Sunday, 29 December 2019

ನಿನ್ನನ್ನಾಶ್ರಯಿಸುವೆನು ನಿಗಮಗೋಚರ ನಿತ್ಯ purandara vittala NINNANAASHRYISUVENU NIMAGOCHARA NITYA




 



ನಿನ್ನ ಆಶ್ರಯಿಸುವೆನು ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ ||ಪ||

ಕುಂದಣದ ಆಶ್ರಯ ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗೆ
ಕಂದರ್ಪನಾಶ್ರಯ ವಸಂತ ಕಾಲಕ್ಕೆ
ಗೋವಿಂದನಾಶ್ರಯವು ಮರಣಕಾಲದೊಳು ||

ಹಣ್ಣುಳ್ಳ ಮರಗಳು ಪಕ್ಷಿಗಳಾಶ್ರಯವು
ಪುಣ್ಯನದಿಗಳು ಋಷಿಗಳಾಶ್ರಯವು
ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು
ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು ||

ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು
ಯತಿಗಳಿಗೆ ಶ್ರುತಿ ಪ್ರಣವದಾಶ್ರಯವು
ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವು
ಹಿತವಾದ ಪುರಂದರವಿಠಲನಾಶ್ರಯವು ||
****

ರಾಗ ಕಲ್ಯಾಣಿ. ಝಂಪೆ ತಾಳ (raga, taala may differ in audio)

pallavi

ninnAshrayisuvenu nigama gOcara itya benna biDade kAyo manadiSTavIyO

caraNam 1

kundaNada Ashraya navaratnagaLigella candirana Ashraya cakOrage
kandarpanAshraya vasanta kAlakke gOvindanAshrayavu maraNa kAladoLu

caraNam 2

haNNuLLa maragaLu pakSigaLAshrayavu puNya nadigaLu rSigaLAshrayavu
kaNNilladAtage kaigOlinAshrayavu tanniSTa paDedavage ninna Ashrayavu

caraNam 3

pativrate vanitege patiyonde Ashrayavu matigaLige shruti praNavadAshrayavu
mativantanike hari stutigaLE Ashrayavu hitavAda purandara viTTalanAshrayavu
***

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯಬೆನ್ನ ಬಿಡದಲೆ ಕಾಯೊ ಮನದಿಷ್ಟವೀಯೋ ಪ

ಕುಂದಣದ ಆಶ್ರಯವು ನವರತ್ನಗಳಿಗೆಲ್ಲಚಂದಿರನ ಆಶ್ರಯ ಚಕೋರಗಳಿಗೆ ||ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋವಿಂದ ನಿನ್ನಾಶ್ರಯವು ಮರಣಕಾಲದೊಳು 1

ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವುಪುಣ್ಯನದಿಗಳು ಋಷಿಗಳಿಂಗೆ ಆಶ್ರಯವು ||ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವುಎನ್ನಿಷ್ಟ ಪಡೆಯುವರೆ ನಿನ್ನ ಆಶ್ರಯವು 2

ಪತಿವ್ರತಾವನಿತೆಗೆ ಪತಿಯೊಂದೆ ಆಶ್ರಯವುಯತಿಗಳಿಗನುಶ್ರುತದಿ ಪ್ರಣವದಾಶ್ರಯವು ||ಮತಿವಂತನಿಗೆಹರಿಸ್ತುತಿಗಳೇ ಆಶ್ರಯವುಹಿತವಹುದು ಪುರಂದರವಿಠಲನಾಶ್ರಯವು 3
****


No comments:

Post a Comment