Friday 27 December 2019

ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ others NINNA NAMBI BANDE PANCHAMUKHI PRAANA



brahmanya teertha stutih

ಸಾಗರಕಟ್ಟೆ ಶ್ರೀ ಪ್ರದ್ಯುಮ್ನತೀರ್ಥರ ಕೃತಿ

ankita narahari 

 ರಾಗ : ರಂಜನಿ   ಆದಿತಾಳ

ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ
ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ॥ಪ॥

ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ
ಸಿಂಧು ದಾಟಿ ಸೀತೆಗೆರಗಿ ನಿಂದು
ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ
ಕೊಂದ ರಕ್ಕಸ ಪುರವನನಲಗೆ ಇತ್ತೆ॥೧॥

ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು
ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ
ಮಂದಮತಿಗಳನಳಿದು ತಂದಿ ಸೌಂಗಂಧಿಕವ
ಪುಂಡ ಕೀಚಕರಳಿದ ಪಾಂಡವಪ್ರಿಯದೂತ॥೨॥

ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ
ಬೋಧಿಸಿ ಸುಜನರಿಗೆ ಮಾಧವನ ಗುಣವ
ಸಾಧು ವಂದಿತ ಬಾದರಾಯಣರು ಇರುತಿರುವ
ಬದರಿಯಲ್ಲಿರುವ ಶ್ರೀ ನರಹರಿಯ ತೋರೋ॥೩॥
***


" ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ..."

ರಚನೆ : ಪ್ರದ್ಯುಮ್ನತೀರ್ಥರು
(ಸಾಗರ ಕಟ್ಟೆ ಮಠದ ಪ್ರಪ್ರಥಮ ಪೀಠಾಧಿಪತಿಗಳು)

*******


No comments:

Post a Comment