Sunday, 29 December 2019

ತೋಳು ತೋಳು ತೋಳು ರಂಗ purandara vittala TOLU TOLU TOLU RANGA TOLANNAADAI


 






ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||

ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||

ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ
ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ
ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ
ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||

ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ
ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ
ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ
ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ ||

ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
ಅರ್ಜುನರಥಕೆ ಸಾರಥ್ಯ ಮಾಡಿದ ತೋಳನ್ನಾಡೈ
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ
ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||

ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ
ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ
ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ
ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||
***

ರಾಗ ಮುಖಾರಿ ಅಟ ತಾಳ  (AUDIO RAGA MAYBE DIFFERENT)

Tholu tholu tholu ranga tholannadai

Nila varnada bala krishnane tholannadai

Huluguraralelle magaigalanitta tholannadai
Swami galiru galiruemba gejjegalinda naliyuta tholanadai||1||

Niluvige silukada/nilukhada oralatanditta tholanadai
Swami cheluva makkala muttu manikyane tholannadai||2||

Putaniyembavala asuvane hiridavane tholanada
Swami mateya pitana anugana maduhida tholanadai||3||

Matige shishupalana shiravanu kadida tholanadai
Swami shree tulasiya priya nitya vinoda tholanadai||4||

Nakhadinda hiranyakana udarava seelida tholanadai
Swami sukhavanittu prahladana kayda tholannadai||5||

Vikhalita ghalisida gopiyarellara tholannadai
Swami sukhatheerthara pati purandaravittalane tholanadai||6||
***

pallavi

tOLu tOLu tOLu ranga tOLannADai sbvAmi nIlavarNada bAlakrSNane tOLannADai

caraNam 1

huliyuguraraLele mAgAyigaLa niTTa tOLannADai svAmi khalirembanduge gejjeli nalivutta tOLannADai

caraNam 2

neluvige nilukade oraLa tandiTTa tOLannADai svAmi caluva makkaLa muddu mANikave tOLannADai

caraNam 3

pUtaniyembavaLasuvane hIrida tOlannADai svAmi mAteya pitana anugaLa maDuhida tOLannADai

caraNam 4

mAtige shishupAlana shira tarida tOlannADai svAmi shrI tulasiya priya nityavinOdi tOLannAdai

caraNam 5

daTTaDiyiDutale beNNeya meluva tOLannADai svAmi kaTTida karaDiya karuvendeLedA tOlannADai

caraNam 6

baTTala hAla ollendu kADida tOlannADai svAmi baTTaloLuNavise naguvAdane tOlannADai

caraNam 7

sajjana satyake dharmava naDesida tOLannADai svAmiarjunaradake sArathya mADida tOlannADai

caraNam 8

lajjegITAda draupadi kAida tOlannADai svAmi vajra panjara pANDava priya tOLannADai

caraNam 9

nakhadinda hiraNyakanudara bagida tOlannADai svAmi sukhadindali prahlAdana kAida tOlannADai

caraNam 10

vikhaLitageDisida gOpa strIyara tOlannADai svAmi sukhatIrttara pati purandara viTTala tOlannADai
***
just scroll down for other devaranama 

ತೋಳು ತೋಳು ತೋಳು ಕೃಷ್ಣ – ತೋಳನ್ನಾಡೈ |

ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈ ||ಪ||

ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋಳನ್ನಾಡೈ |

ಅಲುಗುವ ಅರಳೆಲೆ ಮಾಯಾಯ್ಮಿನುಗಲು ತೋಳನ್ನಾಡೈ ||

ನೆಲವು ನಿಲುಕದೆಂದೊರಳ ತಂದಿಡುವನೆ ತೋಳನ್ನಾಡೈ ||

ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋಳನ್ನಾಡೈ||೧||

ಅಂಬೆಗಾಲಿಲೊಂದೊರಳನ್ನೆಳೆವನೆ ತೋಳನ್ನಾಡೈ |

ತುಂಬಿದ ಬಂಡಿಯ ಮುರಿಯಲೊದ್ದವನೆ ತೋಳನ್ನಾಡೈ ||

ಕಂಬದಿಂದಲವತರಿಸಿದವನೆ ನೀ ತೋಳನ್ನಾಡೈ |

ನಂಬಿದವರನ ಹೊರೆವ ಕೃಷ್ಣ ತೋಳನ್ನಾಡೈ ||೨||

ಕಾಲಕೂಟದ ವಿಷವ ಕಲಕಿದ ತೋಳನ್ನಾಡೈ |

ಕಾಳಿಂಗನ ಹೆಡೆಯನು ತುಳಿದ ತೋಳನ್ನಾಡೈ ||

ಕಾಳಗದಲಿ ದಶಕಂಠನ ಮಡುಹಿದ ತೋಳನ್ನಾಡೈ |

ಶಾಲಕ ವೈರಿಯೆ ಕರುಣಿಗಳರಸನೆ ತೋಳನ್ನಾಡೈ ||೩||

ನಖದಿಂದಲಿ ಹಿರಣ್ಯಕನನು ಸೀಳಿದ ತೋಳನ್ನಾಡೈ |

ಸುಖವನಿತ್ತು ಪ್ರಹ್ಲಾದನ ಕಾಯ್ದವ ತೋಳನ್ನಾಡೈ ||

ವಿಕಳಗೊಳಿಸಿದೆ ಗೋಪಿಯರೆಲ್ಲರ ತೋಳನ್ನಾಡೈ |

ರುಕುಮಿಣಿಪತಿ ಸಿರಿಪುರಂದರವಿಟ್ಠಲ ತೋಳನ್ನಾಡೈ ||೪||
***


<b>rAga: navarOju – tALa…..<-b>

tOLu tOLu tOLu kRuShNa – tOLannADai |
nIlamEGashyAma kRuShNa tOLannADai ||pa||

galikeMbaMduge uliyuva gejjeya tOLannADai |
aluguva araLele mAyAyminugalu tOLannADai ||
nelavu nilukadeMdoraLa taMdiDuvane tOLannADai ||
celuva makkaLa mANikyave nI tOLannADai||1||

aMbegAliloMdoraLanneLevane tOLannADai |
tuMbida baMDiya muriyaloddavane tOLannADai ||
kaMbadiMdalavatarisidavane nI tOLannADai |
naMbidavarana horeva kRuShNa tOLannADai ||2||

kAlakUTada viShava kalakida tOLannADai |
kALiMgana heDeyanu tuLida tOLannADai ||
kALagadali dashakaMThana maDuhida tOLannADai |
shAlaka vairiye karuNigaLarasane tOLannADai ||3||

naKadiMdali hiraNyakananu sILida tOLannADai |
suKavanittu prahlAdana kAydava tOLannADai ||
vikaLagoLiside gOpiyarellara tOLannADai |
rukumiNipati siripuraMdaraviTThala tOLannADai ||4||
***

ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ
ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈ

ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋಳನ್ನಾಡೈ
ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋಳನ್ನಾಡೈ
ನೆಲುವು ನಿಲುಕದೆಂದೊರಳ ತಂದಿಡುವನೆ ತೋಳನ್ನಾಡೈ
ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋಳನ್ನಾಡೈ

ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋಳನ್ನಾಡೈ
ಕಟ್ಟಿದ ಕರಡೆಯ ಕರುವೆಂದೆಳೆವನೆ ತೋಳನ್ನಾಡೈ
ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋಳನ್ನಾಡೈ
ಬಟ್ಟಲ ಹಾಲನು ಕುಡಿದು ಕುಣಿವನೇ ತೋಳನ್ನಾಡೈ

ಅಂಬೆಗಾಲಿಲೊಂದೊರಳನ್ನೆಳೆವನೆ ತೋಳನ್ನಾಡೈ
ತುಂಬಿದ ಬಂಡಿಯ ಮುರಿಯಲೊದ್ದವನೆ ತೋಳನ್ನಾಡೈ
ಕಂಬದಿಂದಲವತರಿಸಿದವನೆ ನೀ ತೋಳನ್ನಾಡೈ
ನಂಬಿದವರನು ಹೊರೆವ ಕೃಷ್ಣ ತೋಳನ್ನಾಡೈ

ಕಾಲಕೂಟದ ವಿಷವ ಕಲಕಿದ ತೋಳನ್ನಾಡೈ
ಕಾಳಿಂಗನ ಹೆಡೆಯನು ತುಳಿದ ತೋಳನ್ನಾಡೈ
ಕಾಳೆಗದಲಿ ದಶಕಂಠನ ಮಡುಹಿದ ತೋಳನ್ನಾಡೈ
ಶಾಲಕ ವೈರಿಯೆ ಕರುಣಿಗಳರಸನೆ ತೋಳನ್ನಾಡೈ

ನಖದಿಂದಲಿ ಹಿರಣ್ಯಕನನು ಸೀಳಿದ ತೋಳನ್ನಾಡೈ
ಸುಖವನಿತ್ತು ಪ್ರಹ್ಲಾದನ ಕಾಯ್ಡವ ತೋಳನ್ನಾಡೈ
ವಿಕಳಗೊಳಿಸಿದೆ ಗೋಪಿಯರೆಲ್ಲರ ತೋಳನ್ನಾಡೈ
ರುಕುಮಿಣಿಪತಿ ಸಿರಿಪುರಂದರವಿಟ್ಠಲ ತೋಳನ್ನಾಡೈ
********

ತೋಳು ತೋಳು ತೋಳು ರಂಗ 
ತೋಳನ್ನಾಡೈ ಸ್ವಾಮಿ
ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
                                     ||ತೋಳು||

ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ 
ತೋಳನ್ನಾಡೈ 
ಸ್ವಾಮಿ,ಘಲಿರು ಘಲಿರೆಂಬ 
ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
                        ||ಹುಲಿಯುಗುರರಳೆಲೆ||
ನಿಲುವಿಗೆ ನಿಲುಕದೆ ಒರಳ ತಂದಿಟ್ಟ 
ತೋಳನ್ನಾಡೈ ಸ್ವಾಮಿ
ಚೆಲುವ ಮಕ್ಕಳ ಮುದ್ದು ಮಾಣಿಕವೆ 
ತೋಳನ್ನಾಡೈ 
                                             ||ತೋಳು||

ಪೂತನಿಯೆಂಬವಳಸುವನೆ ಹೀರಿದ 
ತೋಳನ್ನಾಡೈ 
ಸ್ವಾಮಿ ಮಾತೆಯ ಪಿತನ ಅನುಜನ 
ಮಡುಹಿದ ತೋಳನ್ನಾಡೈ||ಪೂತನಿ||
ಮಾತಿಗೆ ಶಿಶುಪಾಲನ ಶಿರತರಿದ 
ತೋಳನ್ನಾಡೈ ಸ್ವಾಮಿ
ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ 
ತೋಳನ್ನಾಡೈ 
                                                   ||ತೋಳು||

ಸತ್ಯಕೆ ಧರ್ಮವ ನಡೆಸಿದ 
ತೋಳನ್ನಾಡೈ 
ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ 
ತೋಳನ್ನಾಡೈ                    ||ಸಜ್ಜನ||
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ 
ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ 
ತೋಳನ್ನಾಡೈ  
                                        ||ತೋಳು||

ನಖದಿಂದ ಹಿರಣ್ಯಕನುದರವ ಸೀಳಿದ 
ತೋಳನ್ನಾಡೈ
ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ 
ತೋಳನ್ನಾಡೈ                   ||ನಖದಿಂದ||
ವಿಖಳಿತಗೆಡಿಸಿದ ಗೋಪಸ್ತ್ರೀಯರ 
ತೋಳನ್ನಾಡೈ
ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ 
ತೋಳನ್ನಾಡೈ                       ||ತೋಳು||
****

just scroll down for other devaranama 

No comments:

Post a Comment