Thursday, 5 December 2019

ಗೋಕುಲದಲಿ ನಾನಿರಲಾರೆ ಗೋಪ್ಯಮ್ಮ ಕೇಳೇ purandara vittala

ರಾಗ ವಸಂತಭೈರವಿ. ಆದಿ ತಾಳ

ಗೋಕುಲದಲಿ ನಾನಿರಲಾರೆ, ಗೋಪ್ಯಮ್ಮ ಕೇಳೇ ||ಪ ||
ಹಾಲು ಮೊಸರ ನಾನೊಲ್ಲೆಂಬೆ
ಭರದಿಂದಲಿ ಬಂದು ಕಾಲಲಿ ಬಿದ್ದು ಕುಡಿಸುವರು ||ಅ ||

ತನುವಿಗೆ ಬಲವೆಂದು ಬೆಳೆಯಬೇಕೆಂದು
ಒಳಕಳುಹುತ ಕಳವಿನಿಕ್ಕಿಲಿ ಮಗುವು ಒಳಗಿನ ಗುಟ್ಟು
ಬೈಲ ಮಾಡಿ ನಮ್ಮ ಕದವನಿತ್ತೆ ಎನ್ನ ಬೆದರಿಸುತ್ತಾರೆ ||

ಮಂದಗಮನೇರು ತಾವು ಬಂದು ಕೈಹಿಡಿದುಕೊಂಡು
ಬಾ ಗೋವಿಂದನೆಂದು ಕರೆದು ಸದನದೊಳಗೆ
ಮಿಂದು ಹಾಸಿಗೆ ಹಾಸಿ ನಮ್ಮ ಆಧರವ ಸವಿದು
ಅವರ ಅಧರಧರಕ್ಕೆ ನಾ ಗಡಗಡ ನಡುಗಿದೆ ||

ತಮ್ಮ ಪುರುಷರ ಪ್ರೀತಿ ಬಿಟ್ಟು ಚೆನ್ನಾಗಿ ಎನ್ನ
ಬೆನ್ನಗೊಂಡರು ಹಗಲು ಇರುಳು
ರತಿದೇವಿ ಕೃತಿ ಅತಿಶಯ ದುಃಖಕೆ
ರತಿಪತಿ ಶರದೆ ವ್ರತದೊಳಗೆ ಪುರಂದರವಿಠಲನ್ನದೆ ||
***

pallavi

gOkuladali nAniralAre gOpyamma kELE

anupallavi

hAlu mosara nAnollembe bharadindali bandu kAlali biddu kuDisuvaru

caraNam 1

tanuvige balavendu beLeya bEkendu oLakaLuhuta kaLavinikkili
maguvu oLagina guTTu paila mADi namma kadavanitte enna pedarisuttAre

caraNam 2

mandagamanEru tAvu bandu kai hiDidu koNDu bA gOvindanendu karedu sadanadoLage
mindu hAsige hAsi namma Adharava savidu avara adharadharakke nA gaDagaDa naDugide

caraNam 3

tamma puruSara prIyi biTTu cennAgi enna benna goNDaru hagalu iruLu
rati dEvi krti atishaya dukkhake ratipati sharade vratadoLage purandara viTTalannade
***

No comments:

Post a Comment