Wednesday, 4 December 2019

ಎಲ್ಲಾನು ಬಲ್ಲೆನೆಂಬುವಿರಲ್ಲ ಎಲ್ಲವನು purandara vittala ELLANU BALLENEMBUVIRALLA ELLAVANU



raga ಮಧ್ಯಮಾವತಿ

ಪುರಂದರದಾಸರು

ಎಲ್ಲಾನು ಬಲ್ಲೆನೆಂಬುವಿರಲ್ಲ
ಅವಗುಣ ಬಿಡಲಿಲ್ಲ ||ಪ||

ಸೊಲ್ಲಿಗೆ ಶರಣರ ಕಥೆಗಳ ಪೇಳುತ
ಅಲ್ಲದ ನುಡಿಯನು ನುಡಿಯುವಿರಲ್ಲ ||ಅ||

ಕಾವಿಯನುಟ್ಟು ತಿರುಗುವಿರಲ್ಲ, ಕಾಮವ ಬಿಡಲಿಲ್ಲ
ನೇಮ ನಿಷ್ಠೆಗಳ ಮಾಡುವಿರಲ್ಲ, ತಾಮಸ ಬಿಡಲಿಲ್ಲ
ತಾವೊಂದರಿಯದೆ ಪರರನು ತಿಳಿಯದೆ, ಶ್ವಾನನ ಕುಳಿಯಲಿ ಬೀಳುವಿರಲ್ಲ ||

ಗುರುಗಳ ಸೇವೆ ಮಾಡಿದರಿಲ್ಲ , ಗುರುತಾಗಲಿಲ್ಲ
ಪರಿಪರಿ ದೇಶವ ತಿರುಗಿದರಿಲ್ಲ, ಪೊರೆಯುವರಿನ್ನಿಲ್ಲ
ಅರಿವೊಂದರಿಯದೆ ಆಗಮ ತಿಳಿಯದೆ, ನರಕಕೂಪದಲಿ ಬೀಳುವಿರಲ್ಲ ||

ಬ್ರಹ್ಮ ಜ್ಞಾನಿಗಳು ಎನಿಸುವಿರಲ್ಲ, ಹಮ್ಮು ಬಿಡಲಿಲ್ಲ
ಸುಮ್ಮನೆ ಯಾಗವ ಮಾಡುವಿರಲ್ಲ, ಸುಳ್ಳನು ಬಿಡಲಿಲ್ಲ
ಗಮ್ಮನೆ ಪುರಂದರವಿಠಲನ ಪಾದಕೆ, ಹೆಮ್ಮೆ ಬಿಟ್ಟು ನೀವೆರಗಲೆ ಇಲ್ಲ ||
****

ರಾಗ ಮಧ್ಯಮಾವತಿ. ಆದಿ ತಾಳ (raga, taala may differ in audio)

pallavi

ellAnu ballenembuviralla ava guNa biDalilla

anupallavi

sollige sharaNara kathegaLa pELuta allada nuDiyanu nuDiyuviralla

caraNam 1

kAviyanuTTu tiruguviralla kAmava biDalilla nEma niSTegaLa mADuviralla
tAmasa biDalilla tAvondariyade pararanu tiLiyade shvAnana kuLiyali bILuvarilla

caraNam 2

gurugaLa sEve mADidarilla gurutAgavilla paripari dEshava tirugidarilla
poreyuvarinnilla arivondariyade Agama tiLiyade naraka rUpadali bILuviralla

caraNam 3

brahma jnAnigaLu enisuviralla hammu biDalilla summane yAgava mADuviralla
suLLanu biDalilla gmmane purandara viTTalana pAdake hemme biTTu nIveragale illa
***

ಎಲ್ಲವನು ಬಲ್ಲೆನೆನ್ನುವಿರಲ್ಲಸಲ್ಲದಗುಣಬಿಡಲಿಲ್ಲ ಪ.

ಸೊಲ್ಲಿಗೆ ಶರಣರ ಕಥೆಗಳ ಪೇಳುತಅಲ್ಲದನುಡಿಗಳ ನುಡಿಯುವಿರಲ್ಲಅಪಕಾವಿಯನುಟ್ಟು ತಿರುಗುವಿರಲ್ಲಕಾಮವ ಬಿಡಲಿಲ್ಲನೇಮ - ನಿಷ್ಠೆಗಳ ಮಾಡವಿರಲ್ಲತಾಮಸ ಬಿಡಲಿಲ್ಲತಾವೊಂದರಿಯದೆ ಪರರಲಿ ತಿಳಿಯದೆಕೀವದ ಕುಳಿಯಲಿ ಬೀಳುವಿರಲ್ಲ 1

ಗುರುಗಳ ಸೇವೆಯ ಮಾಡಿದಿರಲ್ಲಗುರುತಾಗಲೆ ಇಲ್ಲಪರಿಪರಿ ದೇಶವ ತಿರಿಗಿದಿರಲ್ಲಪೊರೆಯುವರಿನ್ನಿಲ್ಲಅರಿವೊಂದರಿಯದೆಆಗಮ ತಿಳಿಯದೆನರಕಕೂಪದಲಿ ಬೀಳುವಿರಲ್ಲ 2

ಬ್ರಹ್ಮಜ್ಞಾನಿಗಳೆನಿಸುವಿರಲ್ಲಹಮ್ಮನು ಬಿಡಲಿಲ್ಲಸುಮ್ಮನೆ ಯಾಗವ ಮಾಡುವಿರಲ್ಲಹೆಮ್ಮೆಯ ಬಿಡಲಿಲ್ಲಗಮ್ಮನೆ ಪುರಂದರವಿಠಲನ ಪಾದಕೆಒಮ್ಮೆಯಾದರು ನೀವೆರಗಲೆ ಇಲ್ಲ 3
******

No comments:

Post a Comment