Friday, 6 December 2019

ಹೋಗಬೇಡ ನಿಗಮಾನುತ ಮಧುರೆಗೆ purandara vittala

ರಾಗ ದ್ವಿಜಾವಂತಿ ಆದಿತಾಳ

ಹೋಗಬೇಡ ನಿಗಮಾನುತ ಮಧುರೆಗೆ
ಹೋಗಬೇಡ ಹರಿಯೇ ||ಪ||
ಪೋಗುವೆ ನೀ ಪುನರಾಗಮವೆಂದಿಗೆ
ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ ||ಅ||

ಬಾಲತನದಲಿ ಬಲು ಲೀಲೆಗಳಿಂದ ಗೋಪಾಲರೊಡಗೂಡಿ
ಬಾಳ ಪ್ರೇಮದಿ ನಮ್ಮಾಲಯದೊಳಪೊಕ್ಕು ಪಾಲು ಬೆಣ್ಣೆಯ ಬೇಡಿ
ಶೀಲಮಾರುತಿ ನಿನ್ನೊಲುಮೆಗೆ ಸಿಲುಕಿದ
ಬಾಲೆಯರಾ ಸ್ಮರನಂಬಿಗೆ ಮಾಡಿ ||

ಹುಟ್ಟಿದ್ದು ಮಧುರೆ , ತಂದಿಟ್ಟದ್ದು ಗೋಕುಲಕೆ , ಪಟ್ಟದರಸು ಎನಿಸಿ
ಬೆಟ್ಟಿಲಿ ಬೆಟ್ಟವನೆತ್ತಿ ಪೊರೆದೆ , ಬಂದ ಕಷ್ಟವ ಪರಿಹರಿಸಿ
ಕೃಷ್ಣಮೂರುತಿ ಪರಮೇಷ್ಟಿಗಳರಸೆ ನ-
ಮ್ಮಿಷ್ಟದೇವನೆ ಈಗ ಬಿಟ್ಟು ಪೋಗದಿರೊ ||

ಮಾರಮಣನೆ ಕರುಣಾಕರನೆಂಬುದು ತೋರಲಿಲ್ಲವೊ ನಮಗೆ
ಸೇರಿದವರ ಮೊರೆ ಲಾಲಿಸದಿರ್ದಡೆ ಯಾರೆಲೊ ಗತಿ ನಮಗೆ
ಮಾರಜನಕ ಗುರುಪುರಂದರವಿಟ್ಠಲ
ಗಾರು ಮಾಡದೆ ನಮ್ಮ ಸೇರಿ ಸುಖಿಸುತಿರು ||
*******

No comments:

Post a Comment