Friday, 27 December 2019

ಗುರುರಾಘವೇಂದ್ರನೆ ಕರುಣಿ ನೋಡಬಾರದೆ ankita raghunatha vittala

ಗುರು ರಾಘವೇಂದ್ರನೆ ಕರುಣಿ ನೋಡಬಾರದೆ
ಮೊರೆ ಯಾರಿಗಿಡಲೋ ಕರುಣಾಶರಧೇ        || ಪ ||

ಸ್ಮರಿಸಿದವರ ಪೊರೆವೆನೆಂಬ ಬಿರುದು ನಿನ್ನದೆ
ವರ ಶರಣರ ಕಲ್ಪತರುವೆ ಎನ್ನ್ಯಾಕೆ ಮರೆತೆ    || ೧ ||

ಕರವ ಮುಗಿದು ನಮಿಸಿ ನಿಮಗೆ ಬಾಯಿ ತೆರೆದೆ ಇದು
ಸರಿಯೆ ನಿನ್ನ ಮನಸು ಲೇಶವಾದರು ಕರಗದೆ        || ೨ ||

ಸತತ ಎನ್ನವಗುಣಗಳನ್ನು ಮನಕೆ ತಾರದೆ ನೀ ಬಂದು
ಪೊರೆಯೊ ರಘುನಾಥವಿಠ್ಠಲನ ಕೃಪೆಯು ಬಾರದೆ    || ೩ ||
***

ರಾಗ: ತೋಡಿ ತಾಳ: ತ್ರಿಪುಟ

ಗುರು ರಾಘವೇಂದ್ರನೆ ಕರುಣಿ ನೋಡಬಾರದೆ

ಮೊರೆಯಾರಿಗಿಡಲೊ ಕರುಣಾಶರಧೆ

ಸ್ಮರಿಸಿದವರ ಪೊರೆವೆನೆಂಬ ಬಿರುದು ನಿನ್ನದೆ

ವರಶರಣರ ಕಲ್ಪತರುವೆ ಎನ್ನ್ಯಾಕೆಮರೆತೆ 1

ಕರವಮುಗಿದು ನಮಿಸಿ ನಿಮಗೆ ಬಾಯಿತೆರೆದೆ ಇದು

ಸರಿಯೆ ನಿನ್ನ ಮನಸು ಲೇಶವಾದರು ಕರಗದೆ 2

ಸತತ ಎನ್ನವಗುಣಗಳನು ಮನಕೆತಾರದೆ ನೀ ಬಂದು

ಪೊರೆಯೊ ರಘುನಾಥವಿಠಲನ ಕೃಪೆಯುಬಾರದೆ 3

***


No comments:

Post a Comment