Thursday, 7 October 2021

ನೆರೆ ನಂಬು ಮನವೆ ಹರಿಯ ಸಿರಿಯನಾಳುವ ದೊರಿಯಾ ankita mahipati NERENAMBU MANAVE HARIYA SIRIYANAALUVA DORIYA

 ರಾಗ ಪೂರ್ವಿಕಲ್ಯಾಣಿ  ಆದಿತಾಳ
Audio by Vidwan Sumukh Moudgalya
 

ಕಾಖಂಡಕಿ ಶ್ರೀ ಮಹಿಪತಿದಾಸರ ಕೃತಿ


ನೆರೆನಂಬು ಮನವೆ ಹರಿಯಾ
ಸಿರಿಯನಾಳುವ ದೊರಿಯಾ॥ಪ॥

ಸ್ಮರಿಸಿದಾಕ್ಷಣ ಕರಿಯಾ
ಸೆರೆಯ ಬಿಡಿಸಿದನರಿಯಾ
ಮರೆಯದೆ ಜಗದೊಳು ಹರಿಯಾ
ಚರಣಕಮಲಯುಗ ಮರಿಯಾ॥೧॥

ಧರಿಯೊಳು ದ್ರೌಪದಿ ಮೊರೆಯಾ
ಹರಿಕೇಳಿದ ನೀನರಿಯಾ
ಅರಿತು ನಡೆವನೀ ಪರಿಯಾ
ಸಾರುತಿದೆ ಕೃತಿ ಖರೆಯಾ॥೨॥

ಅರಿವಿನೊಳು ಮನ ಹರಿಯಾ
ದೋರುವ ಘನ ಆಶ್ಚರಿಯಾ
ತರಳ ಮಹಿಪತಿ ದೊರಿಯಾ
ನೆರೆನಂಬಿರು ಈ ಪರಿಯಾ॥೩॥
***

ಪೂರಿಯಾ ರಾಗ , ರೂಪಕತಾಳ (raga, taala may differ in audio)

ನೆರೆನಂಬು ಮನವೆ ಹರಿಯ
ಸಿರಿಯನಾಳುವ ದೊರಿಯ ||ಪ||

ಸ್ಮರಿಸಿದಾಕ್ಷಣ ಕರಿಯ
ಸೆರೆಯ ಬಿಡಿಸಿದನರಿಯ
ಮರೆಯದೆ ಜಗದೊಳು ಹರಿಯ
ಚರಣಕಮಲಯುಗ ಮರಿಯ ||೧||

ಧರಿಯೊಳು ದ್ರೌಪದಿ ಮೊರೆಯ
ಹರಿ ಕೇಳಿದ ನೀನರಿಯ
ಅರಿತು ನಡೆವನೀ ಪರಿಯ
ಸಾರುತಿದೆ ಕೃತಿ ಖರೆಯ ||೨||

ಅರಿವಿನೊಳು ಮನ ಹರಿಯ
ದೋರುವ ಘನ ಆಶ್ಚರಿಯ
ತರಳ ಮಹಿಪತಿ ದೊರಿಯ
ನೆರೆನಂಬಿರು ಈ ಪರಿಯ ||೩||
***

ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ಪ


ಸ್ಮರಿಸಿದಾಕ್ಷಣ ಕರಿಯ ಸೆರೆಯಬಿಡಿಸಿದನರಿಯ ಚರಣಕಮಲಯುಗ್ಮಮರಿಯ 1 

ಧರಿಯೊಳು ದ್ರೌಪದಿ ಮೊರಿಯ ಹರಿ ಕೇಳಿದ ನೀನರಿಯ ಅರಿತು ನಡೆವನೀ ಪರಿಯ ಸಾರುತಿದೆ ಶ್ರುತಿ ಖರಿಯ 2 

ಅರವಿನೊಳು ಮನ ಹರಿಯ ತೋರುವ ಘನ ಅಶ್ಚರ್ಯ ತರಳ ಮಹಿಪತಿದೊರಿಯ ನೆರೆನಂಬಿರೊ ಈ ಪರಿಯ 3

***

No comments:

Post a Comment