Sunday 15 December 2019

ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ ankita jagannatha vittala

ರಾಗ ಮುಖಾರಿ (ಭೀಮ್ ಪಲಾಸ್ ) ತಾಳ-ಝಂಪೆ

ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ
ಚರಣಾಬ್ಜದಲಿ ಭಕುತಿ, ವಿಷಯದಿ ವಿರಕುತಿ ||ಪ||

ಬಿಂಬನೇ, ಸರ್ವ ಪ್ರಯೋಜನವ ಮಾಡಿ ಪ್ರತಿ-
ಬಿಂಬರಿಗೆ ಸತ್ಫಲಗಳೀವ ಕಾವ
ಬಿಂಬನೇ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ-
ನೆಂಬ ಸುಜ್ಞಾನಪೂರ್ವಕ ನಿನ್ನ ಭಜಿಪ ಸುಖ ||೧||

ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ-
ತರ್ಯಾಮಿ ವ್ಯಾಪ್ಯವ್ಯಾಪಕ ಪ್ರೇರಕ
ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ
ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ ||೨||

ತಾರತಮ್ಯದ ಜ್ಞಾನ , ದುರ್ವಿಷಯಗಳಲಿ ಸ-
ದ್ವೈರಾಗ್ಯ , ಹರಿಪ್ರೇಮಿಗಳಲಿ ಪ್ರೇಮ
ಸೂರಿಗಳ ಸಂಗ ಗುಣರೂಪ ಕ್ರಿಯೆಗಳನು ಸುವಿ-
ಚಾರ ಗೈಯುತೆ ನಿತ್ಯದೊಳು ಮೋದಪಡುವಂತೆ ||೩||

ಮಿಂದೋದಕಗಳೆಲ್ಲ ಮಜ್ಜನವು, ದೇಹಾನು-
ಬಂಧಿ ಜನರೆಲ್ಲ ತವ ಪರಿವಾರವು
ನಿಂದ್ಯ ಕರ್ಮಗಳೆಲ್ಲ ಪಾದುಕಗಳೆಂಬ ಅನು-
ಸಂಧಾನ ಮನಕೆ ನಿತ್ಯದಲಿ ಬರುವಂತೆ ||೪||

ಚೇತನಾಚೇತಗಳೆರಡು ಪ್ರತಿಮೆಗಳ ಸಂ-
ಪ್ರೀತಿಯಲಿ ಸಂರಕ್ಷಿಸುವುದು ಪೂಜೆ
ಈ ತನುವೆ ಸದನವೆಂದರಿತು ನಿತ್ಯದಿ ಜಗ-
ನ್ನಾಥವಿಠ್ಠಲನೆಂಬ ವಿಷಯವೇ ಮುಖ್ಯವೆಂದು||೫||
***


pallavi

karuNisenaginitu karunArNavane ninna caraNAbjadali bhakuti viSayadi virakuti

caraNam 1

bimbanE srva prayOjanava mADi prati bimbarige satphalagaLIva kAva
bimbane svatantra pratibimbA svatantra tamanemba sujnAna pUrvaka ninna bhajipa sukha

caraNam 2

kArya kAraNa anmshi amshAvatAra antaryAmi vyApya vyApaka prEraka
prErya bhAdake bAdhya pOSya pOSaka rUpa Aryarindaritu anudinadi sukhisuva bhAgya

caraNam 3

tAtatamyada jnAna durviSayagaLali sadvairAgya hari prEmigaLali prEma
sUrigala sanga guNarUpa kriyegaLanu suvicAragayyute nityadoLu mOda paDuvantE

caraNam 4

mindOdakagaLellA majjanavu dEhAnu bandhi janarella tava parihAravu
nindya karmagaLellA pAdukagaLemba anusandhAna manake nityadali baruvantE

caraNam 5

cEtanAcEtanagaLeraDu pratimegaLa samprItiyali smavrakSisUlu pUje
I tanuve sadanavendaritu nityadi jagannAtha viThalanemba viSayavE mukhyavendu
***

No comments:

Post a Comment