ಸಂಸಾರವೆಂಬಂಥ ಭಾಗ್ಯವಿರಲಿ ||ಪ||
ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ||
ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ
ಪೊಂದಿದ ಅಣ್ಣನು ವನಜಸಂಭವನು
ಇಂದುಮುಖಿ ಸರಸ್ವತೀದೇವಿಯೆ ಅತ್ತಿಗೆಯು
ಎಂದಿಂದಿಗೂ ವಾಯುದೇವರೆ ಗುರುವು ||
ಭಾರತೀದೇವಿಯೆ ಗುರುಪತ್ನಿ ಎನಗೆ
ಗರುಡಶೇಷಾದಿಗಳೆ ಗುರುಪುತ್ರರು
ಹರಿದಾಸನೆಂಬುವರೆ ಇಷ್ಟಬಾಂಧವರೆನಗೆ
ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು ||
ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ
ಹರಿಯ ನಾಮವೆ ಇನ್ನು ಅಮೃತಪಾನ
ವರದ ಪುರಂದರವಿಠಲ ನಿನ್ನ ಪಾದಧ್ಯಾನ
ಕರುಣಿಸಿ ಅನವರತ ಕರಪಿಡಿದು ಕಾಯೊ ||
***
ರಾಗ ಕಾಂಭೋಜ ಅಟತಾಳ (raga tala may differ in audio)
pallavi
samsAravembanda bhAgyavirali
anupallavi
kamsAri nenevemba saubhAgyavirali
caraNam 1
tande nInE krSNa tAyi indire dEvi pondida aNNanu vanaja sambhavanu
indumukhi sarasvatI dEviye attigeyu endindigU vAyudEvare guruvu
caraNam 2
bhArati dEviye guru patni enage garuDa shESAdigaLe guruputraru
hari dAsanembuvare iSTa bAndhavarenage hari bhajane naDeyutiha sthaLave mandirava
caraNam 3
sarvAbhimAnavanu tyajisuvude susnAna hariya nAmave innu amrtapAna
varada purandara viTTala ninna pAda dhyAna karuNisi anavarata kara piDidu kAyo
***
No comments:
Post a Comment