ರಾಗ ಜಂಜೂಟಿ ಆದಿತಾಳ
2nd Audio by Mrs. Nandini Sripadಶ್ರೀ ಜಗನ್ನಾಥದಾಸರ ಕೃತಿ
ಯಾತರ ಭಯ ಶ್ರೀನಾಥನ ಪರಮ ಸು -
ಪ್ರೀತಿಯ ಪಡೆದವಗೆ ॥ ಪ ॥
ಕಾತರ ಪಡದಲೆ ಪಾತಕಹರ ವಿಧಿ
ತಾತನೆ ನಿಜಸುಖದಾತನೆಂದರಿತವಗ್ಯಾ ॥ ಅ.ಪ ॥
ಬಂಧು ಜನರು ತನಗೊಂದಿಸಿ ನುಡಿಯಲು ಬಂದ ಭಾಗ್ಯವೇನೊ
ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊ
ಮಂದರಧರ ಗೋವಿಂದನ ಮಾನಸ
ಮಂದಿರದಲಿ ತಂದಿಟ್ಟಿರುವವಗಿನ್ಯಾ ॥ 1 ॥
ದುಸುಮುಸುಗುಟ್ಟುವ ಸತಿಸುತರಿಂದಲಿ ಹಸಗೆಟ್ಟದ್ದೇನೋ
ಅಶನಾಚ್ಛಾದನ ತರಲಿಲ್ಲವೆಂದು ವ್ಯಸನಪಟ್ಟರೇನೊ
ಕುಸುಮನಾಭ ಸುಮನಸರೊಂದಿತ ಪದ
ವಸುದೇವನ ಸುತನೊಶದಲ್ಲಿರುವವಗ್ಯಾ ॥ 2 ॥
ಘಾಸಿಯಿಂದಲಾಯಾಸ ಪಡುತ ಅವಾಸದೊಳಿದ್ದೇನೋ
ಕಾಶಿ ಕಂಚಿ ಕಾಳಹಸ್ತಿ ಮೊದಲ ಪರ ದೇಶ ತಿರುಗಲೇನೋ
ಈಶಾಧೀಶ ಜಗನ್ನಾಥವಿಠ್ಠಲನ
ದಾಸನೆಂದು ಸಂತೋಷದಲ್ಲಿರುವವಗ್ಯಾ ॥ 3 ॥
***
pallavi
yAtara bhaya shrInAthana parama prItiya paDedavage
anupallavi
kAtaragoLadale pAtakahara vidhi tAtane nija sukha dAtanendaritage
caraNam 1
dushu mushu guTTuva shashimukha indali hasageTTeddEnO
ahanAcchAdana taralillavenutali vyasana padUdEO
kusumanAbha sumanasa vanditapada vasudEvana sutanoshadoLa giruvage
caraNam 2
bandhujanaru tanagondisi dAkSaNa banda bhAgyavEnO
hinde munde tanna nindisi nuDiyalu kundAdaddEnO
manadaradhara gOvindana mAnasa mandiradoLu tandiTTiruuvavage
caraNam 3
kAnci kanci hastiyE modalAda dEsha tirugalEnO
ghAsiyinda AyAsa paDuta AvAsadoLiralEnO
IshadhiSha jagannAtha viThalanna dAsanenisi santOSaoLiruvAgE
***
ರಾಗ ಜಂಜೂಟಿ (ಭೈರವಿ) ಆದಿತಾಳ(ಕಹರವಾ)
ಯಾತರ ಭಯ ಶ್ರೀನಾಥನ ಪರಮ-
ಪ್ರೀತಿಯ ಪಡೆದವಗೆ ||ಪ||
ಕಾತರಗೊಳದಲೆ ಪಾತಕಹರವಿಧಿ-
ತಾತನೆ ನಿಜಸುಖದಾತನೆಂದರಿತಗೆ|| ಅ.ಪ||
ದುಸುಮುಸುಗುಟ್ಟುವ ಶಶಿಮುಖಿಯಿಂದಲಿ
ಹಸಗೆಟ್ಟಿದ್ದೇನೋ
ಅಶನಾಚ್ಛಾದನ ತರಲಿಲ್ಲವೆನುತಲಿ
ವ್ಯಸನ ಪಡುವುದೇನೋ
ಕುಸುಮನಾಭ ಸುಮನಸ ವಂದಿತ ಪದ
ವಸುದೇವನ ಸುತನೊಶದೊಳಗಿರುವಗೆ ||೧||
ಬಂಧುಜನರು ತನಗೊಂದಿಸಿದಾಕ್ಷಣ
ಬಂದ ಭಾಗ್ಯವೇನೊ
ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು
ಕುಂದಾದದ್ದೇನೊ
ಮಂದರಧರ ಗೋವಿಂದನ ಮಾನಸ-
ಮಂದಿರದೊಳು ತಂದಿಟ್ಟಿರುವವಗೆ ||೨||
ಕಾಶಿ ಕಂಚಿ ಕಾಳಹಸ್ತಿಯೆ ಮೊದಲಾದ
ದೇಶ ತಿರುಗಲೇನೊ
ಘಾಸಿಯಿಂದ ಆಯಾಸಪಡುತ ಆ-
ವಾಸದೊಳಿರಲೇನೊ
ಈಶಧೀಶ ಜಗನ್ನಾಥವಿಠ್ಠಲನ
ದಾಸನೆನಿಸಿ ಸಂತೋಷದೊಳಿರುವವಗೆ ||೩||
**********
No comments:
Post a Comment