Friday 27 December 2019

ಸಂಗಸುಖವ ಬಯಸಿ ಬದುಕಿರೋ ankita shreeda vittala SANGA SUKHAVA BAYASI BADUKIRO JAGANNATHA DASA STUTIH

Audio by Mrs. Nandini Sripad


ಶ್ರೀ ಕರ್ಜಗಿ ದಾಸಪ್ಪನವರ ಕೃತಿ
( ಶ್ರೀದವಿಠಲಾಂಕಿತ ) 

 ರಾಗ ಪಂತುವರಾಳಿ           ಆದಿತಾಳ 

ಸಂಗಸುಖವ ಬಯಸಿ ಬದುಕಿರೊ । ಶ್ರೀಮದ್ ।
ರಂಗನೊಲಿದ ಭಾಗವತರ ॥ ಪ ॥
ಸಂಗಸುಖವ ಬಯಸಿ ಬದುಕಿ ಭಂಗಬಡಿಪ ಭವವ ನೂಕಿ ।
ಹಿಂಗದೆ ನರಸಿಂಗನನ್ನು ಕಂಗಳಿಂದಲಿ ಕಾಣುತಿಹರ॥ ಅ ಪ ॥

ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ।
ಶಿಷ್ಟ ಸದಾಚಾರದಲ್ಲಿ ನಿಷ್ಟರಾಗಿ ನಿತ್ಯ ಮುದ್ದು ।
ಕೃಷ್ಣ ಕೀರ್ತನೆಯ ಪಾಡುತಾ । ಮಧ್ವಮತವ ।
ಪುಷ್ಟಿಗೈಸಿ ಖಳರ ಕಾಡುತಾ । ಕಾಮ್ಯಕರ್ಮ ।
ಬಿಟ್ಟು ಭಕುತಿಯನ್ನೆ ಮಾಡುತ । ಬಂದ ಲಾಭ ।
ನಷ್ಟತುಷ್ಟಿಗಳಿಗೆ ವೊಡಂಬಟ್ಟ ಬಗೆಯ ಪೇಳಲೆಷ್ಟ ॥ 1 ॥

ಭೂತದಯಾಶೀಲರಾದ ನೀತಗುರುದ್ವಾರ ಜಗ - ।
ನ್ನಾಥವಿಠಲಾಂಕಿತವನು ಪ್ರೀತಿಯಿಂದ ಪಡೆದು ಸಂ - ।
ಗೀತ ವೃತ್ತಪದ ಸುಳಾದಿಯ । ಪೇಳಿ ಪ್ರೇ - ।
ಮಾತಿಶಯದಿ ಮಧುವಿರೋಧಿಯಾ । ಒಲಿಸಿಕೊಂಡು ।
ಜಾತರಾಗಿ ಜವನ ಬಾಧಿಯ । ಬಯಲು ಮಾಡಿ ।
ಖ್ಯಾತರಾಗಿಹರು ಪುಶಿಯ ಮಾತಿದಲ್ಲ ಮೀರಸಲ್ಲ ॥ 2 ॥

ಮೇದಿನಿಯ ಮ್ಯಾಲುಳ್ಳ ಗಂಗಾದಿತೀರ್ಥಪತಿಗಳಿವರ ।
ಕಾದುಕೊಂಡಿಹರು ಬಿಡದೆ ಸ್ವಾದಿ ರಾಜೇಂದ್ರರ ಪ್ರ - ।
ಸಾದದಿಂದ ಹರಿಕಥಾಮೃತ । ಸಾರ ತತ್ವ ।
ಸಾಧುಜನರಿಗಾಗಿ ಪ್ರಾಕೃತಾ । ಸುಪದ್ಧತಿಯನು ।
ಸಾದರದಲಿ ಪೇಳಿ ದುಷ್ಕೃತಾ । ದೂರಮಾಡಿ ।

ಮೋದಿಸುವರಿಗೆಣೆಯಗಾಣೆ ಶ್ರೀದವಿಟ್ಠಲ ನಾಣೆ ॥ 3 ॥
***********


ಶ್ರೀ ಜಗನ್ನಾಥದಾಸಾರ್ಯರ ಮೇಲೆ   ಶ್ರೀದವಿಠಲದಾಸರ ಕೃತಿ 
ರಾಗ ಪಂತುವರಾಳಿ     ಆದಿತಾಳ 

ಸಂಗಸುಖವ ಬಯಸಿ ಬದುಕಿರೋ ಸುಜನರೆಲ್ಲ
ರಂಗವಲಿದ ದಾಸರಾಯರ ॥ ಪ ॥

ಸಂಗಸುಖವ ಬಯಸಿ ಬದುಕಿ 
ಭಂಗಪಡಿಪ ಭವವ ನೂಕಿ
ಹಿಂಗದೇ ನರಸಿಂಗನನ್ನು 
ಕಂಗಳಿಂದಲಿ ಕಾಣುತಿಹರ ॥ ಅ.ಪ.॥

ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ
ಶಿಷ್ಟ ಸದಾಚಾರದಲ್ಲಿ ನಿಷ್ಠರಾಗಿ ನಿತ್ಯ ಮುದ್ದು
ಕೃಷ್ಣನ ಕೀರ್ತನೆಯನು ಪಾಡುತ ಮಧ್ವಮತವ
ಪುಷ್ಟಿಗೈಸಿ ಖಳರ ಕಾಡುತ ಕಾಮ್ಯಕರ್ಮ
ಬಿಟ್ಟು ಭಕ್ತಿಯನ್ನೆ ಮಾಡುತ ಬಂದ ಲಾಭ
ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು ॥ 1 ॥

ಭೂತದಯಾಶೀಲರಾದನೀತ ಗುರುದ್ವಾರ ಜಗ -
ನ್ನಾಥ ವಿಠಲಾಂಕಿತವನು ಪ್ರೀತಿಯಿಂದ ಪಡೆದು ಸಂ -
ಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ -
ಮಾತಿಶಯದಿ ಮಧುವಿರೋಧಿಯ ಒಲಿಸಿಕೊಂಡ
ಜಾತರಾಗಿ ಜವನಬಾಧೆಯ ಬಯಲು ಮಾಡಿ
ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮೀರಸಲ್ಲ ॥ 2 ॥

ಮೇದಿನಿ ಮೇಲುಳ್ಳ ಗಂಗಾದಿತೀರ್ಥಪತಿಗಳಿವರ
ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ -
ಸಾದದಿಂದ ಹರಿಕಾಥಾಮೃತಸಾರ ತತ್ವ
ಸಾಧುಜನರಿಗಾಗಿ ಪ್ರಾಕೃತ ಸುಪದ್ಧತಿಯನು
ಸಾದರದಲಿ ಪೇಳಿ ದುಷ್ಕೃತ ದೂರಮಾಡಿ
ಮೋದಿಸುವರಿಗೆಣೆಗಾಣೆ ಶ್ರೀದವಿಠಲ ನ್ನಾಣೆ ॥ 3 ॥

https://drive.google.com/file/d/1ZV_c0t35WZD3lU6NxK2VXV9w6lh0fAyf/view?usp=drivesdk


********

No comments:

Post a Comment