Saturday 14 December 2019

ನಿನ್ನ ಪೋಲುವ ಕರುಣಿಗಳನಾರ ankita jagannatha vittala

ಜಗನ್ನಾಥದಾಸರು
ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರ
ಪನ್ನ ತಾ ಪಾಪಹರನೇ ಪ

ಎನ್ನಪರಾಧಗಳ ಎಣಿಸದಿರು ಅಜಭವಶ
ರಣ್ಯ ಪರಿಪೂರ್ಣೇಂದಿರಾಗಾರ ಅ

ಶುದ್ಧಾಖ್ಯ ದ್ವಿಜನು ದಾರಿದ್ರ್ಯದಲಿ ನೆರೆ ನೊಂದು
ಸದ್ಧರ್ಮ ತೊರೆದು ಮರೆದು
ಶ್ರಾದ್ಧಾದಿ ದುಷ್ಟನ್ನ ಮೆದ್ದು ನಿಂದಿತನಾಗಿ
ಬಿದ್ದಿರಲು ಸತಿಯು ಮತಿಯು
ತಿದ್ದಿ ಪೇಳಲು ಕೇಳಿ ಶುದ್ಧ ಭಾವದಿ ತವ ಪ
ದದ್ವಯಕ್ಕೆರಗಿ ಮರುಗಿ ಪದ್ಮೇಶ ಸಲಹೆನಲು
ಸಿದ್ಧಿಸಿ ಮನೋರಥವ ಉದ್ಧಾರವನು ಮಾಡ್ದೆ ನೋಡ್ದೆ 1

ವಿಧಿಯ ಸಂಸ್ತುತಿ ಕೇಳಿ ಮಧ್ವಜಾಕಾರಿ
ಮದಡತಮನುದರ ಬಗೆದೇ
ಉದಧಿ ಮಥನದಲುದಿಸಿದಮೃತ ದೇವತೆಗಳಿಗೆ
ಮುದದಿಂದಲೆರೆದೆ ಪೊರೆದೆ
ಹೇಮ ಲೋಚನನ ನೀ ದೌಂಷ್ಟ್ರ
ತುದಿಯಿಂದ ಕೊಂದೆÀ ತಂದೆ
ಬೆದರದಲೆ ಕರೆದರ್ಭಕನ ನುಡಿಗೆ ಅವನಯ್ಯ
ನುದರ ರಕ್ತವನು ಸುರಿದೇ ಮೆರೆದೇ 2

ವೈರೋಚನಿಯ ಭೂಮಿ ದಾನವನು ಬೇಡಿ ಭಾ
ಗೀರಥಿಯ ಪಡದಿ ಪದದಿ
ಧಾರಿಣಿಯ ದಿವಿಜರಿಗೆ ದಾನವಿತ್ತವನಿಪರ
ಗಾರು ಮಾಡಿದೆ ಸವರಿದೇ
ನೀರಧಿಯ ಬಂಧಿಸಿ ದಶಾಸ್ಯನ ಬಲವನು ಸಂ
ಹಾರ ಮಾಡಿದೆ ರಣದೊಳು
ಕಾರಗೃಹದೊಳಗಿಪ್ಪ ಜನನಿ ಜನಕರ ಬಿಡಿಸಿ
ತೋರಿಸಿದೆ ವಿಶ್ವರೂಪಾ ಶ್ರೀಪಾ 3

ಆದಿತೇಯರು ಮಾಳ್ಪ ಸಾಧುಕರ್ಮಗಳ
ಶುದ್ಧೋದನಾಚರಿಸೆ ತಿಳಿದು
ವೇದ ಶಾಸ್ತ್ರಾರ್ಥ ಪುಸಿಯೆಂದರುಪಿ ಜಿನನತಿ
ಭೇದಗೈಸಿದೆ ಸಹಿಸಿದೇ
ಭೇದಗೊಳಿಸುವ ಕಲಿಯ ಕೊಂದು ಶೀ
ಘ್ರದಿ ತಮಸಿಗೈಸಿದೆ ಕಲ್ಕಿ ಭಳಿರೇ
ನಿಖಿಳ ಲೋಕವನೆಲ್ಲ ಧರಿಸಿ ಪ್ರಳ
ಯೋದಕದಿ ಮಲಗಿ ಮೆರೆದೇ ಪೊರೆದೇ 4

ಹಂಸರೂಪದಲಿ ಕಮಲಾಸನಗೆ ತತ್ವೋಪ
ದೇಶಮಾಡಿದೆ ಕರುಣದೀ
ವ್ಯಾಸಾವತಾರದಲಿ ದೇವ ಋಷಿ ಪಿತೃಗಳಭಿ
ಲಾಷೆ ಪೂರೈಪ ನೆವದೀ
ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ
ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ
ಕಾಶÀ ಮಾಡಿದೆ ಮೋದದಿ
ವಾಸವಾನುಜ ಜಗನ್ನಾಥವಿಠಲ ನಿನ್ನವರ ಸಲ
ಹೋ ಸಮರ್ಥಾ ಕರ್ತಾ 5
********

No comments:

Post a Comment