Thursday 2 December 2021

ಅರಿತವರಿಗತಿ ಸುಲಭ ಹರಿಯ ಪೂಜೆ ankita jagannatha ARITAVARIGATI SULABHA HARIYA POOJE




ಅರಿತವರಿಗತಿಸುಲಭ ಹರಿಯ ಪೂಜೆ ||ಪ||

ಅರಿಯದವ ನಿರ್ಭಾಗ್ಯತರ ಲೋಕದೊಳಗೆ ||ಅ.ಪ||

ಹೈಮಾಂಡ ಮಂಟಪವು ಭೂಮಂಡಲವೆ ಪೀಠ
ಸೋಮಸೂರ್ಯರೆ ದೀಪ ಭೂರುಹಗಳು
ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ
ಯಾಮಾಷ್ಟಕಗಳಷ್ಟದಳದ ಪದ್ಮವು ಎಂದು ||೧||

ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ
ಮಲಯಜಾನಿಲವೆ ಶ್ರೀಗಂಧಧೂಪ
ಇಳೆಯೊಳಗೆ ಬೆಳೆವ ಧಾನ್ಯಗಳೆಲ್ಲ ನೈವೇದ್ಯ
ಥಳಥಳಿಪ ಮಿಂಚು ಕರ್ಪೂರದಾರತಿ ಎಂದು ||೨||

ನಕ್ಷತ್ರಮಂಡಲವೆ ಲಕ್ಷದೀಪಾವಳಿಯು
ದಕ್ಷಿಣೋತ್ತರ ಅಯನಗಳೆರಡು ಬನವು
ವೃಕ್ಷದಲ್ಲಿಜ ಸಫಲ ಪುಷ್ಪಗಳೊಳಗೆ ಲಕ್ಷ್ಮೀ
ವಕ್ಷವ್ಯಾಪಕನಾಗಿ ತಾನೆ ಭೋಗಿಪನೆಂದು ||೩||

ಗುಡುಗು ಸಪ್ತಸಮುದ್ರ ಸಿಡಿಲು ಘೋಷವೆ ವಾದ್ಯ
ಪೊಡವಿಪರಿಗೀವ ಕಪ್ಪವೆ ಕಾಣಿಕೆ
ಉಡುಪ ಭಾಸ್ಕರರ ಮಂಡಲಗಳಾದರ್ಶಗಳು
ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದು ||೪||

ಯುಗಚತುಷ್ಟಯವೆ ಪರಿಯಂಕ ಪಾದಗಳಬ್ದ
ಬಿಗಿವ ಪಟ್ಟೆಗಳು ಕಂದಾಯ ಕಶಿಪು
ಗಗನ ಮೇಲ್ಕಟ್ಟು ಸಂಕ್ರಮಣಗಳೆ ಬಡವುಗಳು
ಭಗವಂತಗುಪಬರ್ಹಣ ಷಡೃತುಗಳೆಂದು ||೫||

ನಾಗವಲ್ಲಿಯೆ ದಿವಸಗಳು ಕ್ರಮುಕ ಕರಣಗಳು
ಯೋಗಗಳೆ ಚೂರ್ಣ ರಾತ್ರೆಯೆ ಕಾಂಶುಕ
ಭೋಗವತಿ ಜಲವೆ ಗಂಡೂಪೋದಕ ಶುದ್ಧ
ಸಾಗರವೆ ಪಾದ್ಯ ವಿರಾಟ್ ರೂಪನಿಗೆಂದು ||೬||

ಶಾತ ಕುಂಭೋದರಾಂಡಂತಸ್ಥರೂಪ ಸಂ-
ಪ್ರೀತಿಯಿಂದಲೆ ಯಜಿಸಿ ಮೋದಿಸುವರ
ವೀತಶೋಕರ ಮಾಡಿ ಸಂತೈಸುತಿಹ ಜಗ-
ನ್ನಾಥವಿಠ್ಠಲ ಒಲಿದು ಸರ್ವಕಾಲಗಳಲ್ಲಿ ||೭||
***
ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ
pallavi

aritavarige ati sulabha hariya pUje

anupallavi

ariyadava nirbhAgyadava lOkadoLage

caraNam 1

haimANDa maNTapau bhUmaNDalave pITha sOma sUryarE dIpa bhUruhagaLu
cAmaragaLati vimala vyOma maNDala chatra yAmASTa kagaLaStadaLada padmavu endu

caraNam 2

maLeye majjanavu digvoLeyangaLe vasana malayajNilavE shrI gandha bhUpa
iLeyoLage beLeya dhAnyagaLella naivEdya thaLathaLipa mincu karpUradAratiyendu

caraNam 3

nakSatra maNDalavE lakSa dIpAvaLiyu dakSiNOTTara ayanagaLeraDu banavu
vrakSadalliya saphala puSpagaLoLage lakSmI vakSa vyApakanAgi tAne bhOgipanendu

caraNam 4

guDugu sapta samudra siDilu ghOSavE vAdya poDavi parijIva kappavE kANike
uDupa bhAskarara maNdalagaLAdarshagaLu naDeva naDegaLu harige biDade nartanavenu

caraNam 5

yuga catuSTayave pariyenka pAdagaLabdha bigiva paTTegaLu kandAya kashipu
gagana mElkaTTu sankramaNagaLe baDavugaLu bhagavantagupa barhaNa SaDratugaLendu

caraNam 6

nAgavalliya divasagaLu kramuka karaNagaLu yOgagaLe cUrNa rAtreya kAmshuka
bhOgavati jalavE gaNDUshOdaka shuddha sAgaravE pAdya virATrUpanigendu

caraNam 7

shAta kumbOdarANDantastha rUpa samprItiyindali yajisi mOdisuvara
vIta shOkara mADi santaisutiha jagannAtha viThala olidu sarva kAlagaLalli
***

No comments:

Post a Comment