ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥
ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ
ಈ ಮಹಿಯೊಳು ನಿನಗಾರೈ ಸಾಟಿ ॥ 1 ॥
ದೂರದಿಂದಸುರನ ಪುರವನ್ನು ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ॥ 2 ॥
ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ ॥ 3 ॥
ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥
ಶೃಂಗಾರ ವನದೊಳಗಿದ್ದ ರಾಕ್ಷಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಕುವರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥
ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ ॥ 6 ॥
ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥
ಕಂಡ ರಾವಣನು ಉದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆ ನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥
ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ
ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥
ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥
ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥
ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು ॥ 12 ॥
ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ ॥ 13 ॥
ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣಿಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥
ಮಂಗಳಂ ಶ್ರೀರಾಮಚಂದ್ರಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥
ಹತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥
ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚದುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥
ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು ॥ 19 ॥
ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥
ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದೆ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥
***
pallavi
eSTu sAhasavanta nIne balavanta
diTTa mUruti bhaLire bhaLire hanumanta /pa/
aTTuva KaLarede meTTi tuLidu talegaLa
kuTTi ceMDADida diTTa nInahudo /anupa/
rAmarappaNeyiMda sharadhiya dATi
A mahA laMkeya kaMDe kirITa
svAmikAryavanu prEmadi naDeside
I mahiyoLu ninagArai sATi /1/
dUradiMdasurana puravane nODi
bharadi shrIrAmara smaraNeya mADi
hAride haruShadi saMharisi laMkiNiyanu
vArijamuKiyanu kaMDu mAtADi /2/
rAmara kShEmava ramaNige pELi
tAmasa mADade mudrike nIDi
prEmadiM jAnaki kuruhanu koDalAga
A mahA vanadoLu phalavanu bEDi /3/
kaNNige priyavAda haNNanu koydu
haNNina nevadali asurara hoydu
paNNapaNNane hAri negenegedADuta
baNNisi asurara balavanu muridu /4/
shRuMgAra vanadoLage idda rakkasara
aMgavanaLiside atiraNashUra
nuMgi astragaLa akShaya kuvarana
bhaMgisi bisuTiyo baMda rakkasara /5/
dUra pELidarella rAvaNanoDane
cIrutta karesida iMdrajituvane
cOrakapiyanu nI hiDitahudennuta
shUrara kaLuhida nijasutanoDane /6/
piDidanu iMdrajitu kaDukOpadiMda
heDemuri kaTTida brahmAstradiMda
guDuguDuguTTuta kiDikiDiyAguta
naDedanu laMkeya oDeyaniddeDege /7/
kaMDanu rAvaNanuddaMDa kapiyanu
maMDeya tUgutta mAtADisidanu
bhaMDu mADade biDenODu kapiyene
gaMDugaliyu duridurisi nODidanu /8/
CalavyAko ninagiShTu elavo kODagane
neleyAvudu hELo ninnoDeyanesarannu
balavaMta rAmara baMTa baMdiheno
halavu mAtyAko hanumanu nAne /9/
baDa rAvaNane ninna baDidu hAkuveno
oDeyanappaNeyilla eMdu tALideno
huDiyELisuvenu Kulla rakkasane
toDeveno ninna paNeya akSharava /10/
ninnaMtha dUtaru rAmana baLiyoLu
inneShTu maMdi uMTu hELo nI tvaradi
nannaMtha dUtaru ninnaMtha prEtaru
innUru munnUru kOTi kELayya /11/
kaDu kOpadiMdali KULarAvaNanu
suDireMda bAlava sutti vasanava
oDeyana mAtige taDebaDeyillade
oDane muttidaru gaDimaneyavaru /12/
taMdaru vasanava taMDataMDadali
oMdoMdu mUTe eMbattu kOTiyali
caMdadi haraLina tailadoLaddi
niMda hanumanu bAlava beLesuta /13/
shAlu sakalAtiyu sAladeyiralu
bAlera vastrava seLedutArenalu
bAlava nillise beMkiyaniDutali
kAlamRutyuva keNakidaralli /14/
kuNikuNidADuta kUgi bobbiDuta
iNukinODuta asurara aNakisuta
JaNaJaNaJaNarene bAladagaMTeyu
manadi shrIrAmara pAdava neneyuta /15/
maMgaLaM shrIrAmacaMdra mUrutige
maMgaLaM sItAdEvi caraNaMgaLige
maMgaLavenuta laMkeya suTTu
laMGisi asurana gaDDake hiDida /16/
hottitu asurana gaDDa mIsegaLu
suttitu hoge brahmAMDa kOTiyoLu
cittadi rAmaru kopisuvaru eMdu
cittadi naDedanu arasaniddeDege /17/
sIteya kShEmava rAmarigELi
prItiyiM koTTakuruha karadalli
sEtuve kaTTi caturaMga balasaha
muttitu laMkeya sUregaiyutali /18/
veggaLavAyitu rAmara daMDu
muttitu laMkeya kOTeya kaMDu
heggada kAyvara nuggu mADutire
Jaggane pELdaru rAvaNagaMdu /19/
rAvaNa modalAda rAkShasara koMdu
bhAvashuddhadali vibhIShaNa bALeMdu
dEvi sIteyanoDagoMDu ayOdhyadi
dEva shrIrAmaru rAjyavALidaru /20/
shaMKadaityana koMde sharaNu sharaNayya
shaMKagiriyali niMda hanumaMtarAya
paMkajAkSha hayavadanana kaTAkShadi
biMkadi paDedeyo ajanapadaviya /21/
ಎಷ್ಟು ಸಾಹಸವಂತ ನೀನೇ ಬಲವಂತ |
ಇಷ್ಟದಾಯಕ ಭಳಿ ಭಳಿರೇ ಹನುಮಂತ ||
ಅಟ್ಟುತ ಖಳರನು ಮೆಟ್ಟಿ ಸೀಳುತಲಿ |
ಕುಟ್ಟಿ ಚಂಡಾಡಿದ ಧಿಟ್ಟ ನೀನಹುದೋ ||ಪ||
ರಾಮರಪ್ಪಣೆಯಿಂದ ಶರಧಿಯ ದಾಟಿ |
ಆ ಮಹಾ ಅಸುರೆಯ ಸೀಳಿ ಬಿಸಾಟಿ |
ಸ್ವಾಮಿ ಕಾರ್ಯವನುಕೋಲದಿ ಯೋಚಿಸಿ |
ಪ್ರೇಮದಿ ನಡೆದನು ಅರೆಲೆ ಸಾಟಿ || ೧ ||
ದೂರದಿಂದಸುರನ ಪುರವನ್ನೆ ನೋಡಿ |
ಮನದಿ ಶ್ರೀ ರಾಮರ ಸ್ಮರಣೆಯಾ ಮಾಡಿ |
ಹಾರುತ ಹರುಷದಿ ವರಸಿಲಂಕಿಣಿಯನು |
ವಾರಿಜ ಮುಖಿಯಳ ಕಂಡು ಮಾತಾಡಿ || ೨ ||
ರಾಮರ ಕ್ಷೇಮವ ರಮಣಿಗೆ ಪೇಳಿ |
ತಾಮಸ ಮಾಡದೆ ಮುದ್ರಿಕೆಯ ನೀಡಿ |
ಭೂಮಿಜೆ ಜಾನಕಿ ಕುರುಡು ನೀಡಲಾಗ |
ಆ ಮಹಾವನದೊಳು ಫಲಗಳ ಬೇಡಿ|| ೩ ||
ಕಣ್ಣಿಗೆ ಬೇಕಾದ ಹಣ್ಣು ಸವಿದು |
ಹಣ್ಣಿನ ನೆವದಲಿ ಅಸುರರ ಬಡಿದು |
ಟಣ್ಣನೆ ಟಣ್ಣನೆ ಹಾರಿ ನೆಗೆದಾಡುತ |
ಬಣ್ಣಿಸಿ ಅಸುರರ ಬಲವನ್ನು ಮುರಿದು || ೪ ||
ಶ್ರುಂಗಾರ ವನದಲ್ಲಿದ್ದ ರಾಕ್ಷಸರ |
ಅಂಗವನಳಿಸಿದ್ಯೋ ಅತಿಶಯ ಶೂರಾ |
ನುಂಗಿ ಅಸ್ತ್ರವನು ಅಕ್ಷಯ ಕುವರನ |
ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ|| ೫ ||
ದೂರ ಪೆಳುವರೆಲ್ಲ ರಾವಣನೊಡನೆ |
ಚೀರುತ ಕರೆಸಿದ ಇನ್ದ್ರಜಿತುವನ್ನೆ |
ಚೋರ ಕಪಿಯನು ಹಿಡಿದುತಾ ಎನ್ನುತ |
ಶೂರರ ಕಳಿಸಿದ ನಿಜಸುತರೊಡನೆ || ೬ ||
ಪಿಡಿದನು ಇಂದ್ರಜಿತು ಕಡುಕೊಪದಿಂದ |
ಹೆಡೆಮುರಿಗೆ ಕಟ್ಟಿದ ಬ್ರಹ್ಮಾಸ್ತ್ರದಿಂದ |
ಗುಡುಗುಡು ಗುಟ್ಟುತ ಕಿಡಿಕಿಡಿಯಾಗುತ |
ನಡೆದನು ಲಂಕೆಯ ಒಡೆಯನಿದ್ದಲ್ಲಿಗೆ || ೭ ||
ಕಂಡ ರಾವಣನು ಉದ್ದಂಡ ಕಪಿಯನ್ನೆ |
ಮಂಡೆಯ ತೂಗುತ ಮಾತನಾಡಿಸಿದ |
ಭಂಡು ಮಾಡದೆ ಬಿಡೆ ನೋಡು ಕಪಿಯನೆ |
ಕಂಡು ದುರದುರನೆ ನಡೆದನಾಗ || ೮ ||
ಛಲವ್ಯಾಕೋ ನಿನಗಿಷ್ಟು ಎಲವೋಕೊಡಗನೆ |
ನೆಲೆಯಾವದ್ಹೇಳೋ ನಿನ್ನೂಡೆಯನ ಹೆಸರನ್ನೆ |
ಬಲವಂತ ರಾಮರ ಬಂಟ ಬಂದಿಹೆನೋ |
ಹಲವು ಮಾತ್ಯಾಕೋ ಹನುಮನೆ ನಾನು || ೯ ||
ಬಡ ರಾವಣನೆ ನಿನ್ನ ಬಡಿದು ಹಾಕುವೆನು |
ಎನ್ನೋಡೆಯನಪ್ಪನಣೆಯಿಲ್ಲೆಂದು ತಾಳಿದೆನು |
ಪುಡಿಮಾಡುವೆ ಫುಲ್ಲ ರಕ್ಕಸನೆ |
ತೊಡೆವೆನು ನಿನ್ನಪಣೆಯ ಅಕ್ಷರವ || ೧೦ ||
ನಿನ್ನಂತ ದೂತರು ರಾಮರ ಬಳಿಗೆ |
ಇನ್ನೆಷ್ಟು ಮುಂದಿಗಳುಂಟು ಹೇಳೋ ನೀತ್ವರಿಯಾ |
ನನ್ನಂತ ದೂತರು ನಿನ್ನಂತ ಪ್ರೇತರು |
ಇನ್ನೂರು ಕೋಟಿ ಕೇಳರಿಯಾ || ೧೧ ||
ಕಡುಕೋಪದಿಂದಲಿ ಖೂಳ ರಾವಣನು |
ಸುಡಿಸುಡಿ ಬಾಲವ ಸುತ್ತಿವಸನವನು |
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ |
ಒಡನೆ ಮುತ್ತಿದ್ದರು ಗಡಿಮನೆಯವರು || ೧೨ ||
ತಂದಿರುವಸನವ ತoಡ ತಂಡದಲಿ |
ಒಂದೊಂದು ಮೂಟೆ ಎಂಭತ್ತು ಕೋಟಿಯಲಿ |
ಛಂದದಿ ಹರಳಿನ ತೈಲದೊಳದ್ದಿಸಿ |
ನಿಂದ ಹನುಮನು ಬಾಲವ ಬೆಳೆಸುತ || ೧೩ ||
ಶಾಲುಶಕಲಾತಿಯು ಸಾಲದೆಯಿರಲು |
ಬಾಲೆರ ವಸ್ತ್ರವ ಸೆಳೆದು ತಾರೆನಲು |
ಬಾಲವ ನಿಲ್ಲಿಸಿ ಬೆಂಕೆಯನಿಡುತಲಿ |
ಕಾಲ ಮೃತ್ಯುವ ಕಿಣಕಿದರಲ್ಲಿ || ೧೪ ||
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ |
ಇಣುಕಿ ನೋಡುತ ಅಸುರರನಣಕಿಸುತ |
ಝಣಝಣ ಝಣರೆನೆ ಬಾಲ ಗಂಟೆಯು |
ಮನದಿ ಶ್ರೀರಾಮರ ಪಾದವ ನೆನೆಯುತ || ೧೫ ||
ಮಂಗಳ ಶ್ರೀರಮಚಂದ್ರ ಮೂರುತಿಗೆ |
ಮಂಗಳಂ ಸೀತಾದೇವಿ ಚರಣoಗಳಿಗೆ |
ಮಂಗಳವೆನುತ ಲಂಕೆಯ ಸುಟ್ಟು |
ಲಂಘಿಸಿ ಅಸುರನ ಗಡ್ದಕೆ ಹಿಡಿದ || ೧೬ ||
ಹತ್ತಿತು ಅಸುರನ ಗಡ್ಡಮೀಸೆಗಳು |
ಸುತ್ತಿತು ಹೊಗೆ ಬ್ರಹ್ಮಾಂಡ ಕೊಟಿಯೋಳು |
ಚಿತ್ತದಿರಾಮರು ಕೋಪಿಸುವರು |
ಎಂದು ಚಿತ್ತದಿ ನಡೆದನು ಅಸುರನಿದ್ದೆಡೆಗೆ|| ೧೭ ||
ಸೀತೆಯ ಕ್ಷೇಮವ ಶ್ರೀರಾಮರಿಗೆ ಹೇಳಿ |
ಪ್ರೀತಿಯಿಂಕೊಟ್ಟ ಕುರುಹ ಕರದಲ್ಲಿ |
ಸೇತುವೆ ಕಟ್ಟಿ ಚದುರಂಗ ಬಲಸಹ |
ಮುತ್ತಿತು ಲಂಕೆಯ ಕೋಟೆಯ ಕಂಡು || ೧೮ ||
ವೆಗ್ಗಳವಾಯಿತು ರಾಮರ ದಂಡು |
ಮುತ್ತಿತು ಲಂಕೆಯ ಕೋಟೆಯ ಕಂಡು |
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ |
ಝಗ್ಗನೆ ಪೇಳ್ವರು ರಾವಣಗಂದು || ೧೯ ||
ರಾವಣ ಮೊದಲಾದ ರಾಕ್ಷಸರ ಕೊಂದು |
ಭಾವಶುದ್ಧದಲಿ ವಿಭೀಷಣಬಾಳೆಂದು |
ದೇವಿ ಸೀತೆಯ ನೋದಗೊಂಡಯೋಧ್ಯದಿ |
ದೇವ ಶ್ರೀರಾಮರು ರಾಜ್ಯವಾಳಿದರು || ೨೦ ||
ಶಂಖದೈತ್ಯನ ಕೊಂದೆ ಶರಣು ಶರಣಯ್ಯ |
ಶಂಖಾಗಿರಿಯಲಿ ನಿಂದ ಹನುಮಂತರಾಯ |
ಪಂಕಜಾಕ್ಷ ಹಯವದನ ಕಟಾಕ್ಷದಿ |
ಬಿಂಕದಿ ಪಡೆದೆಯೋ ಅಜಪದವಿಯನು || ೨೧ ||
***
ಸುಂದರಕಾಂಡ ಸಂಗ್ರಹ
ರಾಗ ನವರೋಜ್ ಆದಿತಾಳ
ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥
ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ
ಈ ಮಹಿಯೊಳು ನಿನಗಾರೈ ಸಾಟಿ ॥ 1 ॥
ದೂರದಿಂದಸುರನ ಪುರವನ್ನು ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ॥ 2 ॥
ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ ॥ 3 ॥
ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥
ಶೃಂಗಾರ ವನದೊಳಗಿದ್ದ ರಾಕ್ಷಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಕುವರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥
ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ ॥ 6 ॥
ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥
ಕಂಡ ರಾವಣನು ಉದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆ ನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥
ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ
ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥
ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥
ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥
ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು ॥ 12 ॥
ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ ॥ 13 ॥
ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣಿಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥
ಮಂಗಳಂ ಶ್ರೀರಾಮಚಂದ್ರಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥
ಹತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥
ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚದುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥
ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು ॥ 19 ॥
ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥
ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದೆ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥
*******************
No comments:
Post a Comment