Monday, 18 November 2019

ಹನುಮ ನಮ್ಮ ಕಾಮಧೇನು ಭೀಮ ನಮ್ಮ ankita prasannavenkata

by ಪ್ರಸನ್ನವೆಂಕಟದಾಸರು
ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷಆನಂದತೀರ್ಥಗುರು ಚಿಂತಾಮಣಿ ಪ.

ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾವೇತ್ತøಜನಕಾ ಸಂತತಕಿಂಪುರುಷವರುಷದಿ ಉಣಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು 1

ರಾಜಸೂಯ ಮೂಲದಿಂದ ಶಾಖೋಪಶಾಖ ಸಧರ್ಮಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರಿಯನು 2

ಹಂತ ಭಾಷ್ಯಧ್ವಾಂತದಿ ವೇದಾಂತವಡಗೆಪೋಕಮಣಿಮಂತನ ಮುರಿದನು ಮೂವತ್ತೆರಡು ಲಕ್ಷಣದಿಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದಚಿಂತಿತಾರ್ಥ ನಮಗೀವ ಶ್ರೀವ್ಯಾಸಪ್ರಿಯನು ವೇದವ್ಯಾಸಪ್ರಿಯನು 3
***

hanuma namma kAmadhEnu BIma namma kalpavRukSha
AnaMda tIrthaguru cintAmaNi ||pa||

sUtrarAmAyaNa mahAvyAkarNa paMca
rAtra BAratapurANa Srutyartha sudhArasavA
vEttRujanakA santata kiMpuruSha varuShadi uNa
littanA susvaradi SrIrAmapriyanu ||1||

rAjasUya mUladinda SAKopaSAKa sadharma
sOjigada karmakusuma brahmatvaCaladi
rAjisutta sahasrAkSha saKamuKyadvijarge suKa
bIja niMtu horedanu SrIkRuShNa prIyanu ||2||

hanta BAShyadhvAntadi vEdAntavaDege pOka maNi
mantana muridanu mUvatteraDu lakShaNadi
kAntiyiMda prasannavenkaTa kAntanna prakASisida
cintArtha namagIva SrI vyAsaprIyanu vEdavyAsaprIyanu ||3||
***

ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷ
ಆನಂದ ತೀರ್ಥಗುರು ಚಿಂತಾಮಣಿ ||ಪ||

ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚ
ರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾ
ವೇತ್ತೃಜನಕಾ ಸಂತತ ಕಿಂಪುರುಷ ವರುಷದಿ ಉಣ
ಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು ||೧||

ರಾಜಸೂಯ ಮೂಲದಿಂದ ಶಾಖೊಪಶಾಖ ಸಧರ್ಮ
ಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿ
ರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖ
ಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರೀಯನು ||೨||

ಹಂತ ಭಾಷ್ಯಧ್ವಾಂತದಿ ವೇದಾಂತವಡೆಗೆ ಪೋಕ ಮಣಿ
ಮಂತನ ಮುರಿದನು ಮೂವತ್ತೆರಡು ಲಕ್ಷಣದಿ
ಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದ
ಚಿಂತಾರ್ಥ ನಮಗೀವ ಶ್ರೀ ವ್ಯಾಸಪ್ರೀಯನು ವೇದವ್ಯಾಸಪ್ರೀಯನು ||೩||
*******

No comments:

Post a Comment