Friday, 27 December 2019

ಕರೆದು ಕೈ ಪಿಡಿಯೊ ಎನ್ನ ವೇಣುದಾಸದೊರೆಯೆ ankita vyasa vittala

ಕರೆದು ಕೈ ಪಿಡಿಯೊ ಎನ್ನ ವೇಣುದಾಸದೊರೆಯೆ ಪತಿತ ಪಾವನ್ನ ಪ

ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ಅ.ಪ.

ವಿಜಯರಾಯರ ಪಾದವ ಆದರದಿಂದಭಜಿಸಿ ಸಂತತ ಮೋದವಾನಿಜವಾಗಿ ಹೃದಯ ಪಂಕಜದೊಳಾಗಲು ಭವವ್ರಜದೊಳು ಮುಣಗಿಪ್ಪ ಸುಜನ ಶಿರೋಮಣಿತ್ರಿಜಗ ವಂದಿತ ಗಜವರದ ಪಂ-ಕಜಪಿತ ಪಿನಾಕ ಜನರ ಕೂಡಾ ಸಾ-ಹಜ ಭಕುತಿಯಲಿ ಯಜಿಸಿ ಮೋಹವೃಜನ ದಾಟಿ ದ್ವಿಜವರಾಗ್ರಣಿ 1

ಸಂತರ ಸಲಹುವನೇ ಸಂಗಡಲೇ ನಿ-ಶ್ಚಿಂತರ ಮಾಡುವುದೇಎಂತು ಪೇಳಲು ಎನಗಂತು ತೋರದು ದುಷ್ಟಭ್ರಾಂತಿಯಿಂದಲಿ ಮಾಳ್ಪ ಕಂತುಗಳಿಗೆ ಲೇಶಅಂತ ಕಾಲಕ್ಕೆ ಚಿಂತಾಕಾಲಯಾಪಂಥ ಸಾರುವದಿಂತು ಸರಿ ಜಗ-ದಂತು ರಂಗನ ಮುಂತು ತಿಳಿವ-ದೆಂತುಪಾಯವು ಶಾಂತದಾತನೆ 2

ಅರಿದೇನು ಆಪ್ತ ಬಂಧು ಪಾಮರನ ಉ-ದ್ಧರಿಪದು ನಿನಗೆ ಇಂದುಸರಿಸಾ ದೂರದಿ ನಿನ್ನ ಸ್ಮರಣೆ ಮಾಡುವೆ ಆ-ಲ್ಪಿರಿದು ಬಾಯಿ ಬಿಡುವೆನೊ ಮರೆಯಲಾಗದು ತಂದೆದುರುಳ ವಿಷಯಕ್ಕೆರಗುವೆ ಅಂತಃ-ಕರುಣ ನಿಲಿಸಿ ಪೊರೆವ ಭಾರವುನಿರುತ ನಿನ್ನದು ವ್ಯಾಸವಿಠಲನಭರದಿ ಪೊಗಳುವ ಪರಮ ಧನ್ಯಾನೆ 3
************

No comments:

Post a Comment