Friday 27 December 2019

ತಿಳಿಯನು ಎಂದೆಂದಿಗನ್ಯ ರಂಗ ankita pranesha vittala jagannatha dasa stutih

ಶ್ರೀ ಪ್ರಾಣೇಶದಾಸರಿಂದ ವಿರಚಿತ 
ಶ್ರೀ ಜಗನ್ನಾಥದಾಸಾರ್ಯರ ಸ್ತೋತ್ರಪದ
ರಾಗ ಕಾನಡ        ರೂಪಕತಾಳ 

ತಿಳಿಯನು ಎಂದೆಂದಿಗನ್ಯ ರಂಗ 
ಒಲಿದ ದಾಸರು ಸನ್ಮಾನ್ಯ || ಪ ||

ಅಲವ ಮಹಾತ್ಮರೆಂಬ ಪುಣ್ಯ ಕೀರ್ತಿ -
ಗಳ ನಿತ್ಯ ಕೇಳ್ವ ನರ ಧನ್ಯ || ಅ ಪ ||

ಹಿರಣ್ಯಕಶಿಪುಜ ಸಲ್ಹಾದನೇವೆ 
ಎರಡನೇ ಜನ್ಮ ಶಲ್ಯನಾದ
ಗುರುವಾದಿರಾಜರ್ನರ್ಚಿಸಿದ ನಮ್ಮ ಪುರಂದರದಾಸರಲ್ಲುದಿಸಿದ || ೧ ||

ಐದನೆ ರೂಪವಿದೀ ಗಂತೆ ಬಹುದು
ಮುಂದೇಳು ಜನುಮಗಳಂತೆ 
ಮೋದಾಭಿವೃದ್ಧಿಗೆನೋ ಅಂತೆ ಎಂಬ 
ವಾದಿಗಳಿಗೆ ಅಂತಿಗಂತೆ || ೨ ||

ದಾಸ ಕೂಟಸ್ಥರಿಗೀಮಾತು ಹಲವು 
ದೇಶಗಳಲ್ಲಿ ಅನುಭವವಾಯ್ತು 
ಈ ಸುಕಥಾಲ್ಲಾಪೆಲ್ಲಾಯ್ತು ಶ್ರೀ ಪ್ರಾ-
ಣೇಶವಿಠ್ಠಲ ನಲ್ಲಿಹನಾತು || ೩ ||

https://drive.google.com/file/d/1_1zjrhtGBmL0AZDdj35qRjJKQsqnH0tO/view?usp=drivesdk
********

No comments:

Post a Comment