ರಾಗ ನಾದನಾಮಕ್ರಿಯಾ. ಆದಿ ತಾಳ
ಗೋಪಿ ನಿನ್ನ ಮಗಗಾಗಿ ಕೇರಿಯ ಬಿಟ್ಟು
ಪೋಪೆವು ಬೆಳಗಾಗೆ ||ಪ||
ಮಕ್ಕಳನಾಡಗೊಡ, ಮನೆಯ
ಪೊಕ್ಕು ಉಕ್ಕುವ ಹಾಲು ಬಿಡ
ಘಕ್ಕನೆ ಕೊಂಡೋಡುವ, ಬೆನ್ನಟ್ಟಲು
ನಕ್ಕು ತಾ ಸೆರಗ ಬಿಡ ||
ಮೊಸರನೆಲ್ಲವ ಸುರಿವ, ನೆಲುವಿನ
ಹೊಸ ಬೆಣ್ಣೆಗೆ ಹಾರುವ
ಹಸುಳೆರೆಲ್ಲರಿಗೆ ಈವ, ಕೃಷ್ಣಯ್ಯ ತಾ
ಮುಸುಕಿನೊಳಗೆ ಜಾರುವ ||
ಅಂಥಿಂಥವನಲ್ಲಮ್ಮ ಈ ಮಗ
ಜಗದಂತರ್ಯಾಮಿ ಕಾಣಮ್ಮ
ಎಂತು ತಪ್ಪಿಸಿಕೊಂಡೆವು ನಾವು ಶ್ರೀ-
ಕಾಂತ ಪುರಂದರವಿಠಲನ ||
***
ಗೋಪಿ ನಿನ್ನ ಮಗಗಾಗಿ ಕೇರಿಯ ಬಿಟ್ಟು
ಪೋಪೆವು ಬೆಳಗಾಗೆ ||ಪ||
ಮಕ್ಕಳನಾಡಗೊಡ, ಮನೆಯ
ಪೊಕ್ಕು ಉಕ್ಕುವ ಹಾಲು ಬಿಡ
ಘಕ್ಕನೆ ಕೊಂಡೋಡುವ, ಬೆನ್ನಟ್ಟಲು
ನಕ್ಕು ತಾ ಸೆರಗ ಬಿಡ ||
ಮೊಸರನೆಲ್ಲವ ಸುರಿವ, ನೆಲುವಿನ
ಹೊಸ ಬೆಣ್ಣೆಗೆ ಹಾರುವ
ಹಸುಳೆರೆಲ್ಲರಿಗೆ ಈವ, ಕೃಷ್ಣಯ್ಯ ತಾ
ಮುಸುಕಿನೊಳಗೆ ಜಾರುವ ||
ಅಂಥಿಂಥವನಲ್ಲಮ್ಮ ಈ ಮಗ
ಜಗದಂತರ್ಯಾಮಿ ಕಾಣಮ್ಮ
ಎಂತು ತಪ್ಪಿಸಿಕೊಂಡೆವು ನಾವು ಶ್ರೀ-
ಕಾಂತ ಪುರಂದರವಿಠಲನ ||
***
pallavi
gOpi ninna magagAgi kEriya biTTu pOpevu beLagAgi
caraNam 1
makkaLanADakoDa maneya pokku ukkuva hAlu biDa
ghakkane koNDODuva bennaTTalu nakku tA seraga biDa
caraNam 2
mosaranellava suriva neluvina hosa beNNege hAruva
hasuLerellarige Iva krSNayya tA musugiLoLage jAruva
caraNam 3
andhindhavanallamma I maga jagadantaryAmi kANamma
endu tappisikoNDevu nAvu shrIkAnta purandara viTTalana
***
No comments:
Post a Comment