ಆಗಮವನು ತಂದವನೆ ರಂಗ
ಬೇಗದಿ ಗಿರಿಯ ಪೊತ್ತವನೆ
ಮೂಗಿಂದ ಭೂಮಿಯನೆತ್ತಿದನೆ ಶಿಶು
ಕೂಗಲು ಕಂಭದಿಂದೊದಗಿದನೆ ಕೃಷ್ಣ ೧
ಧರಣಿಯ ಈರಡಿ ಮಾಡಿದನೆ ಭೂ-
ಸುರನಾಗಿ ಪರಶುವ ಧರಿಸಿದನೆ
ಭರದಿ ಕೋಡಗ ಹಿಂಡ ಕೂಡಿದನೆ ಫಣಿ-
ಶಿರದಲಿ ಕುಣಿಕುಣಿದಾಡಿದನೆ ರಂಗ ೨
ಉಟ್ಟಿದ್ದ ಬಟ್ಟೆಯ ಬಿಸುಟಿಹನೆ ರಂಗ
ದಿಟ್ಟ ತೇಜಿಯನೇರಿ ಮೆರೆಯುವನೆ
ದುಷ್ಟರನೆಲ್ಲ ಸಂಹರಿಸಿದನೆ ನಮ್ಮ
ದಿಟ್ಟ ಪುರಂದರ ವಿಟ್ಠಲನೆ ಕೃಷ್ಣ ೩
***
pallavi
enthaenthavane rangayya enthanenthavane
caraNam 1
Agamavanu tadavane ranga bEkadi giriya pottavane mUginda
bhUmiyanettidane shishu kUgalu kambhadindodagidane krSNa
caraNam 2
dharaNiya IraDi mADidane bhUsurAnAgi paravasha dharisidane
bharadi kODaga hiNDa kUDidane phaNi shiradali kuNi kuNidADidane ranga
caraNam 3
uttidda baTTeya bisuTihane ranga diTTa tEjiyanEri mereyuvane
duSTaranella samharisidane namma diTTa purandara viTTalane krSNa
***
No comments:
Post a Comment