Saturday, 14 December 2019

ವೇದತತಿಗಳ ಕದ್ದೊಯ್ದವನ ಕೊಂದು ankita jagannatha vittala

ಜಗನ್ನಾಥದಾಸರು
ವೇದತತಿಗಳ ಕದ್ದೊಯ್ದವನ ಕೊಂದು ಪ್ರಳ
ಯೋದಧಿಯೊಳಗೆ ಚರಿಸಿ | ಚರಿಸಿ ವೈವಸ್ವತನ
ಕಾಯ್ದ ಮಹಾಮಹಿಮ ದಯವಾಗೊ 1

ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ಬೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೊ 2

ಸೋಮಪನ ನುಡಿಕೇಳಿ ಹೇಮಾಂಬಕನ ಕೊಂದಿ
ಭೂಮಿಯಾ ನೆಗಹಿದ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೊ 3

ಕಂದ ಕರೆಯಲು ಕಂಬದಿಂದುದಿಸಿ ರಕ್ಷಿಸಿದಿ
ವಂದಿಸಿದ ಸುರರ ಸಲಹೀದಿ | ಸಲಹೀದಿ ನರಸಿಂಹ
ತಂದೆ ನೀನೆಮಗೆ ದಯವಾಗೊ 4

ವೈರೋಚನಿಯ ಭೂಮಿ ಮೂರುಪಾದವ ಬೇಡಿ
ಭೂ ವ್ಯೋಮವಳೆದೆ ಭಾ
ಗೀರಥಿಯ ಜನಕÉ ದಯವಾಗೊ 5

ಕುವಲಯಾಧೀಶ್ವರರ ಬವರ ಮುಖದಲಿ ಕೊಂದೆ
ಅವನಿಭಾರವ ನೀನುಳುಹಿದ | ಇಳುಹಿದಾ ಸ್ವಾಮಿ ಭಾ
ರ್ಗವರಾಮ ಎಮಗೆ ದಯವಾಗೊ 6

ಶತಧೃತಿಯ ನುಡಿಗೆ ದಶರಥನ ಗರ್ಭದಿ ಬಂದು
ದಿತಿಜರನು ಸವರಿ ಸುಜನರ | ಸುಜನರ ಪೊರೆದ ರಘು
ಪತಿ ಎನಗೆ ದಯವಾಗೊ 7

ವಸುದೇವ ದೇವಕೀ ಬಸುರೀಲಿ ಜನಿಸಿದ
ವಸುಧೆ ಭಾರವನು ಇಳುಹಿದಿ | ಇಳುಹಿ ಪಾಂಡವರ ಕ
ವಿಸಿದ ಶ್ರೀಕೃಷ್ಣ ದಯವಾಗೊ 8

ಜಿನನೆಂಬ ದನುಜ ಸಜ್ಜನ ಕರ್ಮವ ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ
ವಿನುತ ಬುದ್ಧ ದಯವಾಗೊ 9

ಕಲಿ ವ್ಯಾಪಾರ ವೆಗ್ಗಳವಾಗೆ ತಿಳಿದು ಶಂ
ಫಲಿ ಎಂಬ ಪುರದಿ ದ್ವಿಜನಲ್ಲಿ | ದ್ವಿಜನÀಲ್ಲಿ ಜನಿಸುವ
ಕಲಿಮಲವ ಹರಿಸುವ ಕಲ್ಕಿ ದಯವಾಗೊ 10

ಧಾರುಣಿಯಲ್ಲಿ ಹತ್ತವತಾರದಲಿ ಸುಜ
ನರ ರಕ್ಷಿಸಿದೆ ಜಗನ್ನಾಥ | ಜಗನ್ನಾಥವಿಠಲ ಮ
ವೈರಿ 11
***

pallavi

vEda tatigaLanu (dashAvatAra stOtra). no given rAgA or tALA. Jagannathadasa.

1:vEda tatigaLanu kaddOidavana kondu praLayOdadhiyoLage carisidi
carisi vaivasvatana kAida mahamahima dayavAgO

caraNam 2

mandarADriya dharisi sindhumathavana mADi vrndArakarigE Amrtava
Amrtava uNisida indirArAdhya dayavAgO

caraNam 3

sOmapana nuDi kELi hEmAbhakana konde nhUmeya negahide dADinda
dADinda negehida svAmi bhUvaraha dayavAgO

caraNam 4

kanda kareyaLu kambadindusida nInu vandisida surara salahIdi
salahIdi narasimha tande nI enage dayavAgO

caraNam 5

vrurOcaniya bhUmi mUru pAdava bEDi IraDiyOLaLade bhUvyOma
bhUvyOmavaLeda bhAgIrathiya janaka dayavAgO

caraNam 6

kuvalayadi kSatriyara samara mukhidali konde avani bhAravanu iLuhIde
iLuhIde svAmi bhArgavarAma emage dayavAgO

caraNam 7

satadhrtiya nuDige dasharathana garbhadi vandiditijaranu oresi sujanara
sujanaranu poreda raghupatiye nInolidu dayavAgO

caraNam 8

vasudEva dEvakI vasurinda janisidi vasudhEbhAravanu iLuhIdi
durbuddhi kavisida vinuta shrI buddha dayavAgO

caraNam 9

kaliya vyApAra veggaLavAge tiLidu shambalavembo puradi dvijanalli
dvijanalli janisuva kalki nI enage dayavAgo

caraNam 10

I rIti hattavatAradali sajjanara nI rakSisidi svAmi jagannAtha
jagannAtha viThalane uddAra mADayya bhavadinda
***

No comments:

Post a Comment