Wednesday, 8 December 2021

ಶರಣು ಶರಣು ಶರಣು ಮೃತ್ಯುಂಜಯ ಶರಣ್ಯ ankita jagannatha vittala SHARANU SHARANU SHARANU MRUTYUNJAYA SHARANYA

 ರಾಗಮಾಲಿಕೆ     ಖಂಡಛಾಪು



ಶ್ರೀಜಗನ್ನಾಥದಾಸರ ಕೃತಿ


 ಭಾಗೇಶ್ರೀ 

ಶರಣು ಮೃತ್ಯುಂಜಯ ಶರಣು ಸಜ್ಜನರ ಭಯ-
ಪರಿಹರಿಸು ಕರುಣಾಳು ಬಿನ್ನಪವ ಕೇಳು॥ಪ॥

ವಾಸವಾದ್ಯಮರನುತ ವನಜಸಂಭವ ಸುತ
ನೀ ಸಲಹೊ ಕೈಲಾಸವಾಸ ಈಶ
ಕ್ಲೇಶ ಮೊದಗಳು ಸಮ ತಿಳಿಸು ಅಶ್ವತ್ಥಾಮ
ಶ್ರೀಶುಕನೆ ದುರ್ವಾಸ ಸ್ಫಟಿಕಸಮಭಾಸ॥೧॥

 ವರಾಳಿ 

ವೈಕಾರಿಕಾದಿ ತ್ರಿರೂಪ ನಿನ್ನಯ ಕೋಪ
ಶೋಕಕೊಡುವುದು ದೈತ್ಯಜನಕೆ ನಿತ್ಯ
ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ-
ನಾಕಿಹೃತ್ಕುಮುದೇಂದು ಭಕ್ತಜನಬಂಧು॥೨॥

 ಚಂದ್ರಕೌನ್ಸ್

ಪವಮಾನತನಯ ನಿನ್ನವರಲ್ಲಿ ಕೊಡು ವಿನಯ
ದಿವಸಸವನಗಳಲ್ಲಿ ಎನ್ನಿರವ ನೀ ಬಲ್ಲಿ
ಸವನ ದ್ವಿತಿಯರೂಪ ಸತತ ಎನ್ನಯ ಪಾಪ
ಅವಲೋಕಿಸದೆಲೆನ್ನ ಸಲಹೊ ಸುರಮಾನ್ಯ॥೩॥

 ನಾಟ

ಶೇಷನಂದನ ಶೇಷಭೂಷಣನೆ ನಿಶ್ಯೇಷ 
ದೋಷರಹಿತನ ತೋರು ಕರುಣವನೆ ಬೀರು
ಶ್ರೀಷಣ್ಮುಖನ ತಂದೆ ಸತತ ನೀ ಗತಿಯೆಂದೆ ಶೋಷಿಸು
ಭವಾಮಯವ ಬೇಡುವೆನು ದಯವ॥೪॥

 ಬಿಲಹರಿ

ಗರ್ಗಮುನಿಕರಪದುಮ ಪೂಜ್ಯಚರಣಾಬ್ಜ ಮಮ-
ದುರ್ಗುಣಗಳೆನಿಸದಲೆ ಇಹದಿ ಮೇಲೆ
ನಿರ್ಗತಾಶನ ಜಗನ್ನಾಥವಿಠಲನ ಸ-
ನ್ಮಾರ್ಗವನೆ ತೋರು ದೇಹವೆ ನಿನಗೆ ತೇರೂ॥೫॥
***
 

 ರಾಗ ನಾಟ    ಮಿಶ್ರಛಾಪುತಾಳ (raga, taala may differ in audio)

ಶರಣು ಶರಣು ॥ ಪ ॥
ಶರಣು ಮೃತ್ಯುಂಜಯ ಶರಣ್ಯ ಸಜ್ಜನರ ಭಯವ ।
ಪರಿಹರಿಸು ಕರುಣಾಳು ಬಿನ್ನಪವ ಕೇಳು ॥ ಅ.ಪ ॥

ವಾಸವಾದ್ಯಮರನುತ ವನಜಸಂಭವನ ಸುತ ।
ನೀ ಸಲಹು ಕೈಲಾಸವಾಸ ಈಶ ॥
ಕ್ಲೇಶ ಮೋದಗಳ ಸಮ ತಿಳಿಸೊ ಅಶ್ವತ್ಥಾಮ ।
ಶ್ರೀಶುಕ ದುರ್ವಾಸ ಸ್ಫಟಿಕ ಸಮಭಾಸ ॥ 1 ॥

ವೈಕಾರಿಕಾದಿ ತ್ರಿರೂಪ ನಿನ್ನಯ ರೂಪ ।
ಶೋಕ ಕೊಡುವದು ದೈತ್ಯಜನಕೆ ನಿತ್ಯ ॥
ಲೌಕಿಕವೆಲ್ಲ ವೈದಿಕವಾಗಲೆನಗೆ ಮೈ - ।
ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು ॥ 2 ॥

ಪವಮಾನತನಯ ನಿನ್ನವರಲ್ಲಿ ಕೊಡು ವಿನಯ ।
ದಿವಸ ಸವನಗಳಲ್ಲಿ ಎನ್ನಿರವು ಬಲ್ಲಿ ॥
ಪವನ ದ್ವಿತಿಯ ರೂಪ ಸತತ ಎನ್ನಯ ಪಾಪ ।
ಅವಲೋಕಿಸದಲೆನ್ನ ಸಲಹೊ ಸುರಮಾನ್ಯ ॥ 3 ॥

ಶೇಷನಂದನ ಶೇಷಭೂಷಣನೆ ನಿಃಶೇಷ ।
ದೋಷರಹಿತನ ತೋರೊ ಕರುಣವನೆ ಬೀರೊ ॥
ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದೆ ।
ಶೋಷಿಸೊ ಭವಾಮಯವ ಬೇಡುವೆನೊ ದಯವ ॥ 4 ॥

ಗರ್ಗಮುನಿ ಕರಕಮಲ ಪೂಜ್ಯ ಚರಣಾಬ್ಜ ।
ದುರ್ಗುಣಗಳೆಣಿಸದಲೆ ಜಗದಿ ಮೇಲೆ ॥
ನಿರ್ಗತಾಶನ ಜಗನ್ನಾಥವಿಠ್ಠಲನ ಸ - ।
ನ್ಮಾರ್ಗವನೆ ತೋರೊ ಈ ದೇಹ ನಿನ್ನ ತೇರು ॥ 5 ॥
********

No comments:

Post a Comment