Thursday, 26 December 2019

ವಿಜಯದಾಸರ ಭಜನೆ ಮಾಡಿರೊ ankita mohana vittala VIJAYADASARA BHAJANE MAADIRO VIJAYADASA STUTIH

 
 ರಾಗ ಶಿವರಂಜಿನಿ   ಆದಿತಾಳ 

Audio by Mrs. Nandini Sripad

ಶ್ರೀ ಮೋಹನದಾಸರ ಕೃತಿ 


ವಿಜಯದಾಸರ ಭಜನೆ ಮಾಡಿರೊ ॥ ಪ ॥
ವಿಜಯದಾಸರ ಭಜನೆ ಮಾಡಲು ।
ಅಜನ ಜನಕ ನಿಜನಿಗೊಲಿದು ।
ಕುಜನ ಸಂಗತಿ ತ್ಯಜನ ಮಾಡಿಸಿ ।
ಸುಜನರ ಪಾದಾಂಬುಜದಲ್ಲಿಡುವ ॥ ಅ ಪ ॥

ಶುದ್ಧ ಮಂದರನ್ನ ಉದ್ಧಾರಾರ್ಥವಾಗಿ ।
ಮಧ್ವರಾಯರ ಮತಾಬ್ಧಿಯೊಳು ಪುಟ್ಟಿ ।
ಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳ ।
ಹೆದ್ದೈವವೇ ಅನಿರುದ್ಧನೆಂದು ॥
ಪದ್ಧತಿಂದ ಪೇಳಿಸಿದಿ ವೈಷ್ಣವರನ್ನ ।
ಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿ ।
ಹದ್ದನ್ನೇರಿ ಬಪ್ಪ ಪದ್ದುಮನಾಭನ್ನ ।
ಹೃದ್ದಯದೊಳಿಟ್ಟ ಸದ್ಗುರುರಾಯ ॥ 1 ॥

ಭೂಸುರಾಬ್ಧಿಗೆ ತಾರೇಶನಂತೊಪ್ಪುವ ।
ಸಾಸಿರನಾಮದ ಶೇಷಗಿರಿ ಶ್ರೀನಿ - ।
ವಾಸನ ಯಾತ್ರೆಯ ಲೇಸಾಗಿ ಮಾಡ್ಯಲೆ ಸ - ।
ಹಾಸ ಸಂತೋಷದಿಂದಿರೆ ॥
ವಾಸುದೇವನ ಮಾನಸದೊಳಿಟ್ಟು ದು - ।
ರಾಶೆಯ ತೊರೆದು ಕ್ಲೇಶವ ಪಡದಲೆ ।
ಮೀಸಲ ಪುಣ್ಯದ ದಾಶಿ ಘಳಿಸಿ ।
ಕೇಶವನ ನಿಜದಾಸರೆಂದೆನಿಪ ॥ 2 ॥

ಪುರಂದರದಾಸರ ವರಕುಮಾರ ।
ಅರವಿಂದ ಪಾದ ಶಿರದಿ ಧರಿಸಿ ।
ಹರಿ ನಾಮೋಚ್ಚಾರಣೆ ಮಾಡುತ್ತ ।
ಹರುಷದಿಂದ ಪದ ರೂಪದಿ ॥
ಧರೆಯೊಳಗೆಲ್ಲ ದುರ್ಜನರ ।
ಅರಿಯಂದೆನಿಸಿ ಮೆರೆವುತ್ತ ನಿತ್ಯ ।
 ಸಿರಿ ಮೋಹನ್ನವಿಠಲನೆ ಪರನೆಂದ - ।
ರುಹು ಮಾಡಿದ ಸುರತರುವಾದ ॥ 3 ॥
***

vijayadAsara Bajane mADiro |
vijayadAsara Bajane mADalu^^ajana janaka nijanigolidukujana sangati
tyajana mADisisujanara pAdAMbujadalliDuva ||pa||

Suddha mandaranna uddhArArthavAgimadhvarAyara matAbdhiyoLu puTTisiddhAMta sthApisi geddu vAdigaLaheddaivavE aniruddhanu yendu ||
paddhatinda pELisidi vaiShNavarannaSuddhAtmara mALpa udyOgadindalihaddannEri bappa paddumanABannahRuddayadoLagiTTa sadgururAya ||1||

BUsurAbdhige tArESanantoppuvasAsira nAmada SEShagiri SrI ni-vAsana yAtreya lEsAgi mADyeti sa- |hAsa saMtOShadindale ||
vAsudEvana mAnasadoLiTTu du-rASeya toredu klESava paDadalemIsala puNyada rASi GaLisikESavana nija dAsanendenipa||2||

purandara dAsara vara kumA-raravinda pAda Siradi dharisihari nAmOccaraNe mADuttaharuShadinda pada rUpadi ||
dhareyoLagella durjanarariyandenasimerevutta nitya siri mOhanna viThalaneparanendaruhu mADida sura taruvAda ||3||
***
***

ರಾಗ ಶಿವರಂಜಿನಿ            ಆದಿತಾಳ 

ವಿಜಯದಾಸರ ಭಜನೆ ಮಾಡಿರೊ ॥ ಪ ॥
ವಿಜಯದಾಸರ ಭಜನೆ ಮಾಡಲು ।
ಅಜನ ಜನಕ ನಿಜನಿಗೊಲಿದು ।
ಕುಜನ ಸಂಗತಿ ತ್ಯಜನ ಮಾಡಿಸಿ ।
ಸುಜನರ ಪಾದಾಂಬುಜದಲ್ಲಿಡುವ ॥ ಅ ಪ ॥

ಶುದ್ಧ ಮಂದರನ್ನ ಉದ್ಧಾರಾರ್ಥವಾಗಿ ।
ಮಧ್ವರಾಯರ ಮತಾಬ್ಧಿಯೊಳು ಪುಟ್ಟಿ ।
ಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳ ।
ಹೆದ್ದೈವವೇ ಅನಿರುದ್ಧನೆಂದು ॥
ಪದ್ಧತಿಂದ ಪೇಳಿಸಿದಿ ವೈಷ್ಣವರನ್ನ ।
ಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿ ।
ಹದ್ದನ್ನೇರಿ ಬಪ್ಪ ಪದ್ದುಮನಾಭನ್ನ ।
ಹೃದ್ದಯದೊಳಿಟ್ಟ ಸದ್ಗುರುರಾಯ ॥ 1 ॥

ಭೂಸುರಾಬ್ಧಿಗೆ ತಾರೇಶನಂತೊಪ್ಪುವ ।
ಸಾಸಿರನಾಮದ ಶೇಷಗಿರಿ ಶ್ರೀನಿ - ।
ವಾಸನ ಯಾತ್ರೆಯ ಲೇಸಾಗಿ ಮಾಡ್ಯಲೆ ಸ - ।
ಹಾಸ ಸಂತೋಷದಿಂದಿರೆ ॥
ವಾಸುದೇವನ ಮಾನಸದೊಳಿಟ್ಟು ದು - ।
ರಾಶೆಯ ತೊರೆದು ಕ್ಲೇಶವ ಪಡದಲೆ ।
ಮೀಸಲ ಪುಣ್ಯದ ದಾಶಿ ಘಳಿಸಿ ।
ಕೇಶವನ ನಿಜದಾಸರೆಂದೆನಿಪ ॥ 2 ॥

ಪುರಂದರದಾಸರ ವರಕುಮಾರ ।
ಅರವಿಂದ ಪಾದ ಶಿರದಿ ಧರಿಸಿ ।
ಹರಿ ನಾಮೋಚ್ಚಾರಣೆ ಮಾಡುತ್ತ ।
ಹರುಷದಿಂದ ಪದ ರೂಪದಿ ॥
ಧರೆಯೊಳಗೆಲ್ಲ ದುರ್ಜನರ ।
ಅರಿಯಂದೆನಿಸಿ ಮೆರೆವುತ್ತ ನಿತ್ಯ ।
 ಸಿರಿ ಮೋಹನ್ನವಿಠಲನೆ ಪರನೆಂದ - ।
ರುಹು ಮಾಡಿದ ಸುರತರುವಾದ ॥ 3 ॥
***



ವಿಜಯದಾಸರ ಭಜನೆ ಮಾಡಿರೊ |
ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ
ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ||pa||

ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||
ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ ||1||

ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||
ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ||2||

ಪುರಂದರ ದಾಸರ ವರ ಕುಮಾ-ರರವಿಂದ ಪಾದ ಶಿರದಿ ಧರಿಸಿಹರಿ ನಾಮೋಚ್ಚರಣೆ ಮಾಡುತ್ತಹರುಷದಿಂದ ಪದ ರೂಪದಿ ||
ಧರೆಯೊಳಗೆಲ್ಲ ದುರ್ಜನರರಿಯಂದೆನಸಿಮೆರೆವುತ್ತ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ ||3||
*******

No comments:

Post a Comment