Thursday 23 December 2021

ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ ankita hayavadana SRINATHA PARVATIYA NAATHA SHARANEMBE VAANI ಗಜೇಂದ್ರ ಮೋಕ್ಷ GAJENDRAMOKSHA




 from para 45 till end


ನಾರಾಯಣ ಕೃಷ್ಣ

ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ |
ವಾಣಿ ಭಾರತಿಯ ಗಜಮುಖನ ಬಲಗೊಂಬೆ ||
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ |
ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ ||

ಭಪನ್ನ ದೇಶ ದೇಶದ ರಾಯರೊಳಗೆ |
ಉತ್ತಮದ ದೇಶ ಗೌಳಾದೇಶದಲ್ಲಿ ||
ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು |
ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ ||

ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ |
ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||
ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ |
ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ || ೩ ||

ಸರ್ಪಶಯನನ ಧ್ಯಾನದಲ್ಲಿದ್ದ ತಾನು |
ಮತ್ತೆ ತ್ರಿಕೊಟಪರ್ವತಕಾಗಿ ಬಂದು ||
ನಾಗಶಯನನ ಧ್ಯಾನದಲ್ಲಿದ್ದ ತಾನು |
ಮೇರುಮಂದರದ ಸಮೀಪಕ್ಕೆ ಬಂದು ||೪ ||

ಸಿದ್ದ ಕಿನ್ನರರು ಗಂಧರ್ವರಿಗೆ ಸ್ಥಾನ |
ಎದ್ದೆದ್ದು ಕುಣಿವ ಮೃಗಖಗಗಳ ಸೀಮ ||
ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ |
ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ ||

ಹಲವು ನದಿ ಹಲವು ಕೊಳ ಹಲವು ಸರೋವರದಿ |
ಹಲವು ಪರಿ ಪುಷ್ಪಗಳು ಮೆರೆವ ಅಳಿಕುಲದಿ ||
ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ |
ಕುಣಿವ ನವಿಲುಗಳ ಗಿಳಿಕೋಗಿಲೆಯ ಗಾನ || ೬ ||

ಬಂದು ನದಿಯಲ್ಲಿ ಸ್ನಾನವನ ಮಾಡಿದನು |
ಚಂದ ದಿಕ್ಕಿದನು ದ್ವಾದಶ ನಾಮಗಳನು ||
ಸಂಧ್ಯಾವಂದನೆ ಮಾಡಿ ಪದ್ಮ ಆಸನದಿ |
ಇಂದಿರಾಪತಿಯ ಮನದೊಳಗಿರಿಸಿ ತಾನು || ೭ ||

ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ |
ನಿಂದಿರ್ದು ವಂದನೆಯ ಮಾಡಲಿಲ್ಲೆಂದ ||
ಎಂದೆನುತ ಮನದಿ ಕೋಪಿಸುತ ಶಾಪಿಸಿದ |
ಕುಂಜರದ ರೂಪಾಗಿ ಜನಿಸು ಹೋಗೆಂದ || ೮ ||

ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ |
ವಿಶ್ಯಾಪ ಎಂದಿಗಾಗುವುದೆನುತ ಪೇಳು ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ವಿಶ್ಯಾಪ ಅಂದಿಗಾಗುವುದೆಂದು ಪೇಳೆ ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ವಿಶ್ಯಾಪ ಅಂದಿಗಾಗುವುದೆಂದು ಪೇಳೆ || ೯ ||

ಜ್ಞಾನವಡಗಿದವು ಅಜ್ಞಾನ ವಾವರಿಸೆ |
ಸೂರ್ಯ ಮುಳುಗಿದನು ಕತ್ತಲೆ ಮುಸುಕಂತೆ ||
ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು |
ಅನೆಯಾದನು ನೃಪನು ಆ ಕ್ಷಣದಿ ತಾನು || ೧೦ ||

ಮೇರುಪರ್ವತ ಕದಲಿ ಇಳಿದು ಬರುವಂತೆ |
ಮೇಲುಮದ ಕೀಳು ಮದ ಸುರಿಯೆ ಕುಂಭದಲಿ |
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ ||
ಕಾಡಾನೆಯಾಳಗ್ಹಲವು ಮಕ್ಕಳನೆ ಪಡೆದು |
ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧ ||

ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ |
ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲೆ ||
ದಟ್ಟ ಡವಿಯೊಳಗೆ ಸಂಚರವ ಮಾಡುತಲೆ |
ಬತ್ತಿದವು ಕೆರೆತೊರೆಯು ಬೇಸಗೆಯು ಬರಲು || ೧೨ ||

ಕಂಡಕಂಡಲ್ಲಿ ಏರುತಲಿ ಇಳಿಯುತಲಿ |
ತುಂಡುತುಂಡಾಗಿ ಗಿಡಮರವ ಮುರಿಯುತಲಿ ||
ತಂಡತಂಡದಲ್ಲಿದ ತನ್ನ ಸತಿ ಸುತರು |
ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ ||

ಬಾಳೆ ಕಿತ್ತಳೆನಿಂಬೆ ಚೂತ ಮಾದಲವು
ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು ||
ಮೇಲಾದ ಫಲಪುಷ್ಪದಿಂದ ಶೋಭಿಸಲು |
ತಾವರೆ ಕೊಳವೊಂದ ಕಂಡ ಗಜರಾಜ || ೧೪ ||

ನವರತ್ನ ಮುತ್ತು ಮಾಣಿಕ್ಯ ಸೋಪಾನ |
ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು ||
ನಲಿಯುತಿವೆ ಹಲುವ ಹಕ್ಕಿಗಳು ಹಂಸಗಳು |
ಪರಿಮಳಿಸುವಾ ಕೊಳವೆ ಹೊಕ್ಕ ಗಜರಾಜ ||೧೫ ||

ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ |
ಮಡುವಿನಲ್ಲಿ ಚೆಲ್ಲುತಲಿ ನಲಿದುವೊಂದಾಗಿ ||
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿದೋಂಡಿರಲಿಂತು ಸಮ್ಭ್ರದುದಿ ಜಲದಿ || ೧೬ ||

ಮುನಿಯು ಶಾಪದಲೊಂದು ಮಕರಿ ಮಡುವಿನೊಳು |
ಹಲವುಕಾಲದಿ ತಪಿಸಿ ಜೀವಿಸುತ್ತಿರಲು ||
ಮದಗಜವು ಪೊಕ್ಕು ಮಡುವನೆ ಕಲುಕು ತಿರಲು
ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲು || ೧೭ ||

ಅತ್ತಿತ್ತ ನೋಡಿದನು ಸುತ್ತ ನೋಡಿದನು |
ಎತ್ತ ನೋಡಿದರೂ ಬಿಡದು ಆ ಮಕರಿ ಕಾಲು ||
ಎಳೆದೊಮ್ಮೆ ನೋಡಿದನು ಸೆಳದೊಮ್ಮೆ ನೋಡಿದನು |
ಹೇಗೆ ನೋಡಿದರು ಬಿಡದು ಆ ಮಕರಿ ಕಾಲು || ೧೮ ||

ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ |
ತಮ್ಮ ಕೈಲಾಗದೆಂದೆನುತ ತಿರುಗಿದರು |
ಎನ್ನ ಪುಣ್ಯದ ಫಲವು ಹೋಗಿ ನೀವೆಂದ |
ದುಮ್ಮಾನದಿಂದ ದೊರದಲ್ಲಿದ್ದರವರು || ೧೯ ||

ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು |
ರಕ್ತಮಯವಾಗಿ ತುಂಬಿತು ಕೊಳದ ನೀರು |
ಅಕ್ಕಟಾ ಎನಗಿನ್ನು ಗತಿಯಾರು ಎನುತ
ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ ||

ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ |
ಸಚ್ಚಿದಾನಂದ ಸರ್ವೇಶ್ವರನೆ ಕಾಯೋ ||
ಭಕ್ತವತ್ಸಲನೆ ಭವಭಂಜನನೆ ಕಾಯೋ |
ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ || ೨೧ ||

ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ |
ಇಂಬಿಟ್ಟ್ ಸಲಹೋ ಜಗದೀಶ್ವರನ ಕಾ ಯೋ |
ಜಂಗಮ ಸ್ಥಾವರಗದೊಳಗೆ ಪರಿಪೂರ್ಣ |
ಎಂಬಂಥ ನೀ ಎನ್ನ ಬಂಧನ ಬಿಡಿಸೊ || ೨೨ ||

ಈರೇಳು ಭುವನವನು ಹೃದಯದೊಳಗಿಟ್ಟೆ |
ಕಾದುಕೋ ಎಂದು ಗಜರಾಜ ವೊರೆಯಿಟ್ಟ |
ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ|
ಬಹಳ ನೊದೆನೆ ಸ್ವಾಮಿ ಕಾಯೋ ಬಾಯೆಂದ || ೨೩ ||

ವೇದಗಳ ಕದ್ದು ಕೊಂಡೊಯ್ದ ದಾನವನ |
ಸಾಧಿಸಿದೆ ಭೇಧಿಸಿದೆ ಅವನ ಛೇದಿಸಿದೆ ||
ಆದಿ ನಿಗಮವ ತಂದು ಕಮಲಜನಿಗಿತ್ತೆ |
ವೇದಾಂತವೇದ್ಯ ಮತ್ಸ್ಯಾವತಾರ ಶರಣು || ೨೪ ||

ಸುರಾಸುರರು ಪಾಲ್ಗಡಲ ಮಥಿಸುತಿರಲು |
ಮರವೈರಿ ಹಾಸಿಗೆಯ ಹುರಿ ಮಾಡಿಕೊಂಡು |
ಭರದಿ ಮಂದರಗಿರಿಯು ಇಳಿಯುತಿರೆ ಬಂದು |
ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರನು || ೨೫ ||

ಸುರುಳಿ ಸುತ್ತಿದ ಭೂಮಿ ದಾಡೆಯಲಿ ತಂದೆ |
ದುರುಳ ಹಿರಣ್ಯಾಕ್ಷನನು ಬೇಗದಲಿ ಕೊಂದೆ |
ಧರಣಿದೇವಿಯನು ಸದಮಲದೊಳು ಗೆದ್ದೆ |
ವರಹಾವತಾರ ಶ್ರೀಹರಿ ನಿನಗೆ ಶರಣು || ೨೬ ||

ಬಾಲಕನು ಕರೆಯಲಿಕೆ ಕಂಬದಲಿ ಬಂದೆ |
ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ ||
ಶೀಲ ಪ್ರಲ್ಹಾದನಿಗೆ ಅಭಯವನು ಇತ್ತೆ |
ಶ್ರೀಲಕ್ಷ್ಮಿಪೊಡನಿದ್ದ ನರಸಿಂಹ ಶರನು || ೨೭ ||

ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ |
ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ ||
ಅಲೆದ ಪಾದದಲಿ ಭಾಗಿರಥಿಯ ತಂದೆ |
ಚೆಲುವೆ ವಾಮನಮೂರ್ತಿ ತ್ರಿವಿಕ್ರಮನೆ ಶರನು || ೨೮ ||

ದುಷ್ಟ ಕ್ಷತ್ರಿಯ ನೃಪರ ಕುಲವ ಸಂಹರಿಸಿ |
ರಕ್ತದಲಿ ಸ್ನಾನತರ್ಪಣವ ನೀ ಕೋಟ್ಟೆ
ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿ |
ವಿಪ್ರ ಭಾರ್ಗವರಾಮ ಹರಿ ನಿನಗೆ ಶರಣು || ೨೯ ||

ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ |
ದುರುಳ ರಾವಣಶಿರಗಳ ಹತ್ತು ತರಿದೆ |
ವರ ವಿಭೀಷಣಗವನ ರಾಜ್ಯ ಗಳನಿತ್ತೆ ||
ಶರಣರಕ್ಷಕ ಸೀತಾಪತಿ ರಾಮ ಶರಣು || ೩೦ ||

ಮಧುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ |
ತರಳತನದಲಿ ಹಾಲು ಬೆಣ್ಣೆಗಳ ಮೆದ್ದೆ |
ತರುವ ಕಾಯುತ ಕೊಂದೆ ಹಲವು ರಕ್ಕಸರ |
ಬಲರಾಮಕೃಷ್ಣ ಗೋಪಾಲಕನೆ ಶರಣು || ೩೧ ||

ತ್ರಿಪುರಸತಿಯರ ವ್ರತ ಅಪಹರಿಸಿದವನೆ |
ಪೃಥವಿಯುಳು ಅಶ್ವತ್ಥನಾಗಿ ಮೆರೆದವನೆ ||
ಬಿಸಿಗಣ್ಣ ಹರಗೆ ಅಂಬಾಗಿ ನಿಂತವನೆ ||
ಪಶುಪತಿಪ್ರೀಯ ಬೌದ್ಧ ಅವತಾರ ಶರಣು || ೩೨ ||

ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು |
ಬಿನ್ನಾಣದಿಂದ ತುರುಗವನೇರಿಕೊಂಡು ||
ಬನ್ನ ಪಡಿಸುತ ಹಲವು ಪಾತಕರ ಕೊಂದೆ |
ಬ್ರಹ್ಮಸ್ವರೂಪ ಕಲ್ಕ್ಯವತಾರ ಶರಣು || ೩೩ ||

ಅರಿಯದಂತಿರದೆ ಅಚ್ಯುತ ರಕ್ಶಿಸೆನ್ನ |
ಮರೆಯೆ ದೆಂದಿರದೆ ಮಾಧವ ರಕ್ಷಿಸೆನ್ನ ||
ಕೆಳೆನೆಂದೆನದೆ ಕೇಶವ ರಕ್ಷಿಸೆನ್ನ |
ಕಾಣಿನೆಂದೆನದೆ ಕರುಣಿಸಿ ರಕ್ಷಿಸೆನ್ನ || ೩೪ ||

ಕಾಯಕಂಜದ ಪ್ರಾಣ ಹೋಗುತಿದೆ ಮುನ್ನ |
ಯಾವಾಗ ಹರಿಬಂದು ಕಾಯ್ವನೋ ಎನ್ನ |
ಚೇರಿದನು ಕೂಗಿ ಮೊರೆಯಿಟ್ಟ ಗಜರಾಜ |
ದಾನವಾಂತಕನು ಕಿವಿಗೋಟ್ಟು ಕೇಳಿದನು || ೩೫ ||

ಕ್ಷಿರಾಬ್ಧಿಯಲಿ ವೈಕುಂಠ ನೆಲಸಿದ್ಧ |
ಶೇಷನಾ ಹಾಸಿಗೆಯ ಮೇಲೆ ಕುಳ್ಳಿರ್ದ ||
ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು |
ಆಲಯಿಸಿ ಕೇಳಿದನೆ ಅಜನನೆ ಅಜನ ಪೆತ್ತವನು || ೩೬ ||

ಶಂಕಚಕ್ರಗಳಿಲ್ಲವೆಂದು ಶಂಕಿಸದೇ |
ಬಿಂಕದಿಂ ಗರುಡನ್ನ ಪಗಲೇರಿಸಿಕೊಳದೆ ||
ಪಂಕಜಾಕ್ಷಿಯ ಕೂಡ ತಾನು ಉಸಿರಿಸದೆ ||
ಪಂಕಜನಾಭ ಬಂದನು ಕೊಳದ ಕಡೆಗೆ || ೩೭ ||

ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ |
ವಜ್ರಕುಂಡಲ ಕದಪು ಹಾರಗಳು ಹೊಳೆಯೆ |
ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿ |
ಎದ್ದು ಬಂದನು ದಯಾಸಮುದ್ರ ಬಂದಂತೆ || ೩೮ ||

ಸಿಂಧುಸುತೆ ಪತಿಯೆಲ್ಲಿ ಪೋದನೋ ಎನುತ |
ಮಂದಗಮನೆಯು ಬರಲು ಪುರವೆಲ್ಲ ತೆರಳೆ ||
ವಂದಿಸದ ಗರುಡ ಗಂಧರ್ವರೊಗ್ಗಿನಲಿ |
ಅಂದಾಗ ಶಖಚಕ್ರವು ಕೂಡಿ ಬರಲು || ೩೯ ||

ಹರಿಯು ಗರುಡನನೇರಿ ಕರಿಯತ್ತ ಬರಲು |
ಹರ ಪಾರ್ವತಿಯರು ನಂದಿಯನರಿಕೊಳುತ ||
ಶಿರವ ಮೇಲಿನ ಗಂಗೆ ತುಳುಕಾಡುತಿರಲು |
ಹರ ಬಂದ ಕೈಲಾಸಪುರದಿಂದ ಇಳಿದು || ೪೦ ||

ತೊಡೆಯ ಮೇಲಿನ ಗೌರಿದೇವಿಯಳ ಸಹಿತ |
ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು |
ಹರಪಾರ್ವ ತಿದೇವಿ ವೃಷಭವನ್ನೇರಿ |
ಹರ ಬಂದ ಕೈಲಾಸಪುರದಿಂದ ಇಳಿದು || ೪೧ ||

ದೇವರ್ಷಿ ಬ್ರಹ್ಮರ್ಷಿ ರಾಜರ್ಷಿ ಸಹಿತ |
ದೇವಪುತ್ರಾದಿ ಸನಕಾದಿಗಳು ಕೂಡಿ ||
ಸುಮ್ಮನೇ ನಾರದನಂದು ನಡೆತಂದ |
ಧರ್ಮ ಸ್ವರೂಪವೆಲ್ಲಾ ನೆರೆದರಂದು || ೪೨ ||

ಬಂದ ಚಕ್ರವನು ಕರಕಮಲದಲಿ ತೆಗೆದು |
ಸಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ |
ಅಂದಾಗ ಅವನ ಶಾಪ ವಿಶ್ಯಾಪವಾಗಿ |
ಗಂಧರ್ವ ರೂಪಿನಲಿ ನಿಂತಿತಾ ಮಕರಿ || ೪೩ ||

ಹರಿಯ ಸಂದರ್ಶನವು ಮದಗಜಕೆ ಸೋಕುತಲೆ |
ಒದಗಿದವು ಶಂಖ ಚಕ್ರ ನಾಲ್ಕು ಕೈಗಳಲಿ |
ಉತ್ತ ಪಿತಾಂಬರವು ಕಿರೀಟ ಕುಂಡಲವು |
ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು || ೪೪ ||

ಜಯಜಯ ಜಗನ್ನಾಥ ಜಯ ವಿಶ್ವಮೂರ್ತಿ |
ಜಯ ಜಯ ಜನಾರ್ಧನ ಜಯ ವಿಶ್ವರೂಪ |
ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ |
ಜಯವೆಂದು ಪದಗಳಿಗೆ ಬಂದು ಎರಗಿದನು || ೪೫ ||

ಇಂದಿವನ ಭಾಗ್ಯವನು ನೋಡುವರು ಕೆಲರು |
ಇಂದಿರಾ ಪತಿಯ ಕೊಂಡಾಡುವರು ಕೆಲರು |
ಮಂದಾರ ಹೊಮಳೆಯ ಕರೆಯುತ್ತ ಸುರರಂ |
ದುಂದುಭಿ ವಾದ್ಯಗಳ ವೈಭವ ಗಳಿರಲು || ೪೬ ||

ಸಿರಿಸಹಿತ ಹರಿಯು ಗರುಡ ನೇರಿಕೊಂಡು
ಕರಿರಾಜನೊಡನೆ ವೈಕುಂಠಕ್ಕೆ ಬರಲು ||
ಹರಪಾರ್ವತಿಯರು ಕೈಲಾಸಕೆ ತೆರಳೆ |
ತರತರದ ವಾಹನಾದಿ ಸುರರು ತೆರಳಿದರು || ೪೭ ||

ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳಿದವರಿಗೆ |
ದುಃಸ್ವಪ್ನ ದುರ್ಬುಧಿ ದುರ್ವ್ಯಸನ ಕಳೆವದು ||
ಸರ್ಪಾರಿ ವಾಹನನ ಧ್ಯಾನ ದೊಳಗಿರಲು |
ಸತ್ಸಂಗ ಸಾಯುಜ್ಯ ಪದವಿ ದೊರಕುಪುದು || ೪೮ ||

ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ
ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ |
ಹರಿಯ ನೆನೆದವರಿಗೆ ಪರಮ ಪದವಿಯು ಉಂಟು |
ಕರಿರಾಜವರದನ್ನ ಶರಣೆಂದು ಭಜಿಸು || ೪೯ ||

ಜಯತು ದ್ರುವರಾಯನಿಗೆ ವರವಿತ್ತ ದೇವ |
ಜಯತು ಪ್ರಲ್ಹಾದಭಯವಿತ್ತ ದೇವ |
ಜಯತು ದ್ರೌಪದಿಯಭಿಮಾನ ಕಾಯ್ದು ದೇವಾ
ಜಯತು ಜಯ ಹಯವದನ ಶ್ರೀವಾಸುದೇವ || ೫೦ ||
***

nArAyaNa kRuShNa

SrInAtha pArvatiya nAtha SaraNeMbe |
vANi BAratiya gajamuKana balagoMbe ||
nAnu ballaShTu pELuvenu I katheya |
SrInAtha gajarAjagolida sangatiya || 1 ||

Bapanna dESa dESada rAyaroLage |
uttamada dESa gauLAdESadalli ||
viShNu BaktaroLu indradyumna nRupanu |
matte BUsurara pAlisuttidda tAnu || 2 ||

cittadalli narahariya nenedu cintisuta |
putramitrAdi bandhugaLa varjisuta ||
dhyAnadali narahariya nenedu cintisuta |
Anekudureya rAjyagaLanu tyajisutta || 3 ||

sarpaSayanana dhyAnadallidda tAnu |
matte trikoTaparvatakAgi bandu ||
nAgaSayanana dhyAnadallidda tAnu |
mErumandarada samIpakke bandu ||4 ||

sidda kinnararu gandharvarige sthAna |
eddeddu kuNiva mRugaKagagaLa sIma ||
etta nODalu nAlku dESa vistIrNa |
sutta suvarNamaya vastugaLa dhAma || 5 ||

halavu nadi halavu koLa halavu sarOvaradi |
halavu pari puShpagaLu mereva aLikuladi ||
celuva gandharva kinnariyara sthAna |
kuNiva navilugaLa giLikOgileya gAna || 6 ||

bandu nadiyalli snAnavana mADidanu |
canda dikkidanu dvAdaSa nAmagaLanu ||
sandhyAvandane mADi padma Asanadi |
indirApatiya manadoLagirisi tAnu || 7 ||

andAga AyeDege agastyamuni banda |
nindirdu vandaneya mADalillenda ||
endenuta manadi kOpisuta SApisida |
kunjarada rUpAgi janisu hOgenda || 8 ||

tappunTu maharShiye kELu binnapava |
viSyApa endigAguvudenuta pELu ||
viShNu cakravu bandu ninna sOkutale |
viSyApa aMdigAguvudendu pELe ||
viShNu cakravu bandu ninna sOkutale |
viSyApa andigAguvudendu pELe || 9 ||

j~jAnavaDagidavu aj~jAna vAvarise |
sUrya muLugidanu kattale musukante ||
dhyAnisuta hindumundAga kuLitiralu |
aneyAdanu nRupanu A kShaNadi tAnu || 10 ||

mEruparvata kadali iLidu baruvante |
mElumada kILu mada suriye kuMBadali |
kADAne kariyAne mariyAne sahita |
kUDikonDella ondAgi saMBramisi ||
kADAneyALag~halavu makkaLane paDedu |
kAnanadoLage sancarisuttidda tAnu || 11 ||

GaTTa beTTagaLa hattutale iLiyutale |
hiTTu hiTTAgi kalmarava tuLiyutale ||
daTTa DaviyoLage sancarava mADutale |
battidavu keretoreyu bEsageyu baralu || 12 ||

kanDakanDalli Erutali iLiyutali |
tunDutunDAgi giDamarava muriyutali ||
tanDatanDadallida tanna sati sutaru |
benDAgi hasivu tRuSheyinda baLalidaru || 13 ||

bALe kittaLeniMbe cUta mAdalavu
dALiMba drAkShiKarjUra pEraLeyu ||
mElAda PalapuShpadiMda SOBisalu |
tAvare koLavonda kanDa gajarAja || 14 ||

navaratna muttu mANikya sOpAna |
koLada suttalu mutti cakravAkagaLu ||
naliyutive haluva hakkigaLu haMsagaLu |
parimaLisuvA koLave hokka gajarAja ||15 ||

hoDeyutali baDeyutali kuDiyutali nIra |
maDuvinalli cellutali naliduvondAgi ||
kADAne kariyAne mariyAne sahita |
kUDidOnDiralintu samBradudi jaladi || 16 ||

muniyu SApadalondu makari maDuvinoLu |
halavukAladi tapisi jIvisuttiralu ||
madagajavu pokku maDuvane kaluku tiralu
taDeyadA makari hiDiyitu kariya kAlu || 17 ||

attitta nODidanu sutta nODidanu |
etta nODidarU biDadu A makari kAlu ||
eLedomme nODidanu seLadomme nODidanu |
hEge nODidaru biDadu A makari kAlu || 18 ||

tanna sati sutarella seLadarondAgi |
tamma kailAgadendenuta tirugidaru |
enna puNyada Palavu hOgi nIvenda |
dummAnadiMda doradalliddaravaru || 19 ||

kaccutali seLeyutali A makari kAlu |
raktamayavAgi tuMbitu koLada nIru |
akkaTA enaginnu gatiyAru enuta
dikkugeTTante moreyiTTa gajarAja || 20 ||

acyutAnanta SrIhariyenna kAyO |
saccidAnanda sarvESvarane kAyO ||
Baktavatsalane BavaBanjanane kAyO |
kaShTapaDutEne karuNisi karuNi kAyO || 21 ||

eMBattu nAlku lakSha jIvarASigaLA |
iMbiTT salahO jagadISvarana kA yO |
jangama sthAvaragadoLage paripUrNa |
eMbantha nI enna baMdhana biDiso || 22 ||

IrELu Buvanavanu hRudayadoLagiTTe |
kAdukO endu gajarAja voreyiTTa |
ahAra nidre illade sAvira varuSha|
bahaLa nodene svAmi kAyO bAyenda || 23 ||

vEdagaLa kaddu konDoyda dAnavana |
sAdhiside BEdhiside avana CEdiside ||
Adi nigamava tandu kamalajanigitte |
vEdAntavEdya matsyAvatAra SaraNu || 24 ||

surAsuraru pAlgaDala mathisutiralu |
maravairi hAsigeya huri mADikonDu |
Baradi mandaragiriyu iLiyutire bandu |
giriyanettida kUrma hari ninage Saranu || 25 ||

suruLi suttida BUmi dADeyali taMde |
duruLa hiraNyAkShananu bEgadali koMde |
dharaNidEviyanu sadamaladoLu gedde |
varahAvatAra SrIhari ninage SaraNu || 26 ||

bAlakanu kareyalike kaMbadali bande |
sILi rakkasana karuLina mAle hAkide ||
SIla pralhAdanige aBayavanu itte |
SrIlakShmipoDanidda narasiMha Saranu || 27 ||

baliya dAnava bEDi brahmacAriyAgi |
nelavanellava mUru aDimADi aLede ||
aleda pAdadali BAgirathiya taMde |
celuve vAmanamUrti trivikramane Saranu || 28 ||

duShTa kShatriya nRupara kulava saMharisi |
raktadali snAnatarpaNava nI kOTTe
matte vEdAnta SAstragaLa nere Odi |
vipra BArgavarAma hari ninage SaraNu || 29 ||

harana billane muridu dharaNijeya tande |
duruLa rAvaNaSiragaLa hattu taride |
vara viBIShaNagavana rAjya gaLanitte ||
SaraNarakShaka sItApati rAma SaraNu || 30 ||

madhureyali huTTi gOkuladali beLede |
taraLatanadali hAlu beNNegaLa medde |
taruva kAyuta konde halavu rakkasara |
balarAmakRuShNa gOpAlakane SaraNu || 31 ||

tripurasatiyara vrata apaharisidavane |
pRuthaviyuLu aSvatthanAgi meredavane ||
bisigaNNa harage aMbAgi nintavane ||
paSupatiprIya bauddha avatAra SaraNu || 32 ||

varNASramagaLella ondAgi iralu |
binnANadinda turugavanErikoMDu ||
banna paDisuta halavu pAtakara koMde |
brahmasvarUpa kalkyavatAra SaraNu || 33 ||

ariyadantirade acyuta rakSisenna |
mareye dendirade mAdhava rakShisenna ||
keLenendenade kESava rakShisenna |
kANinendenade karuNisi rakShisenna || 34 ||

kAyakanjada prANa hOgutide munna |
yAvAga haribandu kAyvanO enna |
cEridanu kUgi moreyiTTa gajarAja |
dAnavAntakanu kivigOTTu kELidanu || 35 ||

kShirAbdhiyali vaikuMTha nelasiddha |
SEShanA hAsigeya mEle kuLLirda ||
SrIlakShmI sammELanadiMda oppiralu |
Alayisi kELidane ajanane ajana pettavanu || 36 ||

SankachakragaLillavendu SankisadE |
binkadiM garuDanna pagalErisikoLade ||
pankajAkShiya kUDa tAnu usirisade ||
pankajanABa bandanu koLada kaDege || 37 ||

sajje upparigeyindiLidu baruvAga |
vajrakunDala kadapu hAragaLu hoLeye |
hodda pItAMbaravu nelake aleyutali |
eddu bandanu dayAsamudra baMdaMte || 38 ||

sindhusute patiyelli pOdanO enuta |
mandagamaneyu baralu puravella teraLe ||
vandisada garuDa gandharvarogginali |
andAga SaKacakravu kUDi baralu || 39 ||

hariyu garuDananEri kariyatta baralu |
hara pArvatiyaru nandiyanarikoLuta ||
Sirava mElina gange tuLukADutiralu |
hara baMda kailAsapuradinda iLidu || 40 ||

toDeya mElina gauridEviyaLa sahita |
muDiya mElina gange tuLukADu tiralu |
harapArva tidEvi vRuShaBavannEri |
hara baMda kailAsapuradinda iLidu || 41 ||

dEvarShi brahmarShi rAjarShi sahita |
dEvaputrAdi sanakAdigaLu kUDi ||
summanE nAradanaMdu naDetaMda |
dharma svarUpavellA neredaraMdu || 42 ||

banda cakravanu karakamaladali tegedu |
sandhisiTTanu makari hallu murivante |
andAga avana SApa viSyApavAgi |
gaMdharva rUpinali nintitA makari || 43 ||

hariya saMdarSanavu madagajake sOkutale |
odagidavu SanKa chakra nAlku kaigaLali |
utta pitAMbaravu kirITa kuMDalavu |
eLetuLasimAlegaLu koraLoLoppidavu || 44 ||

jayajaya jagannAtha jaya viSvamUrti |
jaya jaya janArdhana jaya viSvarUpa |
jayatu sarvOttamane kShirAbdhiSayana |
jayaveMdu padagaLige baMdu eragidanu || 45 ||

indivana BAgyavanu nODuvaru kelaru |
indirA patiya konDADuvaru kelaru |
mandAra homaLeya kareyutta suraraM |
duMduBi vAdyagaLa vaiBava gaLiralu || 46 ||

sirisahita hariyu garuDa nErikoMDu
karirAjanoDane vaikunThakke baralu ||
harapArvatiyaru kailAsake teraLe |
taratarada vAhanAdi suraru teraLidaru || 47 ||

hottAre eddu I kathe hELi kELidavarige |
duHsvapna durbudhi durvyasana kaLevadu ||
sarpAri vAhanana dhyAna doLagiralu |
satsanga sAyujya padavi dorakupudu || 48 ||

hariya nene hariya nene hariya nene manave
mareyadale mAdhavana nene kanDya manave |
hariya nenedavarige parama padaviyu uMTu |
karirAjavaradanna SaraNendu Bajisu || 49 ||

jayatu druvarAyanige varavitta dEva |
jayatu pralhAdaBayavitta dEva |
jayatu draupadiyaBimAna kAydu dEvA
jayatu jaya hayavadana SrIvAsudEva || 50 ||
***

 ಶ್ರೀನಾಥ ಪಾರ್ವತೀ ನಾಥ ಶರಣೆಂಬೆ |

ವಾಣಿ ಭಾರತೀ ಗಜಮುಖನ ಬಲಗೊಂಬೆ ||

ನಾನು ಬಲ್ಲಷ್ಟು ಹೇಳುವೆನು ಈ ಕಥೆಯ |

ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ ||

ಛಪ್ಪನ್ನ ದೇಶದ ರಾಜರುಗಳೊಳಗೆ |

ಉತ್ತಮದ ದೇಶ ಗೌಳದೇಶದಲಿ||

ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು |

ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ ||

ಚಿತ್ತದಲಿ ನರಹರಿಯ ನೆನೆದು ಚಿಂತಿಸುತ |

ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||

ಸರ್ಪಶಯನನ ಧ್ಯಾನದೊಳಿದ್ದ ತಾನು |

ಮತ್ತೆ ತ್ರಿಕೊಟ ಪರ್ವತಕಾಗಿ ಬಂದ ||೩||

ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ |

ಆನೆಕುದುರೆ ರಾಜ್ಯಗಳ ತ್ಯಜಿಸುತ್ತ || 

ನಾಗಶಯನನ ಧ್ಯಾನದೊಳಿದ್ದ ತಾನು |

ಮೇರುಮಂದರದ ಸಮೀಪಕ್ಕೆ ಬಂದ ||೪ ||

ಸಿದ್ದ ಕಿನ್ನರರು ಗಂಧರ್ವರಿಗೆ ಸ್ಥಾನ |

ಎದ್ದೆದ್ದು ಕುಣಿವ ಖಗಮೃಗಗಳ ನಿಸ್ಸೀಮ ||

ಎತ್ತ ನೋಡಲು ನಾಲ್ಕು ದೇಶಗಳ ವಿಸ್ತೀರ್ಣ |

ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ ||

ಹಲವು ನದಿ ಹಲವು ಕೊಳ ಹಲವು ಸರೋವರದಿ |

ಹಲವು ಪರಿ ಪುಷ್ಪಗಳು ನಲಿವ ಅಳಿಕುಲದಿ ||

ಕುಣಿವ ನವಿಲು ಗಿಳಿ ಕೋಗಿಲೆಗಳ ಗಾನ |

ಚೆಲುವ ಗಂಧರ್ವ ಕಿನ್ನರರಿಗೆ ಸ್ಥಾನ || ೬ ||

ಬಂದು ನದಿಯಲ್ಲಿ ಸ್ನಾನವನು ಮಾಡಿ |

ಛಂದಕಿಕ್ಕಿದನೆ ದ್ವಾದಶ ನಾಮಗಳನು ||

ಸಂಧ್ಯಾವಂದನೆ ಮಾಡಿ ಪದ್ಮಾಸನದಿ ಕುಳಿತು|

ಇಂದಿರಾಪತಿಯ ಧ್ಯಾನದೊಳರಸಿ ತಾನು || ೭ ||

ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದು|

ನಿಂದೆದ್ದು ವಂದನೆಯ ಮಾಡಲಿಲ್ಲೆಂದು ||

ಎಂದೆನುತ ಕೋಪಿಸುತ ಶಾಪಿಸಿದ |

ಕುಂಜರದ ರೂಪಾಗಿ ಜನಿಸು ಹೋಗೆಂದ || ೮ ||

ತಪ್ಪುಂಟು ಮಹ ಋಷಿಯೆ ಬಿನ್ನಪವ ಕೇಳು|

ಉಶ್ಯಾಪ ಎಂದಿಗಾಗುವುದೆನುತ ಪೇಳು ||

ವಿಷ್ಣು ಚಕ್ರವು ಬಂದು ನಿನ್ನ ಸೋಕುತಲಿರೆ |

ಉಶ್ಯಾಪ ಅಂದಿಗಾಗುವುದೆನುತ ಪೇಳೆ  || ೯ ||

ಜ್ಞಾನವಡಗಿದವು ಅಜ್ಞಾನವಾವರಿಸೆ |

ಸೂರ್ಯ ಮುಳುಗಿದರೆ ಕತ್ತಲೆ ಮುಸುಕಿದಂತೆ ||

ಧ್ಯಾನಿಸುತ ಹಿಂದುಮುಂದಾಗಿ ಕುಳಿತಿರಲು |

ಆನೆ ಆದನು ನೃಪನು ಆ ಕ್ಷಣದಿ ತಾನು || ೧೦ ||

ಮೇರು ಮಂದರವು ಜರಿದಿಳಿದು ಬರುವಂತೆ |

ಮೇಲುಮದ ಕೀಳು ಮದ ಸುರಿಯೆ ಕುಂಭದಲಿ |

ಕಾಡಾನೆಯಲಿ ಹಲವು ಮಕ್ಕಳನೆ ಪಡೆದು |

ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧||

ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ |

ಹಿಟ್ಟು ಹಿಟ್ಟಾಗಿ ಗಿಡ ಮರವ ತುಳಿಯುತಲೆ ||

ದಟ್ಟಡವಿಯಲಿ ಸಂಚಾರವ ಮಾಡುತಲಿರೆ |

ಬತ್ತಿದವು ಕೆರೆತೊರೆಯು ಬೇಸಿಗೆಯು ಬರಲು || ೧೨ ||

ಕಂಡ ಕಂಡಲ್ಲಿ ಏರುತಲಿ ಇಳಿಯುತಲಿ |

ತುಂಡುತುಂಡಾಗಿ ಗಿಡಮರವ ಮುರಿಯುತಲಿ ||

ತಂಡ ತಂಡದಲಿದ್ದ ತನ್ನ ಸತಿ ಸುತರೆಲ್ಲ|

ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ ||

ಬಾಳೆ ಕಿತ್ತಳೆ ನಿಂಬೆ ಚೂತ ಮಾದಲವು

ದಾಳಿಂಬ ದ್ರಾಕ್ಷಿ ಖರ್ಜೂರ ಪೇರಳೆಯು ||

ಮೇಲಾದ ಫಲಪುಷ್ಪದಿಂದ ಶೋಭಿಸುವ

ತಾವರೆಯ ಕೊಳವೊಂದ ಕಂಡ ಗಜರಾಜ || ೧೪ ||

ನವರತ್ನ ಮುತ್ತು ಮಾಣಿಕದ ಸೋಪಾನ |

ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು ||

ನಲಿಯುತಿರೆ ಹಲವು ಹಕ್ಕಿಗಳು ಹಂಸಗಳು |

ಪರಿಮಳಿಸುವಾ ಕೊಳವ ಹೊಕ್ಕ ಗಜರಾಜ ||೧೫ ||

ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ |

ಮಡುವಿನಲಿ ಚೆಲ್ಲುತಲಿ ನಲಿದವೊಂದಾಗಿ ||

ಕಾಡಾನೆ ಕರಿಯಾನೆ ಮರಿಯಾನೆ ಸಹಿತ |

ಕೂಡಿಕೊಂಡಿರಲಿಂತು ಸಂಭ್ರಮದಿ ಜಲದಿ || ೧೬ ||

ಮುನಿಯ ಶಾಪದಳೊಂದು ಮಕರಿ ಮಡುವಿನಲಿ|

ಹಲವುಕಾಲದಿ ತಪಿಸಿ ಜೀವಿಸುತ್ತಿರಲು ||

ಮದಗಜವು ಪೊಕ್ಕು ಮಡುವನೆ ಕಲಕುತಿರಲು

ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲ || ೧೭ ||

ಅತ್ತಿತ್ತ ನೋಡಿದನು ಸುತ್ತ ನೋಡಿದನು |

ಎತ್ತ ನೋಡಿದರೂ ಬಿಡದಾ ಮಕರಿ ಕಾಲು ||

ಎಳೆದೊಮ್ಮೆ ನೋಡಿದನು ಸೆಳದೊಮ್ಮೆ ನೋಡಿದನು |

ಸೆಳೆದು ಖೊಡವಿದರು ಬಿಡದಾ ಮಕರಿ ಕಾಲು || ೧೮ ||

ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ |

ತಮ್ಮ ಕೈಲಾಗದೆಂದೆನುತ ತೆರಳಿದರು |

ನಿಮ್ಮ ಪುಣ್ಯದ ಫಲವು ಹೋಗಿ ನೀವೆಂದ |

ದುಮ್ಮಾನದಲಿ ದೂರದಲಿದ್ದರವರು || ೧೯ ||

ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು |

ರಕ್ತಮಯವಾಗಿ ತುಂಬಿತು ಕೊಳದ ನೀರು |

ಅರ್ಕಟಾ! ಎನಗಿನ್ನು ಗತಿಯಾರು ಎಂದೆನುತ|

ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ ||

ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ |

ಸಚ್ಚಿದಾನಂದ ಸರ್ವೇಶ್ವರನೆ ಕಾಯೋ ||

ಭಕ್ತವತ್ಸಲನೆ ಭವಭಂಜನನೆ ಕಾಯೋ |

ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ || ೨೧ ||

ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ |

ಇಂಬಿಟ್ಟು ಸಲಹುವ ಜಗದೀಶ್ವರನೆ ಕಾಯೋ |

ಜಂಗಮ ಸ್ಥಾವರಗಳೊಳಗೆ ಪರಿಪೂರ್ಣನೆನಿಸಿ |

ನೀ ಎನ್ನ ಬಂಧನವ ಬಿಡಿಸಿ ಕಾಯೋ || ೨೨ ||

ಈರೇಳು ಲೋಕವನು ಹೃದಯದೊಳಗಿಟ್ಟೆ |

ಕಾದುಕೋ ಎಂದು  ಮೊರೆಯಿಟ್ಟ ಗಜರಾಜ  |

ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ|

ಬಹಳ ನೊಂದೆನೊ ಸ್ವಾಮಿ ಕಾಯೋ ಬಾಯೆಂದ || ೨೩||

ವೇದವನು ಕದ್ದೊಯ್ದ ದಾನವನ ಛೇದಿಸಿ |

ಛೇದಿಸೀ ಅವನ ಭೇದಿಸಿದೆ ||

ಆದಿ ನಿಗಮವ ತಂದು ಕಮಲಜಂಗಿತ್ತೆ |

ವೇದಾಂತ ವೇದ್ಯ ಮತ್ಸ್ಯಾವತಾರ ಶರಣು || ೨೪ ||

ಸುರಾಸುರರು ಪಾಲ್ಗಡಲ ಮಥಿಸುತಿರಲು |

ಮುರವೈರಿ ಹಾಸಿಗೆಯ ಹುರಿ ಮಾಡಿಕೊಂಡು |

ಭರದಿ ಮಂದರಗಿರಿಯು ಇಳಿಯುತಿರೆ ಬಂದು |

ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರಣು || ೨೫ ||

ಸುರುಳಿ ಸುತ್ತಿದ ಭೂಮಿ ದಾಡೆಯಿಂದಲಿ ತಂದೆ |

ದುರುಳ ಹಿರಣ್ಯಾಕ್ಷನನು ಬೇಗದಲಿ ಕೊಂದೆ |

ಧರಣಿದೇವಿಯ ಸದಮಲದಲಿ ಗೆದ್ದೆ |

ವರಹಾವತಾರ ಶ್ರೀಹರಿ ನಿನಗೆ ಶರಣು || ೨೬ ||

ಬಾಲಕನು ಕರೆಯಲಿಕೆ ಕಂಬದಿಂದಲಿ ಬಂದೆ |

ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ ||

ಶೀಲ ಪ್ರಲ್ಹಾದನಿಗಭಯವನಿತ್ತ |

ಶ್ರೀಲಕ್ಷ್ಮಿ ಒಡನಿದ್ದ ನರಸಿಂಹ ಶರಣು || ೨೭ ||

ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ |

ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ ||

ಅಳೆದ ಪಾದದಲಿ ಭಾಗಿರಥಿಯ ತಂದೆ |

ಚೆಲುವ ವಾಮನ ತ್ರಿವಿಕ್ರಮನೆ ಶರಣು || ೨೮ ||

ದುಷ್ಟ ಕ್ಷತ್ರಿಯರ ಕುಲವ ಸಂಹರಿಸಿ |

ರಕ್ತದಲಿ ಸ್ನಾನ ತರ್ಪಣವ ನೀ ಕೊಟ್ಟೆ ||

ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿದ |

ವಿಪ್ರ ಭಾರ್ಗವ ರಾಮ ಹರಿ ನಿನಗೆ ಶರಣು || ೨೯ ||

ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ |

ದುರುಳ ರಾವಣನ ಹತ್ತು ಶಿರಗಳನು ತರಿದೆ |

ವರ ವಿಭೀಷಣನಿಗೆ ರಾಜ್ಯವನಿತ್ತ ದೇವ ||

ಶರಣು ರಕ್ಷಕ ಸೀತಾಪತಿ ರಾಮ ಶರಣು || ೩೦ ||

ಮಥುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ |

ತರಳತನದಲಿ ಹಾಲು ಬೆಣ್ಣೆಗಳ ಕದ್ದೆ |

ತುರುವ ಕಾಯುತ ಕೊಂದೆ ಹಲವು ಪಾತಕರ |

ಬಲರಾಮಕೃಷ್ಣ ಗೋಪಾಲಕನೆ ಶರಣು || ೩೧ ||

ತ್ರಿಪುರ ಸತಿಯರ ವ್ರತವ ಅಪಹರಿಸಿದವನೆ |

ಪೃಥುವಿಯಲಿ ಅಶ್ವತ್ಥ ಗಿಡದಡಿ ಮೆರೆದವನೆ ||

ಬೆಸಗಣ್ಣ ಹರಗೆ ಅಂಬಾಗಿ ನಿಂತವನೆ ||

ಪಶುಪತಿವಂದ್ಯ ಬೌದ್ಧಾವತಾರ ಶರಣು || ೩೨ ||

ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು |

ಬಿನ್ನಾಣದಿಂದ ತುರುಗವನೇರಿಕೊಂಡು ||

ಬನ್ನ ಬಡಿಸುತ  ಕೊಂದೆ ಹಲವು ಪಾತಕರ  |

ಬ್ರಹ್ಮಸ್ವರೂಪ ಕಲ್ಕ್ಯಾವತಾರ ಶರಣು || ೩೩ ||

ಅರಿಯೆನೆಂದೆನದೆ ಅಚ್ಯುತ ರಕ್ಷಿಸೆನ್ನ |

ಮರೆತೆನೆಂದೆನದೆ ಮಾಧವ ರಕ್ಷಿಸೆನ್ನ ||

ಕೇಳನೆಂದೆನದೆ ಕೇಶವ ರಕ್ಷಿಸೆನ್ನ |

ಕಾಣನೆಂದೆನದೆ ಕರುಣಿಸಿ ರಕ್ಷಿಸೆನ್ನ || ೩೪ ||

ಕಾಯೊ ಕಂಜರ ಎನ್ನ ಪ್ರಾಣ ಹೋಗುತಿದೆ  |

ಯಾವಾಗ ಹರಿಬಂದು ಕಾಯ್ವನೋ ಎನುತ |

ಕೂಗಿದನು ಚೀರಿ ಮೊರೆಯಿಟ್ಟ ಗಜರಾಜ |

ದಾನವಾಂತಕನು ಕಿವಿಗೊಟ್ಟು ಕೇಳಿದನು || ೩೫ ||

ಕ್ಷೀರಾಬ್ಧಿಯಲಿ ವೈಕುಂಠದಲಿ  ನೆಲಸಿದ್ದ|

ಶೇಷನಾ ಹಾಸಿಗೆಯ ಮೇಲೆ ಕುಳ್ಳಿರ್ದ ||

ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು |

ಆಲಯಿಸಿ ಕೇಳಿದನೆ ಅಜನ ಪೆತ್ತವನು || ೩೬ ||

ಶಂಖ ಚಕ್ರಗಳಿಲ್ಲವೆಂದು ಶಂಕಿಸದೇ |

ಬಿಂಕದಿಂ ಗರುಡನ್ನ ಹೆಗಲೇರಿ ಕೊಳ್ಳದೆ ||

ಪಂಕಜಾಕ್ಷಿಯ ಕೂಡ ತಾನು ಉಸುರದೆ ||

ಪಂಕಜನಾಭ ಬಂದನೆ ಕೊಳದ ಕಡೆಗೆ || ೩೭ ||

ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ |

ವಜ್ರಕುಂಡಲ ಪದಕ ಹಾರಗಳು ಹೊಳೆಯೆ |

ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿರೆ |

ಎದ್ದು ಬಂದನೆ ದಯಾಸಮುದ್ರ ಬಂದಂತೆ || ೩೮ ||

ಸಿಂಧುಸುತೆ ತನ್ನ ಪತಿಯೆಲ್ಲಿ ಪೋದನೋ ಎನುತ |

ಮಂದಗಮನೆಯು ಬಂದು ಪುರವೆಲ್ಲ ತೆರಳೆ ||

ಹೊಂದಿಸುತ  ಗರುಡನ್ನ ಹೆಗಲೇರಿಕೊಳ್ಳಲು|

ಅಂದಾಗ ಶಂಖಚಕ್ರವು ಕೂಡಿ ಬರಲು || ೩೯ ||

ಹರಿಯು ಗರುಡವನೇರಿ ಕರಿಯತ್ತ ಬರಲು |

ಹರ ಪಾರ್ವತಿಯರು ನಂದಿಯನೇರಿ ಕೊಳುತ ||

ಶಿರದ ಮೇಲಿನ ಗಂಗೆ ತುಳುಕಾಡುತಿರಲು |

ಹರ ಬಂದ ಕೈಲಾಸ ಗಿರಿಯಿಂದಲಾಗ || ೪೦ ||

ತೊಡೆಯ ಮೇಲಿನ ಗೌರಿದೇವಿಯಳ ಸಹಿತ |

ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು |

ಹರಪಾರ್ವತಿದೇವಿ ವೃಷಭವನ್ನೇರಿ |

ಹರ ಬಂದ ಕೈಲಾಸಪುರದಿಂದ ಇಳಿದು || ೪೧ ||

ದೇವ ಋಷಿ ಬ್ರಹ್ಮ ಋಷಿ ರಾಜ ಋಷಿ ಸಹಿತ |

ದೇವ ಪುತ್ರಾದಿ ಸನಕಾದಿಗಳು ಕೂಡಿ ||

ಸುಮ್ಮನೇ ನಾರದರಂದು ನಡೆತರಲು |

ಬ್ರಹ್ಮ ಸ್ವರೂಪರೆಲ್ಲ ನೆರೆದರಂದು || ೪೨ ||

ಬಂದು ಚಕ್ರವನು ಕರಕಮಲದಲಿ ತೆಗೆದು |

ಬಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ |

ಅಂದಿಗವನ ಶಾಪ ಉಶ್ಯಾಪವಾಗಿ |

ಗಂಧರ್ವ ರೂಪಿನಲಿ ನಿಂತಿತಾ ಮಕರಿ || ೪೩ ||

ಹರಿಯ ಸುದರ್ಶನವು ಮದಗಜಕೆ ಸೋಕುತಲೆ |

ಒದಗಿದವು ನಾಲ್ಕು ಕೈಗಳು ಶಂಖ ಚಕ್ರ  |

ಉಟ್ಟ ಪಿತಾಂಬರವು ಕಿರೀಟ ಕುಂಡಲವು |

ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು || ೪೪ ||

ಜಯಜಯ ಜಗನ್ನಾಥ ಜಯ  ವಿಶ್ವರೂಪ|

ಜಯ ಜಯ ಜನಾರ್ಧನ ಜಯ ವಿಶ್ವಮೂರ್ತಿ |

ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ |

ಜಯವೆಂದು ಪದಗಳಿಗೆ ಬಂದು ಎರಗಿದನು || ೪೫ ||

ಇಂದಿವನ ಭಾಗ್ಯವನು ನೋಡುವರು ಕೆಲರು |

ಇಂದಿರಾ ಪತಿಯ ಕೊಂಡಾಡುವರು ಕೆಲರು |

ಮಂದಾರ ಪೂಮಳೆಯ ಕರೆಯುತ್ತ ಸುರರು|

ದುಂದುಭಿ ವಾದ್ಯಗಳ ವೈಭವಗಳಿರಲು || ೪೬ ||

ಸಿರಿಸಹಿತ ಹರಿಯು ಗರುಡವನೇರಿಕೊಂಡು

ಕರಿರಾಜನೊಡನೆ ವೈಕುಂಠಕ್ಕೆ ಬರಲು ||

ಹರಪಾರ್ವತಿಯರು ಕೈಲಾಸಕೆ ತೆರಳೆ |

ತರತರದ ವಾಹನದಿ ಸುರರು ತೆರಳಿದರು || ೪೭ ||

ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳ್ದವರಿಗೆ |

ದುಃಸ್ವಪ್ನ ದುರ್ಬುದ್ಧಿ ದುರ್ವ್ಯಸನ ಕಳೆಯುವುದು ||

ಸರ್ಪಾರಿ ವಾಹನನ ಧ್ಯಾನದೊಳಿರಲು |

ಸತ್ಸಂಗ ಸಾಯುಜ್ಯ ಪದವಿ ದೊರಕುವುದು || ೪೮ ||

ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ

ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ |

ಹರಿಯ ನೆನೆದವರಿಗೆ ಪರಮ ಪದವಿ ಉಂಟು |

ಕರಿರಾಜವರದನ್ನ ಶರಣೆಂದು ಭಜಿಸು || ೪೯ ||

ಜಯತು ಧ್ರುವರಾಯನಿಗೆ ವರವಿತ್ತ ದೇವ |

ಜಯತು ಪ್ರಲ್ಹಾದಗೆ ಅಭಯವಿತ್ತ ದೇವ |

ಜಯತು ದ್ರೌಪದಿಯ ಅಭಿಮಾನ ಕಾಯ್ದ ದೇವಾ|

ಜಯತು ಜಯ ಹಯವದನ ಶ್ರೀವಾಸುದೇವ || ೫೦ ||

***



No comments:

Post a Comment