Audio by Mrs. Nandini Sripad
ಶ್ರೀ ಕನಕದಾಸರ ಕೃತಿ
ರಾಗ ಮುಖಾರಿ ಖಂಡಛಾಪುತಾಳ
ಹೂವ ತರುವರ ಮನೆಗೆ ಹುಲ್ಲ ತರುವೆ ॥ ಪ ॥
ಆವ ಪರಿಯಲಿ ಕಾಯೋ ದೇವ ಚಿನ್ಮಯನೆ ॥ ಅ ಪ ॥
ಈರೇಳು ಜನುಮದಿಂ ದಾಸನಾಗಿಹೆ ನಾನು ।
ಸೇರಿದೆನೊ ತವ ಶರಣರ ಸೇವೆಗೆ ॥
ಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿ ।
ನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ ॥ 1 ॥
ರಂಗನಾಥನೆ ನಿನ್ನ ಡಿಂಗರಿಗನೋ ನಾನು ।
ಡಂಗುರವ ಹೊಯಿಸಯ್ಯ ದಾಸನೆಂದು ॥
ಭಂಗಪಡಿಸದೆ ನೀನು ಶರಣರೊಳಗಿಂಬಿಟ್ಟು ।
ಗಂಗೆಜನಕನೆ ಕಾಯೊ ಚರಣಕ್ಕೆ ಶರಣು ॥ 2 ॥
ಎಷ್ಟು ಮಾಡಲು ನಿನ್ನ ಬಂಟನೋ ವೈಷ್ಣವರ ।
ಹುಟ್ಟು ದಾಸಿಯ ಮಗನೋ ಪರದೇಶಿಯೋ ॥
ಸೃಷ್ಟಿಗೊಡೆಯನೆ ನೆಲೆಯಾದಿಕೇಶವನೆ ಕೈ - ।
ಬಿಟ್ಟೆಯಾದರೆ ನಿನಗೆ ಹರಿದಾಸರಾಣೆ ॥ 3 ॥
*******
ಶ್ರೀ ಕನಕದಾಸರ ಕೃತಿ
ರಾಗ ಮುಖಾರಿ ಖಂಡಛಾಪುತಾಳ
ಹೂವ ತರುವರ ಮನೆಗೆ ಹುಲ್ಲ ತರುವೆ ॥ ಪ ॥
ಆವ ಪರಿಯಲಿ ಕಾಯೋ ದೇವ ಚಿನ್ಮಯನೆ ॥ ಅ ಪ ॥
ಈರೇಳು ಜನುಮದಿಂ ದಾಸನಾಗಿಹೆ ನಾನು ।
ಸೇರಿದೆನೊ ತವ ಶರಣರ ಸೇವೆಗೆ ॥
ಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿ ।
ನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ ॥ 1 ॥
ರಂಗನಾಥನೆ ನಿನ್ನ ಡಿಂಗರಿಗನೋ ನಾನು ।
ಡಂಗುರವ ಹೊಯಿಸಯ್ಯ ದಾಸನೆಂದು ॥
ಭಂಗಪಡಿಸದೆ ನೀನು ಶರಣರೊಳಗಿಂಬಿಟ್ಟು ।
ಗಂಗೆಜನಕನೆ ಕಾಯೊ ಚರಣಕ್ಕೆ ಶರಣು ॥ 2 ॥
ಎಷ್ಟು ಮಾಡಲು ನಿನ್ನ ಬಂಟನೋ ವೈಷ್ಣವರ ।
ಹುಟ್ಟು ದಾಸಿಯ ಮಗನೋ ಪರದೇಶಿಯೋ ॥
ಸೃಷ್ಟಿಗೊಡೆಯನೆ ನೆಲೆಯಾದಿಕೇಶವನೆ ಕೈ - ।
ಬಿಟ್ಟೆಯಾದರೆ ನಿನಗೆ ಹರಿದಾಸರಾಣೆ ॥ 3 ॥
********
No comments:
Post a Comment