Sunday 5 December 2021

ಏನು ಇಲ್ಲದ ಎರಡು ದಿನದ ಸಂಸಾರ ankita neleyadikeshava ENU ILLADA ERADU DINADA SAMSAARA





ಏನು ಇಲ್ಲದ(/ಇಲ್ಲವೋ) ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ||

ಹಸಿದು ಬಂದವರಿಂಗೆ ಅಶನವೀಯಲುಬೇಕು
ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು

ಹಸನಾದ ಭೂಮಿಯನು ಧಾರೆಯೆರೆಯಲುಬೇಕು
ಭಾಷೆ ಕೊಟ್ಟ್ ಬಳಿಕ ನಿಜವಿರಲು ಬೇಕು ||೧||

ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ
ಠೌಳಿಗಾರನು ಆಗಿ ತಿರುಗಬೇಡ
ಕುಳ್ಳಿರ್ದ ಸಭೆಯೊಳಗೆ ತಿತ್ಯವ ನಡೆಸಬೇಡ
ಒಳ್ಳೆಯವನೆಂಬ ಉಬ್ಬಲು ಬೇಡ ಮನುಜ ||೨||

ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮೆರೆಯಬೇಡ
ಸಿರಿವಂತನಾದರೇ ನೆಲೆಯಾದಿಕೇಶವನ
ಚರಣ ಕಮಲವ ಸೇರಿ ಸುಖಿಯಾಗು ಮನುಜ ||೩||
****

ರಾಗ ಮುಖಾರಿ & ರೇಗುಪ್ತಿ ಝಂಪೆತಾಳ (raga, taala may differ in audio)

Enu illada eradu dinada samsara,
Jnanadali dana-dharmava madiraiyya||pa||

Hasidu bandavarige asanaviyalu beku,
Sisuvige palpenne unisa beku,
Hasanada bumiyanu dhareyereyali beku,
Husi madadane BA nadesale beku||1||

Kallatanagala madi odala horeyalu beda,
Kullirta sabeyolage kutila nadesalu beda,
Olleyava nanendu balu hemmelira beda,
Balve sthiravendu ni nambi keda beda||2||

Doretanavu bandaga ketta nudiyalu beda,
Sirivanta kalakke mereya beda,
Sirivantanadare nele adikeuvana,
Charana kamalava seri suki Agu manuja||3||
***

ಏನು ಇಲ್ಲದ  ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ||

ಹಸಿದು ಬಂದವರಿಂಗೆ ಅಶನವೀಯಲುಬೇಕು
ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು
ಹಸನಾದ ಭೂಮಿಯನು ಧಾರೆಯೆರೆಯಲುಬೇಕು
ಭಾಷೆ ಕೊಟ್ಟ್ ಬಳಿಕ ನಿಜವಿರಲು ಬೇಕು ||೧||

ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ
ಠೌಳಿಗಾರನು ಆಗಿ ತಿರುಗಬೇಡ
ಕುಳ್ಳಿರ್ದ ಸಭೆಯೊಳಗೆ ತಿತ್ಯವ ನಡೆಸಬೇಡ
ಒಳ್ಳೆಯವನೆಂಬ ಉಬ್ಬಲು ಬೇಡ ಮನುಜ ||೨||

ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮೆರೆಯಬೇಡ
ಸಿರಿವಂತನಾದರೇ ನೆಲೆಯಾದಿಕೇಶವನ
ಚರಣ ಕಮಲವ ಸೇರಿ ಸುಖಿಯಾಗು ಮನುಜ ||೩||
********

No comments:

Post a Comment