಗುರುಕುಲಕ್ಕೆ ಸೇರಿಸುವಲ್ಲಿ ನಾಚಿಕೆಗೊಳಬೇಡ
೮. ಶೂದ್ರರೇ ಚಾತುರ್ಮಾಸ್ಯ ಮಾಡಬೇಕಾದಾಗ, ಬ್ರಾಹ್ಮಣನಾಗಿದ್ದು ವ್ರತ ಮಾಡುವಲ್ಲಿ ನಾಚಿಕೆಗೊಳಬೇಡ
೯. ಅಪ್ಪ ಹಾಕಿದ ಮರ ಅಂಥ ನೇಣು ಹಾಕಿಕೊಳ್ಳದೆ, ಜೈನ, ಬೌದ್ಧ, ಶೈವ, ಅಭೇದ, ಇತ್ಯಾದಿ ಯಾವ ಮತವನ್ನು ಅನುಸರಿಸುತ್ತಿದ್ದರು ಎಲ್ಲವನ್ನು ಸರಿಯಾಗಿ ವಿಮರ್ಶೆ ಮಾಡಿ ತಿಳಿಯುವಲ್ಲಿ ನಾಚಿಕೆಗೊಳಬೇಡ
(ಸ್ವಧರ್ಮೆ ನಿಧನಂ ಶ್ರೇಯಃ ಅನ್ನೋದು ಯಾವ ಮತವನ್ನು ತಮ್ಮ ಹಿರಿಯರು ಪಾಲಿಸುತ್ತಿದ್ದಾರೋ ಅದನ್ನೆ ಪಾಲಿಸಬೇಕು ಅನ್ನೋ ಅರ್ಥದಲ್ಲಿ ಹೇಳಿದ್ದಲ್ಲ)
೧೦. ತನ್ನ ಸಂಬಂಧಿಕ/ಸ್ನೇಹಿತ ತನ್ನ ಮಗನನ್ನು ವಿದೇಶಕ್ಕೆ ಕಳಿಸಿದರೂ ತಾನು ಮಾತ್ರ ತನ್ನ ಮಗನನ್ನು ಪವಿತ್ರ ಭಾರತದ ನೆಲವನ್ನು ಬಿಡದೆ ಇಲ್ಲೇ ಇರಿಸುವಲ್ಲಿ ನಾಚಿಕೆಗೊಳಬೇಡ
***
No comments:
Post a Comment