ರಾಗ ಕೇದಾರಗೌಳ. ಅಟ ತಾಳ
ಎಷ್ಟು ತಾಳಲಿ ಗೋಪ್ಯಮ್ಮ , ಏನು ಮಾಡಲಿ ನಿಮ್ಮ
ಕೃಷ್ಣನಟ್ಟುಳಿಯ ಘನ, ಇಂದಿನ ದಿನ ||ಪ||
ಉದಯವಾಗದ ಮುನ್ನ ಉದಧಿಶಯನ ನಿನ್ನೆ
ದಧಿಘೃತದ ಓಕುಳಿಯೆಮ್ಮೊಳು ಆದಿ
ಚದುರೆರೆಲ್ಲರು ಕೂಡಿ ಸಾರಿಯಾಜ್ಞೆಯ ಮಾಡಿ
ಸೂರೆಗೊಂಬುವರೆ ಹೀಗೇ ಸುಮ್ಮನೆ ಹೇಗೆ ||
ಬಿಡದೆ ಮನೆಯ ಪೋಗಬೇಡವೆಂದರೆ ಮಿಕ್ಕ
ಎಲ್ಲಿ ಕಂಡರಲ್ಲಿ ಸಿಕ್ಕ ಎಂಥವನಕ್ಕ
ಹಲವು ಮಾತುಗಳಾಡಿ ಸಲುಗೆಯಿಂದ ಕೂಡಿ
ನಿಲುಕಿ ನಿಲುಕಿ ನೋಡಿ ಬೇಗದಿ ಓಡಿ ||
ಗುಡುಗನಿಕ್ಕುತ ಬಂದನಡು ಮನೆಯಲಿ ನಿಂದ
ಕಡವ ಕಡೆಗೋಲನು ಪಿಡಿದು ತಂದ
ಹಿಡಿ ಹಿಡಿ ಎಂದರೆ ನಡೆವ ನಟನೆಯಂದ
ನಡುಬೀದಿಯಲಿ ನಂಬಿಸುತಲು ಬಂದ ||
ನಂಬಿಸಿ ಹತ್ತಿರ ಬಂದನಲ್ಲೆ ಕಕ್ಕುತ ನಿಂದ
ಜಡೆಯ ಪಿಡಿದು ಹಾರಿ ಹೆಗಲನೇರಿ
ಕಣ್ಣಮುಚ್ಚಿನ ಆಟವಾ ಆಡುತಾಡುತ ಬಂದ
ಸಣ್ಣ ಒಲ್ಲಿಯ ಮುಸುಕಿಟ್ಟನೆಂತವ ದಿಟ್ಟ ||
ಬಗೆಬಗೆ ಕಟಿಯಿಂದ ನೆರೆದು ಚುಂಬಿಸಿ ಬಂದ
ಶಶಿಮುಖಿಯರೊಳಗೆ ಮಾಡ್ವರೆ ಹೀಗೆ
ಮುಗುಳುನಗೆಯ ನಕ್ಕು ಮುದ್ದಿಸಿಯಾಡಿದನಕ್ಕ
ಹೊದ್ದಿ ಎನ್ನ ಬೆನ್ನನೇರಿ ಗುದ್ದಿದನಕ್ಕ ||
ತಂದೆತಾಯ್ಗಳ ಬೈದ ತಳಿತಳಿರೆಲೆ ಕೊಯ್ದ
ಒಂದು ಮಾತಾದರು ಪೇಳೆ ತರವಲ್ಲ ಕೇಳೆ
ಎಳೆತುಳಸಿಯ ಕಿತ್ತ ಎಂಜಲು
ಗುಳಿದಸುವ ಕಡೆಗಣ್ಣಿನಲಿ ||
ಕಂಡ ಖಳರ ಗಂಡ
ಹಡಗನೇರುತ ಬಂದ
ಬಿಡದೆ ಉಡುಪಿಲಿ ನಿಂದ
ಒಡೆಯ ಶ್ರೀಪುರಂದರವಿಠಲ ಚೆಂದ ||
***
ಎಷ್ಟು ತಾಳಲಿ ಗೋಪ್ಯಮ್ಮ , ಏನು ಮಾಡಲಿ ನಿಮ್ಮ
ಕೃಷ್ಣನಟ್ಟುಳಿಯ ಘನ, ಇಂದಿನ ದಿನ ||ಪ||
ಉದಯವಾಗದ ಮುನ್ನ ಉದಧಿಶಯನ ನಿನ್ನೆ
ದಧಿಘೃತದ ಓಕುಳಿಯೆಮ್ಮೊಳು ಆದಿ
ಚದುರೆರೆಲ್ಲರು ಕೂಡಿ ಸಾರಿಯಾಜ್ಞೆಯ ಮಾಡಿ
ಸೂರೆಗೊಂಬುವರೆ ಹೀಗೇ ಸುಮ್ಮನೆ ಹೇಗೆ ||
ಬಿಡದೆ ಮನೆಯ ಪೋಗಬೇಡವೆಂದರೆ ಮಿಕ್ಕ
ಎಲ್ಲಿ ಕಂಡರಲ್ಲಿ ಸಿಕ್ಕ ಎಂಥವನಕ್ಕ
ಹಲವು ಮಾತುಗಳಾಡಿ ಸಲುಗೆಯಿಂದ ಕೂಡಿ
ನಿಲುಕಿ ನಿಲುಕಿ ನೋಡಿ ಬೇಗದಿ ಓಡಿ ||
ಗುಡುಗನಿಕ್ಕುತ ಬಂದನಡು ಮನೆಯಲಿ ನಿಂದ
ಕಡವ ಕಡೆಗೋಲನು ಪಿಡಿದು ತಂದ
ಹಿಡಿ ಹಿಡಿ ಎಂದರೆ ನಡೆವ ನಟನೆಯಂದ
ನಡುಬೀದಿಯಲಿ ನಂಬಿಸುತಲು ಬಂದ ||
ನಂಬಿಸಿ ಹತ್ತಿರ ಬಂದನಲ್ಲೆ ಕಕ್ಕುತ ನಿಂದ
ಜಡೆಯ ಪಿಡಿದು ಹಾರಿ ಹೆಗಲನೇರಿ
ಕಣ್ಣಮುಚ್ಚಿನ ಆಟವಾ ಆಡುತಾಡುತ ಬಂದ
ಸಣ್ಣ ಒಲ್ಲಿಯ ಮುಸುಕಿಟ್ಟನೆಂತವ ದಿಟ್ಟ ||
ಬಗೆಬಗೆ ಕಟಿಯಿಂದ ನೆರೆದು ಚುಂಬಿಸಿ ಬಂದ
ಶಶಿಮುಖಿಯರೊಳಗೆ ಮಾಡ್ವರೆ ಹೀಗೆ
ಮುಗುಳುನಗೆಯ ನಕ್ಕು ಮುದ್ದಿಸಿಯಾಡಿದನಕ್ಕ
ಹೊದ್ದಿ ಎನ್ನ ಬೆನ್ನನೇರಿ ಗುದ್ದಿದನಕ್ಕ ||
ತಂದೆತಾಯ್ಗಳ ಬೈದ ತಳಿತಳಿರೆಲೆ ಕೊಯ್ದ
ಒಂದು ಮಾತಾದರು ಪೇಳೆ ತರವಲ್ಲ ಕೇಳೆ
ಎಳೆತುಳಸಿಯ ಕಿತ್ತ ಎಂಜಲು
ಗುಳಿದಸುವ ಕಡೆಗಣ್ಣಿನಲಿ ||
ಕಂಡ ಖಳರ ಗಂಡ
ಹಡಗನೇರುತ ಬಂದ
ಬಿಡದೆ ಉಡುಪಿಲಿ ನಿಂದ
ಒಡೆಯ ಶ್ರೀಪುರಂದರವಿಠಲ ಚೆಂದ ||
***
pallavi
eStu tALali gOpyamma Enu mADali nimma krSNanaTTULiya ghana indina dina
caraNam 1
udayavAgada munna uddhishayana ninne tadhi kharutada OguLiyemmoLu Adi
caturarellaru kUDi sAriyAjneya mADi sure kombuvare hIgE summane hEge
caraNam 2
biDade maneya pOga bEDavendare mikka elli kaNDaralli sikki enthavanakka
halavu mAtugaLADi salukeyinda kUDi nilugi nilugi nODi bEgadi Odi
caraNam 3
guDuganikkuda banda naDu maneyali ninda kaDave kOlanu piDidu tanda
hiDi hiDi endare naDeva naDaneyanda naDu bhItiyali nambisutalu banda
caraNam 4
nambisi hattira bandanalle kakkuda ninda jaDeya piDidu hAri hEgalanEri
kaNNa muccina ATavAADutADuta banda saNNa olliya musugiTTanentava diTTa
caraNam 5
bage bage kaDiyinda neredu cumbisi banda shashimukhiyaroLage mADavare hIge
muguLu nageya nakku muddisiyADidanakka hotti enna bennanEri guddidanakka
caraNam 6
tande tAigaLa baidu taLitaLirele koidu ondu mAtAdaru bELe taravalla kELe
ene tuLasiya kitta enjalu guLidasuva kaDe kaNNinali
caraNam 7
kaNDa khaLara haDaganEruta banda biDade
uDupili ninda oDeya shrI purandara viTTala cenda
***
No comments:
Post a Comment