ರಾಗ ಭೈರವಿ. ಝಂಪೆ ತಾಳ
ಎಲ್ಲಿ ವಿರಾಟಪೂಜೆ ಹೃದಯಕಮಲ
ಅಷ್ಟದಳ ಹೃಷೀಕೇಶ ನಾರಾಯಣಾ ಹಂಸಗಮನ ||ಪ||
ತುಂದಿ ತುದಿಯಲ್ಲಿ ಕೇಸರದಲ್ಲಿ ಧುಮುಕಿ
ಕರ್ಣಿಕಾನಾಳದಲಿ ಕಮಲ ಮೂಲ
ನಾಭಿಗೆ ಹೃತ್ಕಮಲಕ್ಕೆಲ್ಲ ಹತ್ತು ಅಂಗುಷ್ಟ
ಕಮಲ ಕೋಮಲನಾಳ ಕಮಲ ಅಧೋಮುಖ
ಕಮಲ ಕದಳಿಪುಷ್ಪದಂತೆ ಕಮಲ ಚಂದ್ರಕಾಂತಿಯಂತೆ
ಕಮಲ ವಿಶಾಲದ ದಿಕ್ಕು ಕಮಲ ಸ್ವರ್ಣದಂತಿಹುದು ||
ಅಷ್ಟದಳ ಹೃತ್ಕಮಲ ಅದಕ್ಕೆ ಮೂವತ್ತೆರಡು ಕೇಸರ
ಅಷ್ಟರಲ್ಲಿ ಕರ್ಣಿಕಾನಾಳ ಅರಸಿ ಶ್ರೀ ಭೂದೇವಿಯು
ಅಷ್ಟಬಾಹು ಅಷ್ಟಾಯುಧಾ ಅಂಗುಷ್ಟ ಮಾತ್ರ ವಿಷ್ಣು
ಅಷ್ಟ ದಿಕ್ಪಾಲಕರು ಇರಲು ಅಲ್ಲಿ ಬ್ರಹ್ಮಾದಿಗಳಿಂದ ||
ಶ್ವೇತವರ್ಣ ಕೃತಯುಗದಿ ತ್ರೇತಾಯುಗದಿ ರಕ್ತವರ್ಣ
ಪೀತವರ್ಣ ದ್ವಾಪರದಿ ಪ್ರತಿ ಕೃಷ್ಣವರ್ಣ ಕಲಿಯುಗದಿ
ದಾತ ಧನುರ್ಗುಣ ಬಾಣಧರ ಚಕ್ರ ಗದೆ ಪದ್ಮ
ಆತುರ್ಯ ಮುಸಲ ಖಡ್ಗ ಅಷ್ಟ ಬಾಹುಗಳಲಿ ||
ಪೂರ್ವದಳದಿ ಪುಣ್ಯಮಯದಿ ಜೀವನಿರುವ
ಆರುಢಾಗ್ನೇಯದಳದಿ ಆಲಸ್ಯ ಆಗಳಿಗೆ ನಿದ್ರೆ
ತೋರುತಿಪ್ಪ ಯಮದಿಕ್ಕಿನಲ್ಲಿ ತುಂಬಿದ ಕ್ರೋಧ
ಮಿಗೆ ಹರಿದಡೆ ನೈಋತ್ಯದಿ ಪಾಪಕೃತ್ಯ ||
ವರುಣದಿಕ್ಕಿನಲ್ಲಿ ವಿನೋದ ವಾಯವ್ಯದಿ ಘನಮನಸು
ಗುರುಕುಬೇರನ ದಿಕ್ಕಿನಲ್ಲಿಡುವನೂ ಅತಿ ಬುದ್ಧಿಯ
ತೆರಳಿ ಬಂದು ಈಶಾನ್ಯದಿ ದ್ರವ್ಯದಾನ ಮಾಡಿಸುವನದು
ದಿಕ್ಪಾಲಕರುಗಳಿಂದ ನಿಂತು ನಿಂತು ಬರುವ ||
ಜೀವಕ್ಕೆ ವೈರಾಗ್ಯವ ಜಗದೀಶನು ಮಧ್ಯ ಇದ್ದು
ಮೂವತ್ತೆರಡು ಕೇಸರದಿ ಮುಕುಂದ ಬರಲು ಜಾಗ್ರತೆ
ಭಾವವಿತ್ತು ಕರ್ಣಿಕೆಯಲ್ಲಿ ಬಂದು ಸ್ವಪ್ನಗಳ ತೋರಿ
ಹುವ್ವಿನಲಿ ಕಂಗಳ ಹೊಂದಿ ಸೂಸಿಸಿ ಇವನು ||
ಮಧ್ಯಕಮಲದಲಿ ಸೂರ್ಯ ಮಧ್ಯಸೂರ್ಯನಲಿ ಚಂದ್ರ
ಮಧ್ಯಚಂದ್ರನಲಿ ಅಗ್ನಿ ಮಧ್ಯ ತೇರು ಶೃಂಗಾರ
ಮಧ್ಯಜಗಲಿ ಕಲ್ಪವೃಕ್ಷ ಮಧ್ಯ ಮಂಟಪ
ಸ್ವರ್ಣದಿಂದಾ ಪ್ರಭೆ ಪೀಠಸಾಸಿರ ಫಣಿಮಧ್ಯ ಶ್ರ್‍ಈಭೂನಾರಾಯಣ ||
ಹವಳಸ್ಫಟಿಕಕಂಬ ನೂರು ಹಾಟಕನವರತ್ನದಲೇರು
ಹವಣೆ ನಾಲ್ಕು ಮೂಲ ಜಗಲಿ ಹಲವು ರತ್ನದಲಿ ಹಾದು
ವಿವಿಧ ಮುತ್ತಿನ ಗೊಂಜಲು ವಿಚಿತ್ರ ಧ್ವಜಪತಾಕೆಗಳು
ರವಿಕೋಟಿ ಪ್ರಕಾಶದಲಿ ರಥ ಹೊಳೆವುತಿರಲು ||
ಮಲ್ಲಿಗೆ ಕುಂದ ಮಂದಾರ ಮರುಗ ಕೇತಕಿ ಸಂಪಿಗೆಯಲಿ
ಮಂಟಪ ಶೃಂಗಾರ ಅನೇಕ ಪೂವಿಲಿ ಮಂದಿರಾಸಲುವ
ಕಲ್ಪವೃಕ್ಷದ ಕೆಳಗೆ ಸ್ವರ್ಣಪಟ ಸಿಂಹಾಸನಾ ಪ್ರಭೆ-
ಯಲ್ಲಿಕೋಟಿ ಸೂರ್ಯಪ್ರಕಾಶ ಇರುವ ವಿಷ್ಣು ಚತುರ್ಭುಜದಿ ||
ಅನೇಕ ಕೋಟಿ ಸೂರ್ಯಪ್ರಕಾಶ ಅಲ್ಲಿ ಮುಕುಟಾಟೋಪ ಮಸ್ತಕ
ವನಜನಾಭಗೆ ಕಡಗ ಕಂಕಣ ವರದಾಭಯ ಹಸ್ತದಿ
ಕನಕಾಂಗ ಕಸ್ತೂರಿ ಪ್ರೇಮ ಕರುಣಿ ಪ್ರಸನ್ನವದನ ಶುಭ
ಮನೋಹರ ದಯಾಮೂರ್ತಿ ಮಂದಹಾಸ ಮುಖಾಂಬುಜದಿ ||
ಅಣಿಮಾದಿ ಅಷ್ಟೈಶ್ವರ್ಯ ಅದು ಮೂರ್ತಿಸಿ ಆರಾಧಿಸಲು ಅಣುವಾಗಿ
ಬ್ರಹ್ಮರುದ್ರಾದ್ಯರು ಅನಾರಾರಂಜುಲ್ಲಿ ಮಾಡಲು
ಕಣಿಯಾಗಿ ನಾರದಾದ್ಯರು ಕೈಮುಗಿದು ಗಾಯನ ಮಾಡಲು
ಕುಣಿವ ಊರ್ವಶಿ ರಂಭಾ ಮೇನಕೇ ತಿಲೋತ್ತಮೆಯರು ||
ಸನಕಾದಿ ಯೋಗಿಗಳು ಸ್ತೋತ್ರಗಳ ಮಾಡಲು
ಮನುಜೇಶ್ವರು ವಂದಿಸುತ ಮಾಗಧರು ಹೊಗಳಲು
ಅನೇಕ ದಿವ್ಯಾಭರಣದಿ ಅಲ್ಲಿ ಕೈಕಂಕಣವು ಭಯ ಪಾರ್ಶ್ವದಿ
ಕನಕ ಕಾಮಿನಿ ಛತ್ರ ಚಾಮರವ ಕಾಂತೆಯರಿಬ್ಬರು ಢಾಳಿಸಲು ||
ದುರ್ವಿಜ್ಞೇಯ ದುರಾರಾಧ್ಯ ದುಷ್ಟಾಗಮ್ಯ ಜನಾರ್ದನಾ
ನಿರ್ವಿಘ್ನದಿ ಅಧೋಮುಖದಿ ರಜಾದಿ ನೇಲಲಷ್ಟಗಿಪ್ಪನ
ಪೂರ್ವದಲಿ ಮಾನಸಪೂಜೆ ಉಪಾಸ್ತಿ ಅರ್ಜುನ ಕೇಳಲು
ಸರ್ವಾಂತರ್ಯಾಮಿ ಕೃಷ್ಣ ಸ್ವಾಮಿ ಉಪಾಯವ ಪೇಳಿದ ||
ಭಾವ ಪ್ರಾಣ ವ್ಯಾಹೃತಿ ವಾಯು ಬದ್ಧದಲಿ ಹೃತ್ತ್ಕಮಲ
ನೋವಿಲ್ಲದೆ ಅಧೋಮುಖದಿ ದಿನದಿನಕು ಉನ್ನತದಿ ಅರಳುವುದು
ಆವಾಹನವು ಆಸನವು ಅಂತರದಿ ಪಾದ್ಯವು
ದೇವಗರ್ಘ್ಯ ಆಚಮನಾದಿಗಳು ಉಪಚಾರಿಸೆ ||
ಅತಳದಲಿ ಪಾದವಿಹುದು ಆ ಪದಾರ್ಧ ವಿತಳದಲಿ
ಸುತಳದಿಪ್ಪುದು ಜಂಘೆಗಳು ಸೋಘ್ರಜಾನು ರಸಾತಳದಿ
ತತಿಲಿ ಕೊಡೆ ಮಹಾತಳದಿ ತಳಾತಳದಿ ಗುಹ್ಯವಿಪ್ಪುದು
ಪ್ರತಿಯಿಲ್ಲದಾ ಕಟಿಬದಿಲಿ ಪಾತಾಳವಿಪ್ಪುದು ||
ಭೂಲೋಕದಲಿ ಮಧ್ಯಮ ಭುವರ್ಲೋಕದಲಿ ಕುಕ್ಷಿ
ಮೇಲೆ ಸುವರ್ಲೋಕ್ದಲಿ ಮೃದು ಹೃದಯ ಶ್ರೀವತ್ಸ
ಶ್ರೀಲೋಲರ ಕುಕ್ಷಿಗಳು ಸೇರಿಪ್ಪುದು ಮಹರ್ಲೋಕದಿ
ಮೇಲೆ ಕೌಸ್ತುಭ ಜನೋಲೋಕದಿ ಮತ್ತೆ ಕೊರಳಿಪ್ಪುದು ||
ತಪೋಲೋಕದಿ ಲಲಾಟ ತಲೆ ಸತ್ಯಲೋಕದಲಿ
ವಿಪರೀತ ವಿರಾಟರೂಪ ವಿಶ್ವ ತೈಜಸ ಪ್ರಾಜತುರ್ಯ
ಉಪೇಂದ್ರ ಎಪ್ಪತ್ತೆರಡು ಸಾಸಿರ ಉಪನಾಡಿಯಲಿಪ್ಪ ಪಾರ್ಶ್ವನಾಗಿ
ಕಪಟ ನಾಟಕ ಸೂತ್ರಧಾರಿ ಕಾಣು ಪುರಂದರವಿಠಲ ||
***
ಎಲ್ಲಿ ವಿರಾಟಪೂಜೆ ಹೃದಯಕಮಲ
ಅಷ್ಟದಳ ಹೃಷೀಕೇಶ ನಾರಾಯಣಾ ಹಂಸಗಮನ ||ಪ||
ತುಂದಿ ತುದಿಯಲ್ಲಿ ಕೇಸರದಲ್ಲಿ ಧುಮುಕಿ
ಕರ್ಣಿಕಾನಾಳದಲಿ ಕಮಲ ಮೂಲ
ನಾಭಿಗೆ ಹೃತ್ಕಮಲಕ್ಕೆಲ್ಲ ಹತ್ತು ಅಂಗುಷ್ಟ
ಕಮಲ ಕೋಮಲನಾಳ ಕಮಲ ಅಧೋಮುಖ
ಕಮಲ ಕದಳಿಪುಷ್ಪದಂತೆ ಕಮಲ ಚಂದ್ರಕಾಂತಿಯಂತೆ
ಕಮಲ ವಿಶಾಲದ ದಿಕ್ಕು ಕಮಲ ಸ್ವರ್ಣದಂತಿಹುದು ||
ಅಷ್ಟದಳ ಹೃತ್ಕಮಲ ಅದಕ್ಕೆ ಮೂವತ್ತೆರಡು ಕೇಸರ
ಅಷ್ಟರಲ್ಲಿ ಕರ್ಣಿಕಾನಾಳ ಅರಸಿ ಶ್ರೀ ಭೂದೇವಿಯು
ಅಷ್ಟಬಾಹು ಅಷ್ಟಾಯುಧಾ ಅಂಗುಷ್ಟ ಮಾತ್ರ ವಿಷ್ಣು
ಅಷ್ಟ ದಿಕ್ಪಾಲಕರು ಇರಲು ಅಲ್ಲಿ ಬ್ರಹ್ಮಾದಿಗಳಿಂದ ||
ಶ್ವೇತವರ್ಣ ಕೃತಯುಗದಿ ತ್ರೇತಾಯುಗದಿ ರಕ್ತವರ್ಣ
ಪೀತವರ್ಣ ದ್ವಾಪರದಿ ಪ್ರತಿ ಕೃಷ್ಣವರ್ಣ ಕಲಿಯುಗದಿ
ದಾತ ಧನುರ್ಗುಣ ಬಾಣಧರ ಚಕ್ರ ಗದೆ ಪದ್ಮ
ಆತುರ್ಯ ಮುಸಲ ಖಡ್ಗ ಅಷ್ಟ ಬಾಹುಗಳಲಿ ||
ಪೂರ್ವದಳದಿ ಪುಣ್ಯಮಯದಿ ಜೀವನಿರುವ
ಆರುಢಾಗ್ನೇಯದಳದಿ ಆಲಸ್ಯ ಆಗಳಿಗೆ ನಿದ್ರೆ
ತೋರುತಿಪ್ಪ ಯಮದಿಕ್ಕಿನಲ್ಲಿ ತುಂಬಿದ ಕ್ರೋಧ
ಮಿಗೆ ಹರಿದಡೆ ನೈಋತ್ಯದಿ ಪಾಪಕೃತ್ಯ ||
ವರುಣದಿಕ್ಕಿನಲ್ಲಿ ವಿನೋದ ವಾಯವ್ಯದಿ ಘನಮನಸು
ಗುರುಕುಬೇರನ ದಿಕ್ಕಿನಲ್ಲಿಡುವನೂ ಅತಿ ಬುದ್ಧಿಯ
ತೆರಳಿ ಬಂದು ಈಶಾನ್ಯದಿ ದ್ರವ್ಯದಾನ ಮಾಡಿಸುವನದು
ದಿಕ್ಪಾಲಕರುಗಳಿಂದ ನಿಂತು ನಿಂತು ಬರುವ ||
ಜೀವಕ್ಕೆ ವೈರಾಗ್ಯವ ಜಗದೀಶನು ಮಧ್ಯ ಇದ್ದು
ಮೂವತ್ತೆರಡು ಕೇಸರದಿ ಮುಕುಂದ ಬರಲು ಜಾಗ್ರತೆ
ಭಾವವಿತ್ತು ಕರ್ಣಿಕೆಯಲ್ಲಿ ಬಂದು ಸ್ವಪ್ನಗಳ ತೋರಿ
ಹುವ್ವಿನಲಿ ಕಂಗಳ ಹೊಂದಿ ಸೂಸಿಸಿ ಇವನು ||
ಮಧ್ಯಕಮಲದಲಿ ಸೂರ್ಯ ಮಧ್ಯಸೂರ್ಯನಲಿ ಚಂದ್ರ
ಮಧ್ಯಚಂದ್ರನಲಿ ಅಗ್ನಿ ಮಧ್ಯ ತೇರು ಶೃಂಗಾರ
ಮಧ್ಯಜಗಲಿ ಕಲ್ಪವೃಕ್ಷ ಮಧ್ಯ ಮಂಟಪ
ಸ್ವರ್ಣದಿಂದಾ ಪ್ರಭೆ ಪೀಠಸಾಸಿರ ಫಣಿಮಧ್ಯ ಶ್ರ್‍ಈಭೂನಾರಾಯಣ ||
ಹವಳಸ್ಫಟಿಕಕಂಬ ನೂರು ಹಾಟಕನವರತ್ನದಲೇರು
ಹವಣೆ ನಾಲ್ಕು ಮೂಲ ಜಗಲಿ ಹಲವು ರತ್ನದಲಿ ಹಾದು
ವಿವಿಧ ಮುತ್ತಿನ ಗೊಂಜಲು ವಿಚಿತ್ರ ಧ್ವಜಪತಾಕೆಗಳು
ರವಿಕೋಟಿ ಪ್ರಕಾಶದಲಿ ರಥ ಹೊಳೆವುತಿರಲು ||
ಮಲ್ಲಿಗೆ ಕುಂದ ಮಂದಾರ ಮರುಗ ಕೇತಕಿ ಸಂಪಿಗೆಯಲಿ
ಮಂಟಪ ಶೃಂಗಾರ ಅನೇಕ ಪೂವಿಲಿ ಮಂದಿರಾಸಲುವ
ಕಲ್ಪವೃಕ್ಷದ ಕೆಳಗೆ ಸ್ವರ್ಣಪಟ ಸಿಂಹಾಸನಾ ಪ್ರಭೆ-
ಯಲ್ಲಿಕೋಟಿ ಸೂರ್ಯಪ್ರಕಾಶ ಇರುವ ವಿಷ್ಣು ಚತುರ್ಭುಜದಿ ||
ಅನೇಕ ಕೋಟಿ ಸೂರ್ಯಪ್ರಕಾಶ ಅಲ್ಲಿ ಮುಕುಟಾಟೋಪ ಮಸ್ತಕ
ವನಜನಾಭಗೆ ಕಡಗ ಕಂಕಣ ವರದಾಭಯ ಹಸ್ತದಿ
ಕನಕಾಂಗ ಕಸ್ತೂರಿ ಪ್ರೇಮ ಕರುಣಿ ಪ್ರಸನ್ನವದನ ಶುಭ
ಮನೋಹರ ದಯಾಮೂರ್ತಿ ಮಂದಹಾಸ ಮುಖಾಂಬುಜದಿ ||
ಅಣಿಮಾದಿ ಅಷ್ಟೈಶ್ವರ್ಯ ಅದು ಮೂರ್ತಿಸಿ ಆರಾಧಿಸಲು ಅಣುವಾಗಿ
ಬ್ರಹ್ಮರುದ್ರಾದ್ಯರು ಅನಾರಾರಂಜುಲ್ಲಿ ಮಾಡಲು
ಕಣಿಯಾಗಿ ನಾರದಾದ್ಯರು ಕೈಮುಗಿದು ಗಾಯನ ಮಾಡಲು
ಕುಣಿವ ಊರ್ವಶಿ ರಂಭಾ ಮೇನಕೇ ತಿಲೋತ್ತಮೆಯರು ||
ಸನಕಾದಿ ಯೋಗಿಗಳು ಸ್ತೋತ್ರಗಳ ಮಾಡಲು
ಮನುಜೇಶ್ವರು ವಂದಿಸುತ ಮಾಗಧರು ಹೊಗಳಲು
ಅನೇಕ ದಿವ್ಯಾಭರಣದಿ ಅಲ್ಲಿ ಕೈಕಂಕಣವು ಭಯ ಪಾರ್ಶ್ವದಿ
ಕನಕ ಕಾಮಿನಿ ಛತ್ರ ಚಾಮರವ ಕಾಂತೆಯರಿಬ್ಬರು ಢಾಳಿಸಲು ||
ದುರ್ವಿಜ್ಞೇಯ ದುರಾರಾಧ್ಯ ದುಷ್ಟಾಗಮ್ಯ ಜನಾರ್ದನಾ
ನಿರ್ವಿಘ್ನದಿ ಅಧೋಮುಖದಿ ರಜಾದಿ ನೇಲಲಷ್ಟಗಿಪ್ಪನ
ಪೂರ್ವದಲಿ ಮಾನಸಪೂಜೆ ಉಪಾಸ್ತಿ ಅರ್ಜುನ ಕೇಳಲು
ಸರ್ವಾಂತರ್ಯಾಮಿ ಕೃಷ್ಣ ಸ್ವಾಮಿ ಉಪಾಯವ ಪೇಳಿದ ||
ಭಾವ ಪ್ರಾಣ ವ್ಯಾಹೃತಿ ವಾಯು ಬದ್ಧದಲಿ ಹೃತ್ತ್ಕಮಲ
ನೋವಿಲ್ಲದೆ ಅಧೋಮುಖದಿ ದಿನದಿನಕು ಉನ್ನತದಿ ಅರಳುವುದು
ಆವಾಹನವು ಆಸನವು ಅಂತರದಿ ಪಾದ್ಯವು
ದೇವಗರ್ಘ್ಯ ಆಚಮನಾದಿಗಳು ಉಪಚಾರಿಸೆ ||
ಅತಳದಲಿ ಪಾದವಿಹುದು ಆ ಪದಾರ್ಧ ವಿತಳದಲಿ
ಸುತಳದಿಪ್ಪುದು ಜಂಘೆಗಳು ಸೋಘ್ರಜಾನು ರಸಾತಳದಿ
ತತಿಲಿ ಕೊಡೆ ಮಹಾತಳದಿ ತಳಾತಳದಿ ಗುಹ್ಯವಿಪ್ಪುದು
ಪ್ರತಿಯಿಲ್ಲದಾ ಕಟಿಬದಿಲಿ ಪಾತಾಳವಿಪ್ಪುದು ||
ಭೂಲೋಕದಲಿ ಮಧ್ಯಮ ಭುವರ್ಲೋಕದಲಿ ಕುಕ್ಷಿ
ಮೇಲೆ ಸುವರ್ಲೋಕ್ದಲಿ ಮೃದು ಹೃದಯ ಶ್ರೀವತ್ಸ
ಶ್ರೀಲೋಲರ ಕುಕ್ಷಿಗಳು ಸೇರಿಪ್ಪುದು ಮಹರ್ಲೋಕದಿ
ಮೇಲೆ ಕೌಸ್ತುಭ ಜನೋಲೋಕದಿ ಮತ್ತೆ ಕೊರಳಿಪ್ಪುದು ||
ತಪೋಲೋಕದಿ ಲಲಾಟ ತಲೆ ಸತ್ಯಲೋಕದಲಿ
ವಿಪರೀತ ವಿರಾಟರೂಪ ವಿಶ್ವ ತೈಜಸ ಪ್ರಾಜತುರ್ಯ
ಉಪೇಂದ್ರ ಎಪ್ಪತ್ತೆರಡು ಸಾಸಿರ ಉಪನಾಡಿಯಲಿಪ್ಪ ಪಾರ್ಶ್ವನಾಗಿ
ಕಪಟ ನಾಟಕ ಸೂತ್ರಧಾರಿ ಕಾಣು ಪುರಂದರವಿಠಲ ||
***
pallavi
elli virATa pUje hrdaya kamala aSTadaLa hrSIkEsha nArAyaNA hamsa gamana
anupallavi
tundi tudiyalli kEsaradalli dhumuki karNikAnALadali kamala mUla
caraNam 1
nAbhige hrtkamalakkella hattu anguSTa kamala kOmalanALa kamala adhOmukha kamala
kadaLi puSpadante kamala candrakAntiyante kamala vishAlada dikku kamala svarNadantihudu
caraNam 2
aSTadaLa hrtkamala adakke mUvatteraDu kEsara aSTaralli karNikAnALa arasi shrI bhUdEviyu
aSTabAhu aSTAyudhA anguSTa mAtra viSNu aSTa digpAlakaru iralu alli brahmAdigaLinda
caraNam 3
shvEta varNa krtayugadi trEtAyugadi rakta varNa pIta varNa dvAparadi prati krSNa varNa kaliyugadi
dAta dhanurguNa bANadhara cakra gade padma Aturya musala khaDga aSTa bAhugaLali
caraNam 4
pUrva daLadi puNyamadi jIvaniruva AroDhAgnEya daLadi Alasya AgaLige nidre
tOrutippa yama dikkinalli tumbida krOdha mige haridaDe nair-rudyati pApa krtya
caraNam 5
varuNa dikkinalli vinOda vAyavyadi manasu guru kubErana dikkinalliDuvanU ati buddhiya
teraLi bandu IshAnyadi dravya dAna mADisuvanadu digpAlakarugaLinda nintu nintu baruva
caraNam 6
jIvakke vairAgyava jagadIshanu madhya iddu mUvatteraDu kEsaradi mukunda baralu jAgrate
bhAvavittu karNikeyalli bandu svapnagaLa tOri huvvinali kangaLa hondi sUsili ivanu
caraNam 7
madhya kamaladali sUrya madhya sUryanali candra madhya candranali agni madhya tEru shrngAra
madhya jagali kalpavrkSa madhya maNTapa svarNadindA prabhe pITha sAsira phaNi madhya shRi bU nArAyaNa
caraNam 8
havaLa spaTika kamba nUru hATaka navaratnadalEru havaNe nAlku mUla jagali halavu ratnadalihAdu
vividha muttina konjalu vicitra dhvajapatAkegaLu ravikOTi prakAshadali ratha hoLevutiralu
caraNam 9
mallige kunda mandAra maruga kEtaki sampigeyali maNTapa shrngAra anEka pUvili mandirAsaluva
kalpa vrkSada keLage svarNapaTa simhAsanA prabheyalli kOTi sUrya prakAsha iruva viSNu caturbhujadi
caraNam 10
anEka kOTi sUrya prakASha alli mukuTATOpa mastaka vanajanAbhage kaDaga kankaNa varadAbhaya hastadi
kanakAnga kastUri prEma karuNi prasanna vadana shubha manOhara dayAmUrti mandahAsa mukhAmbujadi
caraNam 11
aDimADi aSTaishvarya adu mUrtisi ArAdhisalu aNuvAgi brahma rudrAdyaru anArAranjali mADalu
kaNiyAgi nAradAdyaru kai mugidu gAyana mADalu kuNiva Urvashi rambhA mEnak tilOttameyaru
1
caraNam 2
sanakAdi yOgigaLu stOtragaLa mADalu manujEshvaru vandisuta mAgadharu hOgaLalu anEka divyAbharaNadi
alli kai kankaNavubahya pArshvadi kanaka kAmini chatra cAmarava kAnteyaribbaru DhALisalu
1
caraNam 3
dur-vigjnEya durArAdhya duSTgamya janArdanA nirvighnadi adhO mukhadi rAjAdi nElalaSTagippana
pUrvadali mAnasa pUje upAsti arjuna kELalu sarvAntaryAmi krSNa svAmi upAyava pELida
1
caraNam 4
bhAva prANa vyAhrdi vAyu baddhadali hrtkamala nOvillade adhO mukhadi dinadinaku unnatadi araLuvudu
avAhanavu Asanavu andaradi vAdyavu dEvagarghya AcamanAdigaLu upacArise
1
caraNam 5
ataLadali pAdavihudu A pAdArtha vitaLadali sutaLadippudu janghegaLu sOghrajAnu rasAdaLadi
tatili koDe mahAdaLadi daLAdaLadi guhyavippudu pratiyilladA kapaTadili pAtALavippudu
1
caraNam 6
bhUlOkadali madhyama pUrvalOkadali kukSi mEle suvarlOkdali mrdu hrdaya shrIvatsa
shrI lOlara kukSigaLu sErippudu maharlOkadi mEle kaustubha janOlOkadi matte koraLippudu
1
caraNam 7
tapOlOkadi lalATa tale satya lOkadali viparIta virATa rUpa vishva taijasa prAgjnya turya upEndra
eppatteraDu ssira upa nADiyalippa pArshvanAgi kapaTa nATka sUtradhAri kANu purandara viTTala
***
No comments:
Post a Comment