Monday, 18 November 2019

ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ ankita prasannavenkata

by ಪ್ರಸನ್ನವೆಂಕಟದಾಸರು
ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ
ಸುಮ್ಮನೆ ದೂರುತಿದ್ದಾರೆ ಬುದ್ಧಿ ಹೇಳೆ ಇವರಿಗೆ ||ಪ||

ನಾನೊಲ್ಲೆನೆಂದರು ಗೋಪ ಮಾನಿನಿರೆತ್ತಿಕೊಂಬರು
ಆನೆಯಾಡಬಾರೊ ರಂಗ ಎಂದೆನ್ನನೊಯಿದು
ತಾನಾಗಿ ಗೋರಸವನು ಕೊಟ್ಟರುಣ್ಣದೆ ಚೆಲ್ಲುವೆ
ನೀನಣ್ಣನ ಕರೆದು ಕೇಳೆ ಗೋವಳೇರ ಠಕ್ಕ ಡೌಲು ||೧||

ಸಾಸಿರ ಬಿಸಳಿಗೆ ಬೆಣ್ಣೆ ಕೂಸುಗಳು ಮೆಲ್ಲೋದುಂಟೆ
ಹೇಸಿಗೆ ಬರುತಿದೆ ಅವರ ಮೊಸರು ಕಂಡು
ಮೀಸಲು ಮುರಿದರೆ ಅವರ ಜೆಟ್ಟಿಗ ನನ್ನ ಕಚ್ಚನೆ
ಹಾಸ್ಯದೊಳು ಮಾತನಾಡಿ ಮಾಡುತಿಹರಮ್ಮ ||೨||

ತಮ್ಮ ಮಕ್ಕಳುಪಟಳ ನಮ್ಮ ಮೇಲಿಕ್ಕುತಿಹರು
ತಮ್ಮ ನಲ್ಲರ ಕಾಟವು ನಮ್ಮದೆಂಬರು
ನಿಮ್ಮ ಮಕ್ಕಳ ಗುಣವ ನೀ ಬಲ್ಲೆ ನಂದನರಾಣಿ
ಗುಮ್ಮನಂಜಿಕೆಗೆ ಮನೆಯೊಳಿಹನೆ ಪ್ರಸನ್ವೆಂಕಟ ||೩||
********

No comments:

Post a Comment