Friday, 27 December 2019

ಪರಮ ಹರುಷವಾಯಿತು ವಿಜಯರಾಯ ankita mohana vittala vijaya dasa stutih

ರಾಗ ಕಲ್ಯಾಣಿ       ಖಂಡಛಾಪುತಾಳ 

ಪರಮ ಹರುಷವಾಯಿತು ವಿಜಯರಾಯ
ಗುರುಗಳಂಘ್ರಿಯನೆ ಕಂಡು ||pa||

ಪರಿಪರಿ ಜನುಮದ ಥರಥರದಘಗಳುತಿರುಗಿ 
ನೋಡದಲೇವೆ ತೆರಳಿ ಪೋದವು ಯಿಂದು ||a.pa||

ಕಾನನದೊಳು ತಿರುಗಿ ತನ್ನ ಮಾತಿ-
ಯಾನು ಕಾಣದೆ ಚಿಂತಿಸಿ |
ಧೇನಿಸಿ ಅರಸಲಾಕ್ಷಣದೊಳಗವಳ ವತ್ಸತಾನು 
ಕೂಗಲು ಕಾಮಧೇನು ಒದಗಿದಂತೆ ||1||

ತರಣಿಯ ಕಿರಣದಿಂದ ತಪಿಸಿನೆರ 
ಬಾಯ ಬಿಡವುತ ಬಪ್ಪರನ |
ಕರವ ಪಿಡಿದು ಸುರತರುವಿನಡಿಯಲ್ಲಿ ಕು-
ಳ್ಳಿರಿಸಿ ಕುಡಿಯೆ ದಿವ್ಯ ಸರಸಿಯನಿತ್ತಂತೆ ||2||

ಧನವ ಪೋಗಾಡಿ ಕೊಂಡು ನರನು 
ಬಲುಮನ ಕ್ಲೇಶದಿಂದಿರಲು |
ಘನ ಮಹಿಮನೆ ನಮ್ಮ ಮೋಹನ ವಿಠಲ-
ವನ ಕೈಯ್ಯೊಳಗ ಚಿಂತಾಮಣಿಯನುಯಿತ್ತಂತೆ ||3||
***

parama haruShavAyitu vijayarAyagurugaLanGriyane kaMDu ||pa||

paripari janumada tharatharadaGagaLutirugi nODadalEve teraLi pOdavu yindu ||a.pa||

kAnanadoLu tirugi tanna mAti-yAnu kANade chintisi |
dhEnisi arasalAkShaNadoLagavaLa vatsatAnu kUgalu kAmadhEnu odagidante ||1||

taraNiya kiraNadinda tapisinera bAya biDavuta bapparana |
karava piDidu surataruvinaDiyalli ku-LLirisi kuDiye divya sarasiyanittante ||2||

dhanava pOgADi konDu naranu balumana klESadindiralu |
Gana mahimane namma mOhana viThala-vana kaiyyoLaga cintAmaNiyanuyittante ||3||
***

No comments:

Post a Comment