Thursday, 26 December 2019

ಪುಣ್ಯ ಕ್ಷೇತ್ರವ ಸ್ಮರಿಸಿ ankita vijaya vittala ತೀರ್ಥಕ್ಷೇತ್ರ ಸ್ತೋತ್ರ PUNYA KSHETRAVA SMARISI TEERTHA KSHETRA STUTIH

 Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ 

 ತೀರ್ಥಕ್ಷೇತ್ರಗಳ ಸ್ತೋತ್ರ ಮಹಿಮಾ ಪದ 
( ವಾರ್ಧಕ ಷಟ್ಪದಿ )

🙏ದಾಸರು ಪ್ರಸ್ತುತ ಪದದಲ್ಲಿ  ತಾವು ಸಂದರ್ಶಿಸಿದಂತಹ  ಒಟ್ಟು 130 ತೀರ್ಥಕ್ಷೇತ್ರಗಳ ಸ್ಮರಣೆಯನ್ನು ತಿಳಿಸಿದ್ದಾರೆ.🙏

 ರಾಗ : ಭೌಳಿ        ತಿಶ್ರನಡೆ 

ಪುಣ್ಯ ಕ್ಷೇತ್ರವ ಸ್ಮರಿಸಿರೋ ॥ಪ॥
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ನಿಮ್ಮ
ಮನ್ಯು ಮಿಕ್ಕಾದ ಮಹದನ್ಯಾಯ ಮರೆದು
ಅನುಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು
ಕಾರುಣ್ಯದಲಿ ಹರಿ ಒಲಿವಾ ॥ಅ.ಪ.॥

ಶೇಷಪರ್ವತ ಗರುಡಾದ್ರಿ ಶ್ರೀಶೈಲ ಪ್ರಭಾಸ
ಕ್ಷೇತ್ರ ಮಧುರಿ ಗೋಕುಲ ವೃಂದಾವನ
ನಾಸಿಕ ತ್ರಿಯಂಬಕ ಮೌದ್ಗಲಕ್ಷೇತ್ರ ಪರಾಶರ ಮಗನಾಶ್ರಮ
ತೋಷದಲಿ ತೋತಾದ್ರಿ ಕುಂಭಘೋಣ
ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ
ದೋಷವರ್ಜಿತ ಝಲ್ಲಿಕಾರಣ್ಯ ಸೇತು
ದರ್ಭಶಯನ ಮಧ್ಯಾರ್ಜುನ ॥೧॥

ಸುಂದರ ಶಿಲಾಜಯ ಜಂಬುಕೇಶ್ವರ ಮಹಾನಂದಿನಿ
ಚಿದಂಬರ ವೀರ ರಾಘವ ದೇವ
ಸಂದಿನಿಪ್ಪ ಸ್ವಾಮಿ ಕಾರ್ತಿಕ ಭೂಶೇಷ ನಂದ ಯೇಕಾಂಬರೀಶ
ಅಂದವಾದ ಛಾಯ ಅಳಕಾಪುರಿ ಕ್ಷೇತ್ರ
ಮಂದಾಕಿನಿ ಇಪ್ಪ ಸಗರ ಯಯಾತಿಗಿರಿ
ಮಂದಮತಿ ಕಳೆವಂತ  ಕ್ಷೇತ್ರ ಧರ್ಮಪುರಿ
ಒಂದೊಂದು ಕೋಟೀಶ್ವರಾ ॥೨॥

ಶ್ರೀರಂಗ ಹಸ್ತಗಿರಿ ಪಾಂಡುರಂಗ ಕ್ಷೇತ್ರ
ದ್ವಾರಕಾ ಸಹ್ಯಾದ್ರಿ ನೀಲಕಂಠನಗರಿ
ಚಾರು ಗಯ ಚಂಪಕಾರಣ್ಯ ಪಂಪಾಕ್ಷೇತ್ರ
ವೀರನಾರಾಯಣಾ ಓಂ
ಕಾರುಣ್ಯ ಮಾಳ್ಪ ರಾಮನ ನಗರ ಮಾಯ
ಕೇದಾರ ಕುರುಕ್ಷೇತ್ರಉತ್ತರ ಕುರಂಗನಿಧಿ
 ಸಾರಿದ ಬರುವ ಪುರುಷೋತ್ರಮ
ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾನಾ ॥೩॥

ಎದುಗಿರಿ ರಾಮನಾಥಪುರ ಕಾವೇರಿ
ಉದುಭವ  ಆದಿ ಅನಂತ ವಲ್ಕಲಕ್ಷೇತ್ರ
ಪದುಮನಾಭ ಪುಂಡರೀಕಾಕ್ಷ ವಿಂಧ್ಯಾದ್ರಿ
ಸುಧಿಯೆಂದ್ರ ಕನ್ಯಾಕುಮಾರಿ
ಮಧುರಿ ಅಳಗಿರಿ ತಿಮ್ಮ ಬೇಲೂರ ಚೆನ್ನಿಗ
ಮುದದಿಂ ಮಹಂಕಾಳಿ ಹಸ್ತಿ ಪರಳಿನಾಥ
ಕದುಳಿ ಮಂಗಳ ಗಿರಿ ತೋರವಿ ನರಸಿಂಹ
ಪದ ಮುರಳಿ ತ್ರಿವಿಕ್ರಮ ॥೪॥

ಹರಿಹರ ಗಂಗಾಸಾಗರ ಕಪಿಲಕ್ಷೇತ್ರ ನಿರುಪಮಾದಿ
ಕೂರ್ಮ ನೆಲ್ಲಿನವತಿರುಪತಿ
ಶೂರ್ಪಾಲಿ ಮಾಹಬಲೇಶ್ವರ ಭದ್ರಾಚಲ
ಧರಣೀಧರ ಚಾಪಪಾಣಿ
ಪರಿಶುದ್ಧ ಭಕ್ತವತ್ಸಲ ಗೌರಿವಯ್ಯಾರ 
ವರಸಾರಕ್ಷೇತ್ರ ಶ್ರೀನಿವಾಸನ ನಿಧಿಯು
ಪರಮ ಮಂಗಳವೀವ ಮನ್ನಾರಸ್ವಾಮಿ ಘನಶಾಮ 
ವರಗೌರೀ ಮನೋಹರ ॥೫॥

ಶಂಕರನಾರೇಯಣ ಉಮತೋರು ಗೋಕರಣ
ಸಂಕರುಷಣ ಕ್ಷೇತ್ರ ಗೋರಂಟ್ಲ ಶೇತುವನ
ಶಂಖಮುಖಿ ಗಜೇಂದ್ರಮೋಕ್ಷ
ಗಜಾರಣ್ಯ ಓಂಕಾರನಾಥ ದೇವಾ
ಪಂಕಜಾಸನ ಸದನ ಸಿಂಹಾಳಿ ವೈದ್ಯನಾಥ 
ಟಿಂಕಾಶಿ ಅಂತರಾ ವೇದಿ ಗೋಪಾಲನಿಧಿ
ಬಿಂಕದಲಿ ಯಿಪ್ಪ ಚಿಂತಾಮಣಿ ನರಸಿಂಹ
ಲಂಕಾರ ಮುಕ್ತಿ ಕ್ಷೇತ್ರ ॥೬॥

ಸಂತಾನಗೋಪಾಲ ತಿಶಿಖ್ರಿನಾರಾಯಣ ಅ-
ನಂತಗಿರಿ ಮಳೂರು ಅಪ್ರಮೇಯ ಶಿವಾ
ಅಂತಕನ ಗೆದ್ದ ಪುರ ತೀರ್ಥಗಿರಿ ನಿವರ್ತಿ ಅಂತು ಆದಿ ಶ್ರೀರಂಗ
ಇಂತು ಪಾವನಕ್ಷೇತ್ರ ಪ್ರೇತಗಿರಿ ನೀಲಾದ್ರಿ 
ಸಂತವೇದಾರಣ್ಯ ರಾಜವನ ನೈಮಿಷಾ
ಕಾಂತರ ದಕ್ಷವನ ಶುದ್ಧವಾಟ್ ಪುಷ್ಪಗಿರಿ 
ಕಂತುಹರ ನಂಜು ಭೋಕ್ತ ॥೭॥

ಕೋಲ ಪರ್ವತ ಕಣ್ವಮುನಿಕ್ಷೇತ್ರ ಪಿನಾಕಿನಿ
ಮಾಲೆಯಂದದಲಿಪ್ಪ ನಿಧಿ ಮಾಧವಸ್ವಾಮಿ
ಮೇಲು ಘಟಿಕಾಚಲ ಬದರಿ ನರಸಿಂಹ ರವಿ ಶೈಲ ಗುಣ ಮುಕುತೀಶ್ವರ
ಕಾಲದೂತರ ಗೆದ್ದ ಕ್ಷೇತ್ರ ಭವಾನಿಗುಡಿ 
ವ್ಯಾಳನಿಧಿಮಹಾಲಕುಮಿ ರಘುನಾಥ ಶಿವಗಂಗೆ
ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ ॥೮॥

ದೇಶದೊಳಗುಳ್ಳ ಪುಣ್ಯ ಕ್ಷೇತ್ರಗಳ ಮಹಿಮೆ
ಏಸುಪೇಳಲಿ ಎನಗೆ ವಶವಲ್ಲವೈಯ್ಯ ಪ್ರ-
ದೋಷಕಾಲದಲಿ ಪ್ರಭಾತ ಕಾಲದಲೆದ್ದು ನೆನಿಸುವದು ಮಾನ್ನವರು
ಮೀಸಲಾಮನದಲ್ಲಿ ಅನಂತ ಜನುಮದ 
ದೋಷ ವಿನಾಶ ಶ್ರೀ ವಿಜಯವಿಠಲ ವೊಲಿದು
 ಲೇಸಾಗಿ ಪಾಲಿಸುವ ಕುಲಕೋಟಿ ಉದ್ಧರಸಿ ಮೀಸಲಾ ಪದವೀವನು ॥೯॥
***

just scroll down for other devaranama 


ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ||pa||

ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು
ಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು
ಕಾರುಣ್ಯನಿಧಿ ಹರಿ ಒಲಿವಾ ||a.pa||

ಶೇಷಪರ್ವತ ಗರುಡಾದ್ರಿ ಶ್ರೀ ಶೈಲ ಪ್ರಭಾಸ
ಕ್ಷೇತ್ರ ಮಧುರೆ ಗೋಕುಲ ವೃಂದಾವನ
ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ
ತೋಷದಲಿ ತೋತಾದ್ರಿ ಕುಂಭಘೋಣ
ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ
ದೋಷವರ್ಜಿತ ಝಲ್ಲಿಕಾರಣ್ಯ ಸೇತು
ದರ್ಭಶಯನ ಮಧ್ಯಾರ್ಜುನ ||1||

ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ
ಚಿದಂಬರ ವೀರ ರಾಘವ ದೇವ
ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ
ಅಂದವಾದ ಛಾಯ ಅಳಕಾಪುರಿ ಕ್ಷೇತ್ರ
ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ
ಮಂದಮತಿ ಕಳೆವ ಘನಗಿರಿ ಕ್ಷೇತ್ರ ಧರ್ಮಪುರಿ
ಒಂದೊಂದು ಕೋಟೀಶ್ವರಾ ||2||

ಶ್ರೀರಂಗ ಹಸ್ತ ಸಿರಿ ಪಾಂಡುರಂಗ ಕ್ಷೇತ್ರ
ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ
ಚಾರು ಗಯ ಚಂಪಕಾರುಣ್ಯ ಪಂಪಾಕ್ಷೇತ್ರ
ವೀರ ನಾರಾಯಣವೋ
ಕಾರುಣ್ಯ ಮಾಳ್ಪ ರಾಮನ ನಗರಿಯು ಮಾಯ
ಕೇದಾರ ಕುರುಕ್ಷೇತ್ರ
ಕೂರ್ಮನಿಧಿ ಸಾರಿದ ಬರುವ ಪುರುಷೋತ್ರಮ
ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ ||3||

ಉದಯಗಿರಿ ರಾಮನಾಥಪುರ ಕಾವೇರಿ
ಉದ್ಭವ ಆದಿ ಅನಂತ ಬಲಕ್ಷೇತ್ರ
ಪದುಮನಾಭ ಪುಂಡರೀಕಾಕ್ಷ ವಿಂಧ್ಯಾದ್ರಿ
ಸುಧಿಯೆಂದು ಕನ್ಯಾಕುಮಾರಿ
ಮಧುರಿ ಅಳಗಿರಿ ತಿಮ್ಮ ಬೇಲೂರಿ ಚೆನ್ನಿಗ
ಮುದದಿ ಮಹಂಕಾಳಿ ಹಸ್ತಿಪಳಿನಾಥ
ಕದಿರಿ ಮಂಗಳ ಗಿರಿತೋರವೀಯ ನರಸಿಂಗ
ಪದ ಮುರಳಿ ತ್ರಿವಿಕ್ರಮ ||4||

ಹರಿಹರ ಗಂಗಾಸಾಗರ ಕಪಿಲಕ್ಷೇತ್ರ ನಿರುಪಮಾದಿ
ಕೂರ್ಮ ನೆಲ್ಲನಪ
ತಿರುಪತಿ ಶೂರ್ಪಾಲಿ ಮಾಬಲೇಶ್ವರ ಭದ್ರಾಚಲ
ಧರಣೀಧರ ಚಾಪವಾಣಿ
ಪರಿಶುದ್ಧ ಭಕ್ತವತ್ಸಲ ಗೌರಿ ವಯ್ಯಾರ ವರಸಾರ
ಕ್ಷೇತ್ರ ಶ್ರೀನಿವಾಸನೆದ ನಿಧಿ
ಪರಮ ಸುಂದರ ಮನ್ನಾರಸ್ವಾಮಿ ಘನಶಾಮವರ
ಗೌರೀ ಮನೋಹರ ||5||

ಶಂಕರನಾರಾಯಣ ಉತ್ತಮರು ಗೋಕರ್ಣ
ಶಂಕರನ ಕ್ಷೇತ್ರ ಗೋಗರ್ಭ ಶೇತುವನ
ಶಂಖಮುಖಿ ಗಜೇಂದ್ರಮೋಕ್ಷ
ಗಜಾರಣ್ಯ ಓಂಕಾರನಾಥ ದೇವಾ
ಪಂಕಜಾಸದನ ಶಿಯ್ಯಾಳಿ ವೈದ್ಯನಾಥ ಠಂಕಾಳಾಂತರ
ವೇದಿ ಗೋಪಾಲನಿಧಿ
ಬಿಂಕದಲಿ ಯಿಪ್ಪ ಚಿಂತಾಮಣಿ ನರಸಿಂಹ
ಅಲಂಕಾರ ಮುಕ್ತಿ ಕ್ಷೇತ್ರ ||6||

ಸಂತಾನಗೋಪಾಲ ತಿಶಿಖ್ರಿನಾರಾಯಣ ಅನಂತಗಿರಿ
ಮಳೂರಪ್ರಮೇಯ ಶಿವಾ
ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ
ಇಂತು ಪಾನಕ್ಷೇತ್ರ ವಾತಗಿರಿ ನೀಲಾದ್ರಿ ಸಂತು
ನೀಲಾರಣ್ಯ ರಾಜವನ ನೈಮಿಷ
ಕಾಂತರದಕ್ಷ ವನಶಿದ್ಧ ವಟಪುಷ್ಪಗಿರಿ ಕಂತುಹರ ನಂಜು ಭೋಕ್ತ ||7||

ಕೂಲ ಪರ್ವತ ಕಣ್ವಮುನಿಕ್ಷೇತ್ರ ಪಿನಾಕಿಮಾಲಿ
ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ
ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ
ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ
ಮಹಾಲಕುಮಿ ರಘುನಾಥ ಶಿವಗಂಗೆ
ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ ||8||

ದೇಶದೊಳಗುಳ್ಳ ಪುಣ್ಯ ಕ್ಷೇತ್ರಗಳು ಯೆಣಿಸಿ
ಪೇಳಿದುದಕ್ಕೆ ಆರಿಗೆ ಅಳವಲ್ಲ
ಪ್ರದೋಷ ಕಾಲದಲಿ ಪ್ರಭಾತ ಕಾಲದಲಿ
ನೆನಸೋದು ಮಾನವರು
ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ-
ನಾಶ ವಿಜಯವಿಠ್ಠಲ ಬಂದು ಲೇಸಾಗಿ
ಪಾಲಿಸುವ ಕುಲಕೋಟಿಗಳ||9||
********

ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ||pa||
ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು
ಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು
ಕಾರುಣ್ಯನಿಧಿ ಹರಿ ಒಲಿವಾ ||a.pa||
ಶೇಷಪರ್ವತ ಗರುಡಾದ್ರಿ ಶ್ರೀ ಶೈಲ ಪ್ರಭಾಸ
ಕ್ಷೇತ್ರ ಮಧುರೆ ಗೋಕುಲ ವೃಂದಾವನ
ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ
ತೋಷದಲಿ ತೋತಾದ್ರಿ ಕುಂಭಘೋಣ
ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ
ದೋಷವರ್ಜಿತ ಝಲ್ಲಿಕಾರಣ್ಯ ಸೇತು
ದರ್ಭಶಯನ ಮಧ್ಯಾರ್ಜುನ ||1||
ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ
ಚಿದಂಬರ ವೀರ ರಾಘವ ದೇವ
ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ
ಅಂದವಾದ ಛಾಯ ಅಳಕಾಪುರಿ ಕ್ಷೇತ್ರ
ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ
ಮಂದಮತಿ ಕಳೆವ ಘನಗಿರಿ ಕ್ಷೇತ್ರ ಧರ್ಮಪುರಿ
ಒಂದೊಂದು ಕೋಟೀಶ್ವರಾ ||2||
ಶ್ರೀರಂಗ ಹಸ್ತ ಸಿರಿ ಪಾಂಡುರಂಗ ಕ್ಷೇತ್ರ
ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ
ಚಾರು ಗಯ ಚಂಪಕಾರುಣ್ಯ ಪಂಪಾಕ್ಷೇತ್ರ
ವೀರ ನಾರಾಯಣವೋ
ಕಾರುಣ್ಯ ಮಾಳ್ಪ ರಾಮನ ನಗರಿಯು ಮಾಯ
ಕೇದಾರ ಕುರುಕ್ಷೇತ್ರ
ಕೂರ್ಮನಿಧಿ ಸಾರಿದ ಬರುವ ಪುರುಷೋತ್ರಮ
ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ ||3||
ಉದಯಗಿರಿ ರಾಮನಾಥಪುರ ಕಾವೇರಿ
ಉದ್ಭವ ಆದಿ ಅನಂತ ಬಲಕ್ಷೇತ್ರ
ಪದುಮನಾಭ ಪುಂಡರೀಕಾಕ್ಷ ವಿಂಧ್ಯಾದ್ರಿ
ಸುಧಿಯೆಂದು ಕನ್ಯಾಕುಮಾರಿ
ಮಧುರಿ ಅಳಗಿರಿ ತಿಮ್ಮ ಬೇಲೂರಿ ಚೆನ್ನಿಗ
ಮುದದಿ ಮಹಂಕಾಳಿ ಹಸ್ತಿಪಳಿನಾಥ
ಕದಿರಿ ಮಂಗಳ ಗಿರಿತೋರವೀಯ ನರಸಿಂಗ
ಪದ ಮುರಳಿ ತ್ರಿವಿಕ್ರಮ ||4||
ಹರಿಹರ ಗಂಗಾಸಾಗರ ಕಪಿಲಕ್ಷೇತ್ರ ನಿರುಪಮಾದಿ
ಕೂರ್ಮ ನೆಲ್ಲನಪ
ತಿರುಪತಿ ಶೂರ್ಪಾಲಿ ಮಾಬಲೇಶ್ವರ ಭದ್ರಾಚಲ
ಧರಣೀಧರ ಚಾಪವಾಣಿ
ಪರಿಶುದ್ಧ ಭಕ್ತವತ್ಸಲ ಗೌರಿ ವಯ್ಯಾರ ವರಸಾರ
ಕ್ಷೇತ್ರ ಶ್ರೀನಿವಾಸನೆದ ನಿಧಿ
ಪರಮ ಸುಂದರ ಮನ್ನಾರಸ್ವಾಮಿ ಘನಶಾಮವರ
ಗೌರೀ ಮನೋಹರ ||5||
ಶಂಕರನಾರಾಯಣ ಉತ್ತಮರು ಗೋಕರ್ಣ
ಶಂಕರನ ಕ್ಷೇತ್ರ ಗೋಗರ್ಭ ಶೇತುವನ
ಶಂಖಮುಖಿ ಗಜೇಂದ್ರಮೋಕ್ಷ
ಗಜಾರಣ್ಯ ಓಂಕಾರನಾಥ ದೇವಾ
ಪಂಕಜಾಸದನ ಶಿಯ್ಯಾಳಿ ವೈದ್ಯನಾಥ ಠಂಕಾಳಾಂತರ
ವೇದಿ ಗೋಪಾಲನಿಧಿ
ಬಿಂಕದಲಿ ಯಿಪ್ಪ ಚಿಂತಾಮಣಿ ನರಸಿಂಹ
ಅಲಂಕಾರ ಮುಕ್ತಿ ಕ್ಷೇತ್ರ ||6||
ಸಂತಾನಗೋಪಾಲ ತಿಶಿಖ್ರಿನಾರಾಯಣ ಅನಂತಗಿರಿ
ಮಳೂರಪ್ರಮೇಯ ಶಿವಾ
ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ
ಇಂತು ಪಾನಕ್ಷೇತ್ರ ವಾತಗಿರಿ ನೀಲಾದ್ರಿ ಸಂತು
ನೀಲಾರಣ್ಯ ರಾಜವನ ನೈಮಿಷ
ಕಾಂತರದಕ್ಷ ವನಶಿದ್ಧ ವಟಪುಷ್ಪಗಿರಿ ಕಂತುಹರ ನಂಜು ಭೋಕ್ತ ||7||
ಕೂಲ ಪರ್ವತ ಕಣ್ವಮುನಿಕ್ಷೇತ್ರ ಪಿನಾಕಿಮಾಲಿ
ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ
ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ
ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ
ಮಹಾಲಕುಮಿ ರಘುನಾಥ ಶಿವಗಂಗೆ
ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ ||8||
ದೇಶದೊಳಗುಳ್ಳ ಪುಣ್ಯ ಕ್ಷೇತ್ರಗಳು ಯೆಣಿಸಿ
ಪೇಳಿದುದಕ್ಕೆ ಆರಿಗೆ ಅಳವಲ್ಲ
ಪ್ರದೋಷ ಕಾಲದಲಿ ಪ್ರಭಾತ ಕಾಲದಲಿ
ನೆನಸೋದು ಮಾನವರು
ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ-
ನಾಶ ವಿಜಯವಿಠ್ಠಲ ಬಂದು ಲೇಸಾಗಿ
ಪಾಲಿಸುವ ಕುಲಕೋಟಿಗಳ||9||
****

Punya kshetrava smarisi dhanyaragiro ||pa||
Nimma | munne mikkadaga maha anyaya alidu anu
Gunyadallire bavadaranya dahisuvadu
Karunyanidhi hari oliva ||a.pa||
Seshaparvata garudadri sri Saila prabasa
Kshetra madhure gokula vrundavana
Nasika triyambaka mudgalakshetra parasara maganasrama
Toshadali totadri kumbagona
Varanasi baradvaja kshetra arunacala
Doshavarjita jallikaranya setu
Darbasayana madhyarjuna ||1||
Sundara silacaya jambukesvara mahanamdi
Chidambara vira ragava deva
Skanda nibbanasvami kartika kagasesha namda yekambaresa
Andavada caya alakapuri kshetra
Mandakini ippa sagara yayatigiri
Mandamati kaleva Ganagiri kshetra dharmapuri
Ondondu kotisvara ||2||
Sriranga hasta siri panduranga kshetra
Dvaraka simhadri nilakanthanidhi
Caru gaya champakarunya pampakshetra
Vira narayanavo
Karunya malpa ramana nagariyu maya
Kedara kurukshetra
Kurmanidhi sarida baruva purushotrama
Pushkara kshetra marakapuri canna ||3||
Udayagiri ramanathapura kaveri
Udbava Adi ananta balakshetra
Padumanaba pundarikaksha vimdhyadri
Sudhiyendu kanyakumari
Madhuri alagiri timma beluri cenniga
Mudadi mahankali hastipalinatha
Kadiri mangala giritoraviya narasimga
Pada murali trivikrama ||4||
Harihara gangasagara kapilakshetra nirupamadi
Kurma nellanapa
Tirupati surpali mabalesvara badracala
Dharanidhara capavani
Parisuddha Baktavatsala gauri vayyara varasara
Kshetra srinivasaneda nidhi
Parama sundara mannarasvami ganasamavara
Gauri manohara ||5||
Sankaranarayana uttamaru gokarna
Sankarana kshetra gogarba setuvana
Sankamuki gajendramoksha
Gajaranya omkaranatha deva
Pankajasadana siyyali vaidyanatha thankalantara
Vedi gopalanidhi
Binkadali yippa chintamani narasimha
Alankara mukti kshetra ||6||
Santanagopala tisikrinarayana anantagiri
Maluraprameya siva
Antakanage dvapuratirtha nivarti antu adisriranga
Intu panakshetra vatagiri niladri santu
Nilaranya rajavana naimisha
Kantaradaksha vanasiddha vatapushpagiri kantuhara nanju bokta ||7||
Kula parvata kanvamunikshetra pinakimali
Andadaliyippa nidhi madhavasvami
Melu gatikacala badari narasimha ravisetu gana muktesvara
Kaladuta gedda kshetra bavanigudi vyalanidhi
Mahalakumi ragunatha Sivagange
Balakrushna kshetra karavira pura visala vihangakshetra ||8||
Desadolagulla punya kshetragalu yenisi
Pelidudakke Arige alavalla
Pradosha kaladali prabata kaladali
Nenasodu manavaru
Misalamanadalli ananta janumada dosha vi-
Nasa vijayaviththala bandu lesagi
Palisuva kulakotigala||9||
****

just scroll down for other devaranama 

No comments:

Post a Comment