ನೀನೆ ಪಾಲಿಸೊ ಎನ್ನ ಮಾರುತಿರಾಯ ||ಪ||
ನೀನೆ ಪಾಲಿಸೊ ಮಹಾನುಭಾವನೆ ಸದಾ
ಜ್ಞಾನ ಭಕುತಿನಿತ್ತು ಮಾನಾದಿ ನೀ ವೇಗ ||ಅ.ಪ||
ನಿನ್ನ ಆಧಾರ ಲೋಕಾ ಜನರು ಸದಾ
ನಿನ್ನ ಭಜಿಸುವೊರೇಕಾ ಪ್ರಕಾರದಿ
ನಿನ್ನ ಸೇವಿಪರನೀಕಾ ಸಂಗಾವಿತ್ತು
ನಿನ್ನ ಧ್ಯಾನಿಪ ವಿವೇಕಾ ಮತಿಯನಿತ್ತು
ಮನ್ನಿಸೊ ಮಜ್ಜನಕಾ
ನಿನ್ನಾ ಭಜಿಪರಿಗೆ ಅನ್ಯಾಲೋಕಗಳುಂಟೆ
ಘನ್ನಾ ಹರಿಯ ಲೋಕವನ್ನೆ ಸೇರುವರಯ್ಯಾ ||1||
ಸಂತತ ಪವಮಾನನು ನೀನೆ ಸರ್ವ
ರಂತರ ದೊಳಗಿಹನು ಎಂದು ನಿನ್ನಾ
ನಂತ ರೂಪಗಳನ್ನು ಭಜಿಸುವ
ಗಂತು ಸುಜ್ಞಾನವನ್ನು ನೀಡುತ ಜನ
ರಂತರದಲಿ ನೀನು
ನಿಂತು ಪಾಲಿಸಿ ಜೀವರಂತೆ ಗತಿಯನಿತ್ತು
ಕಂತುºರಾದ್ಯರ ಸಂತತಿ ವಂದ್ಯನೆ ||2||
ಸೀತಾರಾಮನ ಪಾದವಾ ಸೇವಿಸಿ ನಿತ್ಯ
ಪಾತಕಾಂಬುಧಿಗೆ ದಾವಾನಂತೆ ಜಗದಿ
ಈ ತೆರದಲಿ ಮೆರೆವಾನೆಂದು ಈಗ
ಸೋತು ನಾ ಬಂದೆ ದೇವಾ ನೀನೇ ಎನ್ನ
ಮಾತು ಲಾಲಿಸೊ ದ್ಯುಧವಾ
ಮಾತರಿಶ್ವ ನಿಜ ದೂತಾನು ನಾನಯ್ಯ
ನೀತ ಗುರು ಜಗನ್ನಾಥವಿಠಲಪ್ರಿಯ ||3||
***
..
ನೀನೆ ಪಾಲಿಸೊ ಎನ್ನ ಮಾರುತಿರಾಯ ಪ
ನೀನೆ ಪಾಲಿಸೊ ಮಹಾನುಭಾವನೆ ಸದಾ
ಙÁ್ಞನ ಭಕುತಿನಿತ್ತು ಮಾನಾದಿ ನೀ ವೇಗ ಅ.ಪ
ನಿನ್ನ ಆಧಾರ ಲೋಕಾ ಜನರು ಸದಾ
ನಿನ್ನ ಭಜಿಸುವೊರೇಕಾ ಪ್ರಕಾರದಿ
ನಿನ್ನ ಸೇವಿಪರನೀಕಾ ಸಂಗಾವಿತ್ತು
ನಿನ್ನ ಧ್ಯಾನಿಪ ವಿವೇಕಾ ಮತಿಯನಿತ್ತು
ಮನ್ನಿಸೊ ಮಜ್ಜನಕಾ
ನಿನ್ನಾ ಭಜಿಪರಿಗೆ ಅನ್ಯಾಲೋಕಗಳುಂಟೆ
ಘನ್ನಾ ಹರಿಯ ಲೋಕವನ್ನೆ ಸೇರುವರಯ್ಯಾ 1
ಸಂತತ ಪವಮಾನನು ನೀನೆ ಸರ್ವ
ರಂತರ ದೊಳಗಿಹನು ಎಂದು ನಿನ್ನಾ
ನಂತ ರೂಪಗಳನ್ನು ಭಜಿಸುವ
ಗಂತು ಜ್ಞಾನವನ್ನು ನೀಡುತ ಜನ
ರಂತರದಲಿ ನೀನು
ನಿಂತು ಪಾಲಿಸಿ ಜೀವರಂತೆ ಗತಿಯನಿತ್ತು
ಕಂತುºರಾದ್ಯರ ಸಂತತಿ ವಂದ್ಯನೆ 2
ಸೀತಾರಾಮನ ಪಾದವಾ ಸೇವಿಸಿ ನಿತ್ಯ
ಪಾತಕಾಂಬುಧಿಗೆ ದಾವಾನಂತೆ ಜಗದಿ
ಈ ತೆರದಲಿ ಮೆರೆವಾನೆಂದು ಈಗ
ಸೋತು ನಾ ಬಂದೆ ದೇವಾ ನೀನೇ ಎನ್ನ
ಮಾತು ಲಾಲಿಸೊ ದ್ಯುಧವಾ
ಮಾತರಿಶ್ವ ನಿಜ ದೂತಾನು ನಾನಯ್ಯ
ನೀತ ಗುರು ಜಗನ್ನಾಥವಿಠಲಪ್ರಿಯ 3
***
No comments:
Post a Comment