Sunday, 8 December 2019

ವರದಾ ವರದ ಶುಭವರ jagannatha vittala suladi ವರದ ಸುಳಾದಿ VARADAA VARADA SHUBHAVARA SULADI

Audio by Mrs. Nandini Sripad

ಶ್ರೀ ಜಗನ್ನಾಥದಾಸಾರ್ಯ ವಿರಚಿತ
ವರದ ಸುಳಾದಿ 
ರಾಗ ಆನಂದಭೈರವಿ ಧ್ರುವತಾಳ 

ವರದಾ ವರದ ಶುಭವರ ವರದಾಯಕ 
ಪರಮ ಪುರುಷೋತ್ತಮ ಅಮಿತ ಮಹಿಮ
ಶರಣಾಗತರ ಕಲ್ಪತರುವೆ ವಿಮಲಾರುಣಾಂ -
ಬುರುಹ ದಳಲೋಚನ ಭವವಿಮೋಚನಾ
ನಿರುಪಮ ನಿರ್ದೋಷ ನಿಖಿಳ ನಿಷೇಧ ಶೇಷ 
ಮರಣ ಜನನ ರಹಿತ ಲೋಕಮಹಿತ
ಶಿರಿ ಸರಿಸಿಜ ಭವ ವಾಯು ವಾಣಿ ಭಾರತಿ
ಗರುಡ ಇಂದ್ರ ದೇವೋತ್ತಂಸ ಹಂಸಾ
ಸ್ವರತ ಸ್ವತಂತ್ರ ಗುಣಗಣಭರಿತ ಭಾಗ್ಯವಂತ
ನಿರುತ ಎನ್ನಂತರಂಗವಾಸ ಶ್ರೀಶಾ
ಹರಿಯೆ ನೀನಲ್ಲದನ್ಯರರಿಯೆ ಎಮ್ಮ ಸಾಕುವ
ಧೊರಿಯೆ ದೂರುವೆ ಎನ್ನ ಮೊರೆಯ ಕೇಳೊ
ಮರಳಿ ಮರಳಿ ಎನ್ನ ದುರುಳ ವಿಷಯಂಗಳಿ -
ಗೆರಗಿಸಿ ಕಂಗೆಡಿಪ ಕರಣಗಳು
ಇರುಳು ಹಗಲು ನಿನ್ನ ಪರವಾಗಿರಲು ಬಹ
ದುರಿತ ಕೋಟಿಗಳಿಗೆ ಅಂಜೆ ನಾನು
ಸುರುಚಿ ನಾಮಕ ಜಗನ್ನಾಥವಿಠ್ಠಲ ನಿಜ
ಕರುಣಿ ಕೈ ಪಿಡಿದು ಉದ್ಧರಿಸ ಬೇಕೂ ॥ 1 ॥

ಮಟ್ಟತಾಳ 

ಈಶ ಪೂರ್ಣಕಾಮ ದೋಷರಹಿತ ಸ್ವಪ್ರ -
ಕಾಶ ಲಕ್ಷ್ಮೀ ವಾರಿಜಾಸನ ಮೊದಲಾದ -
ಶೇಷ ದಿವಿಜರಿಂದ ನೀ ಸೇವಿತನಾಗಿ 
ದೇಶ ಕಾಲಗಳಲ್ಲಿ ವಾಸವಾಗಿಯಿಪ್ಪ
ವಾಸುದೇವನೆ ನಿನ್ನ ಉಪಾಸನೆ ಮಾಡದಲೆ
ಕ್ಲೇಶಕೆ ಒಳಗಾದೆ ಪಾಶಧರಾರ್ಚ್ಯನೆ
ಘಾಶಿಗೊಳಿಸದೆನ್ನ ಪೋಷಿಸಬೇಕಿನ್ನು
ವಾಸವಾನುಜ ಜಗನ್ನಾಥವಿಠ್ಠಲ ಲೌಕೀ -
ಕಾಶೆ ಬಿಡಿಸಿ ನಿನ್ನ ದಾಸನೆನಿಸಿ ಸಲಹೊ ॥ 2 ॥

ತ್ರಿವಿಡಿತಾಳ 

ಕರಣನಾಮಕನಾಗಿ ಇಂದ್ರಿಯಂಗಳ ಮಾನಿ
ಸುರರೊಳು ನೆಲೆಸಿ ವಿವಿಧ ವಿಷಯಂಗಳ
ನೆರವಿಗಳೊಳಗಿದ್ದು ನಿನ್ನ ರೂಪವ ಬೆರದು
ಅರಿಯಗೊಡದಲೆ ವಿಹರಿಸುತಿಪ್ಪೆ
ಗುರಿ ಮಾಡಿ ಜೀವರ ಪುಣ್ಯಪಾಪಂಗಳಿಗೆ
ನಿರಯ ಸ್ವರ್ಗಗಳನೆ ಲೀಲೆಯಿಂದ
ಪರಿಪೂರ್ಣ ಕಾಮ ಈ ಪರಿ ಸಂಸಾರದೊಳೆಮ್ಮ
ತಿರುಗಿಸಿ ನೀ ಕ್ರೀಡೆಯಾಡುತಿಪ್ಪೆ
ವಿರಜಾನಾಮಕ ಜಗನ್ನಾಥವಿಠ್ಠಲ ಕರ - 
ವೆರಡು ಮುಗಿವೆ ಎಮ್ಮುದ್ಧರಿಸುವ ಭಾರ ನಿನ್ನದೂ ॥ 3 ॥

ಅಟ್ಟತಾಳ 

ಆ ಚತುರ್ಮುಖ ರಜತಾಚಲ ನಿಲಯಾದಿ
ಖೇಚರರಿಗೆ ಮನೋವಾಚಾಮಗೋಚರ
ಪ್ರಾಚೀನ ಕರ್ಮಾಬ್ದಿ ವೀಚಿಯೊಳಗೆ ಮುಣು-
ಗೀಚಾರಿವರಿವಂಗೆ ಗೋಚರಿಸುವುದೆ ವಿ -
ರೋಚನ ಕೋಟಿ ಮರೀಚಿ ಪುಂಜನೆ ಭವ -
ಮೋಚಕ ನೀನೆಂದು ಸೂಚಿಸಿದರು 
ಶ್ರೀಮದಾಚಾರ್ಯರಾಯರು ಈ ಚರಾಚರದೊಳು
ನೀಚರಿಗೆ ಕರ ಚಾಚದಂತೆ ಮಾಡೋ
ಯಾಚಿಸುವೆನು ಸವ್ಯಸಾಚಿವರದ
ವಿರೋಚನ ಜಗನ್ನಾಥವಿಠ್ಠಲ ನಿನ್ನಾ -
ಲೋಚನೆ ಕೊಡುವದು ಸಾಚಾರಿಗಳ ಕೂಡ ॥ 4 ॥

ಆದಿತಾಳ 

ಅನಘನೆಂದೊಮ್ಮೆ ನೆನೆವ ಮಾನವ ಭವ
ವನಧಿ ದಾಟುವ ಬಂಧು ಜನರ ಕೂಡಿಕೊಂಡು 
ವನಿತಾದಿ ವಿಷಯಂಗಳನುಭವಿಸುತ ತನ್ನ 
ಮನೆಯೊಳಗಿರಲಾ ಜೀವನೇ ಮುಕ್ತನೂ 
ಅನಿಮಿಷಮುನಿ ಭಾನುತನಯ ಲೋಕದಿ ನಾರಾ -
ಯಣನೆನೆ ನರಕಸ್ಥ ಜನರು ಮುಕ್ತರಾಗರೇ
ಘನಮಹಿಮನೆ ನಿನ್ನ ಅನುಸ್ಮೃತಿ ಉಳ್ಳವ
ಮನುಜನಾಗಲಿ ಮತ್ತೆ ದನುಜನಾಗಲಿ ತ್ರಿಭು - 
ವನದೊಳು ಮಾನ್ಯನೊ ಅನುಮಾನವಿಲ್ಲ ಪ್ರತ -
ರ್ದನ ನಾಮ ಜಗನ್ನಾಥವಿಠಲ ಪ್ರಹ್ಲಾದ
ವಿರೋಚನ ನರವಿಭೀಷಣರಿಗೊಲಿದು ಕಾಯಿದೆ ॥ 5 ॥

ಜತೆ 

ಭಕ್ತವತ್ಸಲ ಜಗನ್ನಾಥವಿಠ್ಠಲ ಮುಕ್ತಾ
ಮುಕ್ತ ನಿಯಾಮಕ ಅಶಕ್ತನ ಕೈಪಿಡಿಯೊ ॥
****************



ಶ್ರೀ ಜಗನ್ನಾಥದಾಸಾರ್ಯ ವಿರಚಿತ 

 ವರದ ಸುಳಾದಿ 

 ರಾಗ ಆನಂದಭೈರವಿ 

 ಧ್ರುವತಾಳ 

ವರದ ವರದ ಶೋಭಿವರ ವರದಾಯಕ 
ಪರಮ ಪುರುಷೋತ್ತಮ ಅಮಿತ ಮಹಿಮ
ಶರಣಾಗತರ ಕಲ್ಪತರುವೆ ವಿಮಲಾಂಬುರುಹ
ನಿರುಪಮ ನಿರ್ದೋಷ ನಿಖಿಳ ನಿಷೇಧ ಶೇಷ 
ಮರಣ ಜನನ ರಹಿತ ಲೋಕಮಹಿತ
ಶಿರಿ ಸರಿಸಿಜ ಭವ ವಾಯು ವಾಣಿ ಭಾರತಿ
ಗರುಡ ಶೇಷ ಇಂದ್ರ ದೇವೋತ್ತಂಸ ಹಂಸಾ
ಸ್ವರತ ಸ್ವತಂತ್ರನೆ ಸುಗುಣಭರಿತ ಸೌಭಾಗ್ಯವಂತ
ನಿರುತ ಎನ್ನಂತರಂಗವಾಸ ಶ್ರೀಶಾ
ಹರಿಯೆ ನೀನಲ್ಲದನ್ಯರನರಿಯೆ ಎಮ್ಮ ಸಾಕುವ
ಧೊರಿಯೆ ದೂರುವೆ ಎನ್ನ ಮೊರೆಯ ಕೇಳೊ
ಮರಳಿ ಮರಳಿ ಎನ್ನ ದುರುಳ ವಿಷಯಂಗಳಿ -
ಗೆರಗಿಸಿ ಕಂಗೆಡಿಪ ಕರಣಂಗಳು
ಇರುಳು ಹಗಲು ನಿನ್ನ ಪರವಾಗಿರಲಿ ಬಾಹ
ದುರಿತ ಕೋಟಿಗಳಿಗೆ ಅಂಜೆ ನಾನು
ಸುರುಚಿ ನಾಮಕ ಜಗನ್ನಾಥವಿಠ್ಠಲ ನಿಜ
ಕರುಣಿ ಕೈ ಪಿಡಿದೆನ್ನುದ್ಧರಿಸಬೇಕೊ ॥ 1 ॥

 ಮಟ್ಟತಾಳ 

ಈಶ ಪೂರ್ಣಕಾಮ ದೋಷರಹಿತ ಸ್ವಪ್ರ -
ಕಾಶ ಲಕುಮಿ ವಾರಿಜಾಸನ ಮೊದಲಾದ -
ಶೇಷ ದಿವಿಜರಿಂದ ನೀ ಸೇವಿತನಾಗಿ 
ದೇಶ ಕಾಲಗಳಲ್ಲಿ ವಾಸವಾಗಿಯಿಪ್ಪ
ವಾಸುದೇವನೆ ನಿನ್ನ ಉಪಾಸನೆ ಮಾಡದಲೆ
ಕ್ಲೇಶಕೆ ಒಳಗಾದೆ ಪಾಶಧರಾರ್ಚಿತನೆ
ಘಾಶಿಗೊಳಿಸದೆನ್ನ ಪೋಷಿಸಬೇಕಿನ್ನು
ವಾಸವಾನುಜ ಜಗನ್ನಾಥವಿಠ್ಠಲ ಲೌಕೀ -
ಕಾಶೆ ಬಿಡಿಸಿ ನಿನ್ನ ದಾಸನೆನಿಸಿ ಸಲಹೊ ॥ 2 ॥

 ತ್ರಿವಿಡಿತಾಳ 

ಕರಣನಾಮಕನಾಗಿ ಇಂದ್ರಿಯಗಳೊಳು ಮಾನಿ
ಸುರರೊಳು ನೆಲೆಸಿದ್ದು ವಿವಿಧ ವಿಷಯಂಗಳಾ
ನೆರವಿಗಳೊಳಗಿದ್ದು ನಿನ್ನ ರೂಪವ 
ಬೆರಸಿ ಅರಿಯಗೊಡದೆ ವಿಹರಿಸುತಿಪ್ಪೆ
ಗುರಿ ಮಾಡಿ ಜೀವರ ಪುಣ್ಯಪಾಪಗಳಿಗೆ
ನಿರಯ ಸ್ವರ್ಗಗಳೀವೆ ಲೀಲೆಯಿಂದ
ಪರಿಪೂರ್ಣ ಕಾಮ ಈ ಪರಿ ಸಂಸಾರದೊಳೆಮ್ಮ
ತಿರುಗಿಸಿ ನೀ ಕ್ರೀಡೆಯಾಡುತಿಪ್ಪೆ
ವಿರಜಾನಾಮಕ ಜಗನ್ನಾಥವಿಠ್ಠಲ ಕರ - 
ವೆರಡು ಮುಗಿವೆ ಎಮ್ಮುದ್ಧರಿಸುವ ಭಾರ ನಿನ್ನದೂ ॥ 3 ॥

 ಅಟ್ಟತಾಳ 

ಆ ಚತುರ್ಮುಖ ರಜತಾಚಲ ನಿಲಯಾದಿ
ಖೇಚರರಿಗೆ ಮನೊವಾಚಾಮಗೋಚರ
ಪ್ರಾಚೀನ ಕರ್ಮಾಬ್ಧಿ ವೀಚಿಯೊಳಗೆ ಮುಣು -
ಗೀ ಚಾರಿವರಿವಂಗೆ ಗೋಚರಿಸುವೆ ವಿ -
ರೋಚನ ಕೋಟಿ ಮರೀಚಿ ಪುಂಜನೆ ಭವ -
ಮೋಚಕ ನೀನೆಂದು ಸೂಚಿಸಿದರು ಶ್ರೀಮ -
ದಾಚಾರ್ಯರು ಈ ಚರಾಚರದಲ್ಲಿ
ನೀಚರಿಗೆ ಕರ ಚಾಚದಂತೆ ಮಾಡೊ
ಯಾಚಿಸುವೆನು ಸವ್ಯಸಾಚಿವರದ ವಿ -
ರೋಚನ ಶ್ರೀಜಗನ್ನಾಥವಿಠ್ಠಲ ನಿನ್ನಾ -
ಲೋಚನೆ ಕೊಡುವದು ಸಾಚಾರಿಗಳ ಕೂಡಾ ॥ 4 ॥

 ಆದಿತಾಳ 

ಅನಘಾ ನೆಂದೊಮ್ಮೆ ನೆನೆವ ಮಾನವ ಭವ -
ವನಧಿ ದಾಟುವ ಬಂಧು ಜನರ ಕೂಡಿಕೊಂಡು 
ವನಿತಾದಿ ವಿಷಯಗಳನುಭವಿಸುತ ತನ್ನ 
ಮನೆಯೊಳಗಿರಲಾ ಜೀವನೆವೇ ಮುಕ್ತನೊ 
ಅನಿಮಿಷ ಮುನಿ ಭಾನುತನಯ ಲೋಕದಲಿ ನಾರಾ -
ಯಣ ನೆನೆ ನರಕಸ್ಥ ಜನರು ಮುಕ್ತರಾಗರೇ
ಘನಮಹಿಮನೆ ನಿನ್ನ ಅನುಸ್ಮೃತಿ ಉಳ್ಳವ
ಮನುಜನಾಗಲಿ ಮತ್ತೆ ದನುಜನಾಗಲಿ ತ್ರಿಭು - 
ವನದೊಳು ಮಾನ್ಯನೊ ಅನುಮಾನವಿಲ್ಲ ಪ್ರತ -
ರ್ದನ ನಾಮ ಜಗನ್ನಾಥವಿಠ್ಠಲ ಪ್ರಹ್ಲಾದ ವಿರೋ -
ಚನ ನಿರಋತಿ ವಿಭೀಷಣರಿಗೊಲಿದು ಕಾಯಿದೇ ॥ 5 ॥

 ಜತೆ 

ಭಕ್ತವತ್ಸಲ ಜಗನ್ನಾಥವಿಠ್ಠಲ ಮುಕ್ತಾ
ಮುಕ್ತ ನಿಯಾಮಕ ಅಶಕ್ತನ್ನ ಕೈಪಿಡಿಯೊ ॥
*******************

No comments:

Post a Comment