ಹರಿಯ ನೆನೆಯಿರೋ, ನಮ್ಮ
ಹರಿಯ ನೆನೆಯಿರೋ ||ಪ||
ಬರಿಯ ಮಾತನಾಡಿ ಬಾಯ
ಬರಡು ಮಾಡಿ ಕೆಡಲು ಬೇಡಿ ||ಅ||
ನಿತ್ಯವಲ್ಲ ಈ ಶರೀರವ-
ನಿತ್ಯವೆಂದು ನೋಡಿರಯ್ಯ
ಹೊತ್ತು ಕಳೆಯ ಬೇಡಿ ಕಾಲ
ಮೃತ್ಯು ಬಾಹೋದೀಗಲೆ
ಕಾಮ ಕ್ರೋಧಗಳನು ತೊರೆದು
ಕಾಮನಯ್ಯನ ಕಥೆಯ ಬರೆದು
ಪ್ರೇಮದಿಂದ ಭಜಿಸಿರಯ್ಯ
ಪಾಮರರಂತೆ ತಿರುಗದೆ
ಹಾಳು ಹರಟೆಯಾಡಿ ಮನವ
ಬೀಳುಮಾಡಿಕೊಳ್ಳಬೇಡಿ
ಏಳು ದಿನದ ಕಥೆಯ ಕೇಳಿ
ಏಳಿರೋ ವೈಕುಂಠಕೆ
ಮೆಟ್ಟೆ ಪುಣ್ಯ ಕ್ಷೇತ್ರವನ್ನು
ಸುಟ್ಟು ಹೋಗ್ವುದಯ್ಯ ಪಾಪ
ಮುಟ್ಟಿ ಭಜಿಸಿರಯ್ಯ ಪುರಂದರ
ವಿಟ್ಠಲನ್ನ ಚರಣವ
***
ಹರಿಯ ನೆನೆಯಿರೋ ||ಪ||
ಬರಿಯ ಮಾತನಾಡಿ ಬಾಯ
ಬರಡು ಮಾಡಿ ಕೆಡಲು ಬೇಡಿ ||ಅ||
ನಿತ್ಯವಲ್ಲ ಈ ಶರೀರವ-
ನಿತ್ಯವೆಂದು ನೋಡಿರಯ್ಯ
ಹೊತ್ತು ಕಳೆಯ ಬೇಡಿ ಕಾಲ
ಮೃತ್ಯು ಬಾಹೋದೀಗಲೆ
ಕಾಮ ಕ್ರೋಧಗಳನು ತೊರೆದು
ಕಾಮನಯ್ಯನ ಕಥೆಯ ಬರೆದು
ಪ್ರೇಮದಿಂದ ಭಜಿಸಿರಯ್ಯ
ಪಾಮರರಂತೆ ತಿರುಗದೆ
ಹಾಳು ಹರಟೆಯಾಡಿ ಮನವ
ಬೀಳುಮಾಡಿಕೊಳ್ಳಬೇಡಿ
ಏಳು ದಿನದ ಕಥೆಯ ಕೇಳಿ
ಏಳಿರೋ ವೈಕುಂಠಕೆ
ಮೆಟ್ಟೆ ಪುಣ್ಯ ಕ್ಷೇತ್ರವನ್ನು
ಸುಟ್ಟು ಹೋಗ್ವುದಯ್ಯ ಪಾಪ
ಮುಟ್ಟಿ ಭಜಿಸಿರಯ್ಯ ಪುರಂದರ
ವಿಟ್ಠಲನ್ನ ಚರಣವ
***
ರಾಗ ಶಂಕರಾಭರಣ. ಅಟ ತಾಳ (raga, taala may differ in audio)
Hariya neneyiro namma hariya neneyiro
Bariya matanadi baya baradu madi kedalu bedi
Nityavalla I sharira anityavendu nodirayya hottu
Kaleya bedi kala mrtyu bahodigale||1||
Kama krodhagalanu toredu kamanayyana katheya baredu
Premadinda bhajisirayya pamararante tirugade||2||
Halu harateyadi manava bilu madi kolla bedi
Elu dinada katheya keli eliro vaikunthake||3||
Mette punya ksetravannu suttu hogvudayya papa mutti
Bhajisirayya purandara vittalanna caranava||4||
***
pallavi
hariya neneyirO namma hariya neneyirO
anupallavi
bariya mAtanADi bAya baraDu mADi keDalu bEDi
caraNam 1
nityavalla I sharIra anityavendu nODirayya hottu kaLeya bEDi kAla mrtyu bAhOdIgale
caraNam 2
kAma krOdhagaLanu toredu kAmanayyana katheya baredu prEmadinda bhajisirayya pAmararante tirugade
caraNam 3
hALu haraTeyADi manava bILu mADi koLLa bEDi Elu dinada katheya kELi ElirO vaikuNThake
caraNam 4
meTTe puNya kSEtravannu suTTu hOgvudayya pApa muTTi bhajisirayya purandara viTTalanna caraNava
***
No comments:
Post a Comment