Sunday 5 December 2021

ಹರಿಯೇ ಇದು ಸರಿಯೇ ಚರಣ ಸೇವಕನಲ್ಲಿ ಕರುಣೆ ankita narahari HARIYE IDU SARIYE CHARANA SEVAKANALLI KARUNE



writer ನರಹರಿ ತೀರ್ಥರು by narahari teertharu

ಹರಿಯೇ ಇದು ಸರಿಯೇ
ಚರಣಸೇವಕನಲ್ಲಿ ಕರುಣೆ ಬಾರದ್ಯಾಕೆ    ||ಪ||

ಪತಿತನೆಂದು ಶ್ರೀಪತಿ ರಕ್ಷಿಸದಿರೆ
ವಿತತವಾಹುದೆ ನಿನ್ನ ಪತಿತಪಾವನ ಕೀರ್ತಿ?   ||೧||

ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ
ಭಕ್ತವತ್ಸಲ ನಾಮ ವ್ಯರ್ಥವಾಗದೆ?    ||೨||

ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ
ನಗಧರ ಎನ್ನ ಬಿಡುವ ಬಗೆ ಏನಿದು?    ||೩||

ಹೇಯ ಅಜಾಮಿಳನ ಕಾಯಲಿಲ್ಲೆ ಸ್ವ
ಕೀಯನೆ ನಾ ಪರಕೀಯನೆ ನಿನಗೆ?    ||೪||

ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು
ನಂಟನೆ ನಿನಗೆ ಬಂಟ ನಾನಲ್ಲವೆ?    ||೫||

ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ
ಕೊಟ್ಟಳು ಅವಳೇನ ಬಿಟ್ಟದ್ದು ನಾನೇನ?   ||೬||

ದೊರೆ ನಿನ್ನ ಮನಸಿಗೆ ಸರಿಬಂದಂತೆ ಮಾಡು
ಮೊರೆಹೊಕ್ಕೆನು ನಾ ನರಹರಿಪೂರ್ಣನೆ    ||೭||
***

ರಾಗ : ಕೇದಾರ  ತಾಳ : ಆದಿ (raga tala may differ in audio)

ಶ್ರೀ ನರಹರಿ ತೀರ್ಥರ ರಚನೆ

ಹರಿಯೇ| ಇದು| ಸರಿಯೇ|
ಚರಣ ಸೇವಕನಲ್ಲಿ |ಕರುಣ ಬಾರದ್ಯಾಕೆ

ಪತಿತನೆಂದು ಶ್ರೀಪತಿ ರಕ್ಷಿಸದಿರೆ|
ವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ||

ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ|
ಭಕ್ತವತ್ಸಲನಾಮ ವ್ಯರ್ಥವಾಗದೆ|

ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ|
ನಗಧರ ಎನ್ನ ಬಿಡುವ ಬಗೆ ಏನಿದು|

ಹೇಯ ಅಜಾಮಿಳನ ಕಾಯಲಿಲ್ಲೆ
ಸ್ವ| ಕೀಯನೆ, ನಾ ಪರಕೀಯನೆ ನಿನಗೆ|

ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು|
ನಂಟನೆ ನಿನಗ ಭಂಟ ನಾನಲ್ಲವೇ?

ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ |
ಕೊಟ್ಟಳು ಅವಳೇನ ಬಿಟ್ಟದ್ದು ನಾನೇನ|

ದೊರೆ ನಿನ್ನ ಮನಸಿಗೆ ಸರಿಬಂದಂತೆ 
ಮಾಡು|
ಮೊರೆ ಹೊಕ್ಕೆನು ನಾ 

🌹🌸 ನರಹರಿ ಪೂರ್ಣನೆ|
******************

No comments:

Post a Comment